For Quick Alerts
ALLOW NOTIFICATIONS  
For Daily Alerts
 

IND vs ENG: 5ನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಬದಲು ಈತ ನಾಯಕನಾಗಬೇಕು ಎಂದ ಗವಾಸ್ಕರ್

ಸದ್ಯ ರಾಂಚಿಯಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 26ನೇ ಬಾರಿಗೆ 5 ವಿಕೆಟ್‌ಗಳ ಸಾಧನೆಯನ್ನು ಪೂರ್ಣಗೊಳಿಸಿದರು.

ಇದೇ ವೇಳೆ ಭಾರತೀಯ ಲೆಜೆಂಡ್ ಸುನಿಲ್ ಗವಾಸ್ಕರ್ ಅವರು ತಮಿಳುನಾಡು ಮೂಲದ ಸ್ಟಾರ್ ಆಫ್ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.

IND vs ENG: R Ashwin Should Replace Rohit As Captain for 5th Test Says Sunil Gavaskar

ಇತ್ತೀಚೆಗೆ, 500 ಟೆಸ್ಟ್ ವಿಕೆಟ್‌ಗಳ ಬೃಹತ್ ಹೆಗ್ಗುರುತನ್ನು ತಲುಪಿದ ರವಿಚಂದ್ರನ್ ಅಶ್ವಿನ್, ಇದೀಗ ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದರು. ರವಿಚಂದ್ರನ್ ಅಶ್ವಿನ್ ಸದ್ಯ 354 ವಿಕೆಟ್‌ಗಳನ್ನು ಹೊಂದಿದ್ದರೆ, ಅನಿಲ್ ಕುಂಬ್ಳೆ 350 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದರು.

ಸುನಿಲ್ ಗವಾಸ್ಕರ್ ಕೇವಲ ರವಿಚಂದ್ರನ್ ಅಶ್ವಿನ್ ಅವರನ್ನು ಕೇವಲ ಹೊಗಳದೆ, ರಾಂಚಿ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದರೆ ಧರ್ಮಶಾಲಾದಲ್ಲಿ ನಡೆಯುವ ಐದನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಬೇಕು. ಬಲಗೈ ಆಫ್ ಸ್ಪಿನ್ನರ್ ಅವರ ಕ್ರಿಕೆಟ್ ಸಾಧನೆಗಳಿಗಾಗಿ ನಾಯಕತ್ವದ ಗೌರವಕ್ಕೆ ಅರ್ಹರು ಎಂದು ಹೇಳಿದರು.

"ಸೋಮವಾರ ಭಾರತ ತಂಡ ಗೆಲ್ಲುತ್ತದೆ ಮತ್ತು ನೀವು ಐದನೇ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಧರ್ಮಶಾಲಾಕ್ಕೆ ಹೋಗುತ್ತೀರಿ, ರೋಹಿತ್ ಶರ್ಮಾ ನಿಮಗೆ ತಂಡವನ್ನು ಮುನ್ನಡೆಸಲು ಅನುವು ಮಾಡಿಕೊಡುತ್ತಾರೆ ಎಂದು ನಾನು ಭಾವಿಸುತ್ತೇನೆ".

IND vs ENG: R Ashwin Should Replace Rohit As Captain for 5th Test Says Sunil Gavaskar

"ಇದು ಅದ್ಭುತವಾದ ಸೂಚಕವಾಗಿದೆ, ಭಾರತೀಯ ಕ್ರಿಕೆಟ್‌ಗಾಗಿ ನೀವು ಮಾಡಿದ ಎಲ್ಲದಕ್ಕೂ ಗೌರವವಾಗಿದೆ," ಎಂದು ಮೂರನೇ ದಿನದ ಆಟ ಮುಗಿದ ನಂತರ ಜಿಯೋ ಸಿನಿಮಾದಲ್ಲಿ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಮಾತನಾಡುವಾಗ ಸುನಿಲ್ ಗವಾಸ್ಕರ್ ತಿಳಿಸಿದರು.

ಮಾಜಿ ದಿಗ್ಗಜನ ಸಲಹೆಯು ಹೃದಯಸ್ಪರ್ಶಿಯಾಗಿತ್ತು ಮತ್ತು ರವಿಚಂದ್ರನ್ ಅಶ್ವಿನ್ ತನ್ನ ಸೂಪರ್ ಸೀನಿಯರ್‌ಗೆ ಧನ್ಯವಾದಗಳನ್ನು ಅರ್ಪಿಸಿದರು. ಭಾರತ ತಂಡದ ನಾಯಕತ್ವ ವಹಿಸುವುದು ನನ್ನ ಆಲೋಚನೆಯಲ್ಲಿ ಇಲ್ಲ ಮತ್ತು ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಡಲು ಸಂತೋಷವಾಗಿದೆ ಎಂದು ಹೇಳುವ ಮೂಲಕ ಉತ್ತರಿಸಿದರು.

"ಸನ್ನಿ ಭಾಯ್, ನೀವು ತುಂಬಾ ಉದಾರವಾಗಿ ಮಾತನಾಡುತ್ತಿದ್ದೀರಿ, ತುಂಬಾ ಧನ್ಯವಾದಗಳು. ಆದಾಗ್ಯೂ, ಈ ಎಲ್ಲ ವಿಷಯಗಳ ಬಗ್ಗೆ ನಿರೀಕ್ಷೆಗಳಿಲ್ಲ, ನಾನು ಎಲ್ಲವನ್ನೂ ಮೀರಿದ್ದೇನೆ ಎಂದು ನಾನು ಭಾವಿಸುತ್ತೇನೆ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಈ ತಂಡದೊಂದಿಗೆ ಇರುವ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿದ್ದೇನೆ. ಇದು ಹೆಚ್ಚು ಕಾಲ ಉಳಿಯುತ್ತದೆ, ನಾನು ಸಂತೋಷವಾಗಿರುತ್ತೇನೆ," ಎಂದು ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದರು.

IND vs ENG: R Ashwin Should Replace Rohit As Captain for 5th Test Says Sunil Gavaskar

ಇನ್ನು ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ರವಿಚಂದ್ರನ್ ಅಶ್ವಿನ್ ತಮ್ಮನ್ನು ಟೆಸ್ಟ್‌ನಲ್ಲಿ ತವರಿನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ ಟೇಕರ್‌ಗಳಲ್ಲಿ ಹಿಂದಕ್ಕಿದರ ಕುರಿತು ಮಾತನಾಡುತ್ತಾ, ಆಫ್-ಸ್ಪಿನ್ನರ್ ಅಶ್ವಿನ್ ಹಿಂದೆ ಹೋಗುವುದನ್ನು ನೋಡಲು ನನಗೆ ಸಂತೋಷವಾಗಿದೆ ಎಂದು ಹೇಳಿದರು.

ಲೆಜೆಂಡರಿ ಲೆಗ್ ಸ್ಪಿನ್ನರ್ ಅಶ್ವಿನ್ ಅವರಂತಹ ಚಾಂಪಿಯನ್ ಬೌಲರ್‌ಗಳನ್ನು ಎಂದಿಗೂ ಕೈಬಿಡಲಾಗುವುದಿಲ್ಲ ಎಂದು ಹೇಳಿದರು ಮತ್ತು ಭಾರತ ತಂಡಕ್ಕೆ ರಾಂಚಿಯಲ್ಲಿ ಅಗತ್ಯವೆನಿಸಿದ್ದ ಐದು ವಿಕೆಟ್‌ಗಳ ಸಾಧನೆಯೊಂದಿಗೆ ಅವರು ಅದೇ ರೀತಿ ಸಾಬೀತುಪಡಿಸಿದ್ದಾರೆ ಎಂದರು.

"ಅಶ್ವಿನ್ ಅವರನ್ನು ಅಲ್ಲಿ ನೋಡುವುದು ಅದ್ಭುತವಾಗಿದೆ ಮತ್ತು ಅವರು ಅದನ್ನು ಮೀರಿ ಹೋಗುತ್ತಾರೆ ಎಂದು ನನಗೆ ಖಾತ್ರಿಯಿದೆ. ಅವರು ಭಾರತಕ್ಕಾಗಿ ಇನ್ನೂ ಸಾಕಷ್ಟು ಪಂದ್ಯಗಳನ್ನು ಆಡಬೇಕಾಗಿದೆ. ಆತನ ಮೇಲೆ ನಿರೀಕ್ಷೆಗಳು ಹೆಚ್ಚಿವೆ," ಎಂದು ಹೇಳಿದರು.

"ಆರಂಭಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ 5 ವಿಕೆಟ್ ತೆಗೆದುಕೊಳ್ಳದಿದ್ದಾಗ, ಜನರು ಇದ್ದಕ್ಕಿದ್ದಂತೆ ಅವನ ಫಾರ್ಮ್, ಆಕ್ಷನ್, ಅವನು ಏಕೆ ಬದಲಾಯಿಸುತ್ತಿದ್ದಾನೆ ಎಂದು ಮಾತನಾಡುತ್ತಾರೆ. ಆದರೆ ಚಾಂಪಿಯನ್ ಬೌಲರ್‌ಗಳು ಅದನ್ನು ಮಾಡುತ್ತಾರೆ. ಭಾರತಕ್ಕೆ ಹೆಚ್ಚು ಅಗತ್ಯವಿರುವ ಈ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಖಂಡಿತವಾಗಿಯೂ ಅದನ್ನು ಮಾಡಿದ್ದಾರೆ," ಎಂದು ಅನಿಲ್ ಕುಂಬ್ಳೆ ತಿಳಿಸಿದರು.

Story first published: Monday, February 26, 2024, 9:27 [IST]
Other articles published on Feb 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+