Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ರಾಹುಲ್‌ ಬ್ಯಾಟ್ಸ್‌ಮನ್‌ ಆಗಿ ಕಣಕ್ಕೆ: ಇಶಾನ್‌ಗೆ ಅವಕಾಶ ಸಾಧ್ಯತೆ

ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ವಿಭಿನ್ನ ವಿಕೆಟ್ ಕೀಪರ್‌ನನ್ನು ಆಯ್ಕೆ ಮಾಡಬಹುದು. ಆದರೆ ಕೆಎಲ್ ರಾಹುಲ್ ಬ್ಯಾಟ್ಸ್‌ಮನ್ ಆಗಿ ಆಡಲಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ಅವಕಾಶ ಪಡೆಯಬಹುದು. ಭಾರತದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ತಂಡದಿಂದ ಇಶಾನ್‌ ಕಿಶನ್‌ ಅವರನ್ನು ಕೈ ಬಿಟ್ಟಿದ್ದರು. ಜನವರಿ 25 ರಿಂದ ಹೈದರಾಬಾದ್‌ನಲ್ಲಿ ಪ್ರಾರಂಭವಾಗುವ ಟೆಸ್ಟ್ ಸರಣಿಗೆ ತಮ್ಮ ಲಭ್ಯತೆಯನ್ನು ಮಂಡಿಸಬಹುದು.

IND VS ENG: Star batsman KL Rahul to play as a specialist batter, Ishan Kishan set to take up wicketkeepers role

ಇಶಾನ್‌ ಕಿಶನ್‌ ನವೆಂಬರ್ 28 ರಂದು ಭಾರತಕ್ಕಾಗಿ ಕೊನೆಯ ಬಾರಿ ಆಡಿದ್ದರು. ಅಲ್ಲದೆ ರಣಜಿ ಟೂರ್ನಿಯಲ್ಲಿ ಇಶಾನ್‌ ಕಿಶನ್‌ ತಮ್ಮ ಕ್ಷಮತೆಯನ್ನು ಪ್ರದರ್ಶಿಸಿ ತಂಡಕ್ಕೆ ಮರಳುವ ಸೂಚನೆಯನ್ನು ನೀಡಿದ್ದಾರೆ. ಅಲ್ಲದೆ ಪದೆ ಪದೇ ಬೆಂಚ್ ಕಾಯ್ದು ಸುಸ್ತಾಗಿದ್ದ ಇಶಾನ್‌ ಕಿಶನ್ ಬೇಸರವಾಗಿ ತಂಡದಿಂದ ವಿಶ್ರಾಂತಿ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ರಾಹುಲ್ ದ್ರಾವಿಡ್ ಅಶಿಸ್ತಿನ ಕಾರಣದಿಂದ ಇಶಾನ್ ಅವರನ್ನು ಹೊರಗಿಟ್ಟಿಲ್ಲ ಎಂದು ಹೇಳಿದ್ದಾರೆ. ಇಶಾನ್ ಅವರೇ ರಜೆ ತೆಗೆದುಕೊಂಡಿದ್ದು, ಆಯ್ಕೆಗೆ ತಮ್ಮ ಲಭ್ಯತೆಯನ್ನು ಇನ್ನೂ ವ್ಯಕ್ತಪಡಿಸಿಲ್ಲ ಎಂದು ಅವರು ಹೇಳಿದರು.

IND VS ENG: Star batsman KL Rahul to play as a specialist batter, Ishan Kishan set to take up wicketkeepers role

ಇನ್ನು ಭಾರತದಲ್ಲಿ ಟರ್ನಿಂಗ್‌ ಪಿಚ್‌ಗಳು ಇದ್ದು ಈ ಪಿಚ್‌ಗಳಲ್ಲಿ ವಿಕೆಟ್‌ ಕೀಪಿಂಗ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ನುರಿತ ವಿಕೆಟ್‌ ಕೀಪರ್‌ನನ್ನು ಟೀಮ್ ಇಂಡಿಯಾ ಹುಡುಕುತ್ತಿದೆ. ಈ ವೇಳೆ ಕೆ.ಎಸ್‌ ಭರತ್‌ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇವರು ಭಾರತ ಎ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಮರಳುವ ವಿಶ್ವಾಸವನ್ನು ಹೊಂದಿದ್ದಾರೆ. ಇನ್ನು ಬ್ಯಾಕ್‌ಅಪ್ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್‌ ಅವರು ತಂಡವನ್ನು ಸೇರಿಕೊಳ್ಳಬಹುದು. ಇಶಾನ್ ದೇಶೀಯ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದೇ ಆದಲ್ಲಿ, ಇವರಿಗೆ ಮೊದಲ ಮಣೆ ಹಾಕುವ ಸಾಧ್ಯತೆ ಇದೆ.

ಟೀಮ್ ಮ್ಯಾನೇಜ್‌ಮೆಂಟ್ ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‌ನ ಒತ್ತಡದಿಂದ ಮುಕ್ತಗೊಳಿಸಲು ಬಯಸುತ್ತದೆ. ವಿಶೇಷವಾಗಿ ಭಾರತದ ಟರ್ನಿಂಗ್ ಪಿಚ್‌ಗಳಲ್ಲಿ ವಿಕೆಟ್‌ಕೀಪಿಂಗ್ ಮಾಡುವ ಸವಾಲನ್ನು ಪರಿಗಣಿಸಲಾಗಿದೆ. ಇತ್ತೀಚೆಗಿನ ಶಸ್ತ್ರಚಿಕಿತ್ಸೆಯ ನಂತರ ರಾಹುಲ್ ಹೆಚ್ಚಿನ ಒತ್ತಡಕ್ಕೆ ಒಳಗಾಗುವುದಿಲ್ಲ ಮತ್ತು ಬ್ಯಾಟಿಂಗ್‌ನತ್ತ ಮಾತ್ರ ಗಮನ ಹರಿಸಲು ಸಲಹೆ ನೀಡಿದ್ದಾರೆ. ರಾಹುಲ್ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದರು.

ರಾಹುಲ್‌ಗೆ ರಣಜಿ ಟ್ರೋಫಿ ಆಡದಂತೆ ಮತ್ತು ವಿಶ್ರಾಂತಿ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ. ಆದರೆ, ಶ್ರೇಯಸ್ ಅಯ್ಯರ್ ಅವರಿಗೆ ರಣಜಿ ಆಡಲು ಹೇಳಲಾಗಿದೆ ಮತ್ತು ಅವರು ಜನವರಿ 12 ರಿಂದ ಮುಂಬೈನಲ್ಲಿ ಆಂಧ್ರ ವಿರುದ್ಧ ಮುಂಬೈಯನ್ನು ಪ್ರತಿನಿಧಿಸಲಿದ್ದಾರೆ.

Story first published: Thursday, January 11, 2024, 10:40 [IST]
Other articles published on Jan 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+