IND vs ENG: ಸೆಮಿಫೈನಲ್‌ನಲ್ಲೂ ಕಳಪೆಯಾಗಿ ಔಟಾದ ವಿರಾಟ್ ಕೊಹ್ಲಿ; ಸಮಾಧಾನಪಡಿಸಿದ ರಾಹುಲ್ ದ್ರಾವಿಡ್
ಗುರುವಾರ, ಜೂನ್ 27ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾದವು.
ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಸೆಮಿಫೈನಲ್‌ನಲ್ಲಿ ಕೇವಲ 9 ರನ್‌ಗಳಿಗೆ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಔಟಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇದೇ ವೇಳೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ಸಪ್ಪೆ ಮೊರೆ ಹಾಕಿ ಕುಳಿತಿದ್ದ ವಿರಾಟ್ ಕೊಹ್ಲಿಯನ್ನು ಸಮಾಧಾನಪಡಿಸಿದರು.

2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ವಿರಾಟ್ ಕೊಹ್ಲಿಯ ಲೀನ್ ಪ್ಯಾಚ್ ಮುಂದುವರೆದಿದ್ದು, ಈ ಟೂರ್ನಿಯಲ್ಲಿ ಯಾವುದೇ ಅರ್ಧಶತಕ ಗಳಿಸದಿರುವುದು ದೊಡ್ಡ ಚಿಂತೆಯಾಗಿದೆ. ಸಾಮಾನ್ಯವಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದ ಸ್ಟಾರ್ ಬ್ಯಾಟರ್, ಈ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಸೆಮಿಫೈನಲ್ ಪಂದ್ಯದ ಮೂರನೇ ಓವರ್‌ನಲ್ಲಿ ರೀಸ್ ಟೋಪ್ಲೆ ವಿರುದ್ಧ ಆಕ್ರಮಣಕಾರಿ ಶಾಟ್‌ಗೆ ಯತ್ನಿಸಿದ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಈ ಆರಂಭಿಕ ನಿರ್ಗಮನ ಕೇವಲ 19 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡ ಭಾರತ ತಂಡಕ್ಕೆ ಗಮನಾರ್ಹ ಹಿನ್ನೆಡೆ ಉಂಟಾಗಿತ್ತು.

ಈ ಐಸಿಸಿ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಮಾಜಿ ನಾಯಕ, 2024ರ ಟಿ20 ವಿಶ್ವಕಪ್‌ನುದ್ದಕ್ಕೂ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ದೂರವಿದ್ದಾರೆ.
ಆಕ್ರಮಣಶೀಲತೆ ಮತ್ತು ಸ್ಥಿರ ಬ್ಯಾಟಿಂಗ್ ನಡುವೆ ಸರಿಯಾದ ಸಮತೋಲನವನ್ನು ಕಂಡುಕೊಳ್ಳಲು ವಿರಾಟ್ ಕೊಹ್ಲಿ ಹೆಣಗಾಡಿದ್ದಾರೆ. ಇದು ಗಯಾನಾದಲ್ಲಿನ ಕಠಿಣ ಪಿಚ್‌ನಲ್ಲಿ ಮತ್ತೊಮ್ಮೆ ಸ್ಪಷ್ಟವಾಗಿ ಕಂಡುಬಂದಿದೆ.
ಕೇವಲ 9 ರನ್ ಗಳಿಸಿ ಔಟಾಗುವ ಮೊದಲು, ರೀಸ್ ಟೋಪ್ಲೆ ವಿರುದ್ಧ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ತಮ್ಮ ಪರಾಕ್ರಮ ತೋರಿಸಿದರು. ಆದಾಗ್ಯೂ, ಅದೇ ಓವರ್‌ನಲ್ಲಿ ದೊಡ್ಡ ಶಾಟ್ ಪುನರಾವರ್ತಿಸುವ ಅವರ ಆತುರದ ಪ್ರಯತ್ನವು ವಿಕೆಟ್ ಕೈಚೆಲ್ಲಲು ಕಾರಣವಾಯಿತು.
ಇದು ಮೊದಲ ಬಾರಿಗೆ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅರ್ಧಶತಕ ಗಳಿಸಲು ವಿಫಲರಾದರು. ಇದು ಇದೇ ರೀತಿಯ ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿನ ಅವರ ಹಿಂದಿನ ಪ್ರದರ್ಶನಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications