IND vs ENG: ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ; ವಿಳಂಬ, ರದ್ದು, ಕಟ್-ಆಫ್ ಸಮಯ, ಡಿಎಲ್ಎಸ್ ನಿಯಮಗಳೇನು?
ಗುರುವಾರ, ಜೂನ್ 27ರಂದು ಗಯಾನಾದ ಪ್ರಾವಿಡೆನ್ಸ್‌ನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ರೋಚಕ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೆಣಸಾಡುತ್ತಿದೆ.
ಅಡಿಲೇಡ್‌ನಲ್ಲಿ 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿದ ಜೋಸ್ ಬಟ್ಲರ್ ನಾಯಕತ್ವದ ತಂಡದ ವಿರುದ್ಧ ಭಾರತ ತಂಡವು ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

ಟೀಮ್ ಇಂಡಿಯಾ ಇತ್ತೀಚಿಗೆ ನಿರ್ಭೀತ ಬ್ರಾಂಡ್ ಕ್ರಿಕೆಟ್ ಅನ್ನು ಆಡುತ್ತಿದ್ದು, ಇದು ಅಂತಿಮ ಸೂಪರ್ 8ರ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಹೇಗೆ ಮಣಿಸಿತು ಎಂಬುದು ಸ್ಪಷ್ಟವಾಗಿದೆ.
ಆದರೆ, ಜಾರ್ಜ್‌ಟೌನ್‌ನಲ್ಲಿನ ಪ್ರತಿಕೂಲ ಹವಾಮಾನವು ಪಂದ್ಯಕ್ಕೆ ಅಡ್ಡಿಪಡಿಸಬಹುದು ಅಥವಾ ಓವರ್ ಕಡಿತ ಮತ್ತು ಹೈ-ವೋಲ್ಟೇಜ್ ಪಂದ್ಯ ನಡೆಯುವುದನ್ನು ತಡೆಯಬಹುದು. ಎರಡನೇ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಗಯಾನಾದಲ್ಲಿ ಹವಾಮಾನ ಮುನ್ಸೂಚನೆಯು ಉತ್ತಮವಾಗಿಲ್ಲ.
ಗಯಾನಾ ನಗರದಲ್ಲಿ ರಾತ್ರಿಯಿಡೀ ಮಳೆಯಾಗಿದ್ದು, ಪಂದ್ಯದ ದಿನ ಬೆಳಿಗ್ಗೆಯೂ ಮಳೆ ಸುರಿದಿದೆ. ಮೈದಾನದ ಸಿಬ್ಬಂದಿ ಸಂಪೂರ್ಣ ಮೈದಾನವನ್ನು ಕವರ್ ಮಾಡದ ಕಾರಣ ಹೊರ ಮೈದಾನ ನೀರಿನಿಂದ ಒದ್ದೆಯಾಗಿದೆ. ಆದಾಗ್ಯೂ, ಗಯಾನಾದಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿನ ಒಳಚರಂಡಿ ವ್ಯವಸ್ಥೆಯು ಕೆರಿಬಿಯನ್ ದ್ವೀಪಗಳಲ್ಲಿ ಅತ್ಯುತ್ತಮವಾಗಿದೆ.
ಟಿ20 ವಿಶ್ವಕಪ್ ಎರಡನೇ ಸೆಮಿಫೈನಲ್ ಯಾವಾಗ ಮತ್ತು ಎಲ್ಲಿ ನಡೆಯಲಿದೆ?
2024ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಗುರುವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 10:30ರಿಂದ (ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ) ನಡೆಯಲಿದೆ.
ಭಾರತ vs ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್‌ಗೆ ಹವಾಮಾನ ಮುನ್ಸೂಚನೆ ಏನು?
ಪಂದ್ಯಾವಳಿಯುದ್ದಕ್ಕೂ ಮಳೆಯ ಮುನ್ಸೂಚನೆ ಇದೆ. ಹವಾಮಾನ ವರದಿ ಪ್ರಕಾರ, ಗಯಾನಾದ ಜಾರ್ಜ್‌ಟೌನ್‌ನಲ್ಲಿ ಮಧ್ಯಾಹ್ನದ ವೇಳೆಗೆ ತುಂತುರು ಮಳೆಯು ಭಾರೀ ಪ್ರಮಾಣದಲ್ಲಿ ಹರಿಯುವ ಸಾಧ್ಯತೆಯಿದೆ. ಟಾಸ್‌ಗೆ ನಿಗದಿತ ಸಮಯಕ್ಕಿಂತ ಎರಡು ಗಂಟೆಗಳಿಂದಲೂ ಮೊದಲು ಮಳೆ ಸುರಿಯುತ್ತಿದೆ.
ಎರಡನೇ ಸೆಮಿಫೈನಲ್‌ಗೆ ಮೀಸಲು ದಿನವಿದೆಯೇ?
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್‌ಗೆ ಯಾವುದೇ ಮೀಸಲು ದಿನವಿಲ್ಲ. ಆದಾಗ್ಯೂ, ಗಯಾನಾದಲ್ಲಿ ಗುರುವಾರ ಆಟವನ್ನು ಪೂರ್ಣಗೊಳಿಸಲು 250 ನಿಮಿಷಗಳ ಹೆಚ್ಚುವರಿ ಸಮಯ ಲಭ್ಯವಿದೆ.
2ನೇ ಟಿ20 ವಿಶ್ವಕಪ್ 2024ರ ಸೆಮಿಫೈನಲ್‌ಗೆ ಏಕೆ ಮೀಸಲು ದಿನವಿಲ್ಲ?
ಬಾರ್ಬಡೋಸ್‌ನಲ್ಲಿ ಶನಿವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 10:30ಕ್ಕೆ ಫೈನಲ್ ಪಂದ್ಯ ನಿಗದಿಯಾಗಿರುವುದರಿಂದ, ಗಯಾನಾದಲ್ಲಿ ಎರಡನೇ ಸೆಮಿಫೈನಲ್‌ಗೆ ಮೀಸಲು ದಿನವನ್ನು ನಿಗದಿಪಡಿಸದಿರಲು ಐಸಿಸಿ ನಿರ್ಧರಿಸಿದೆ.
ಕಟ್-ಆಫ್ ಸಮಯ ಮತ್ತು ಫಲಿತಾಂಶಕ್ಕಾಗಿ ಅಗತ್ಯವಿರುವ ಕನಿಷ್ಠ ಸಂಖ್ಯೆಯ ಓವರ್‌ಗಳೆಷ್ಟು?
20-ಓವರ್‌ಗಳ ಪಂದ್ಯದ ಕಟ್-ಆಫ್ ಸಮಯವನ್ನು ಭಾರತೀಯ ಕಾಲಮಾನ (ಶುಕ್ರವಾರ) ಬೆಳಿಗ್ಗೆ 12:10ರವರೆಗೆ ವಿಸ್ತರಿಸಲಾಗಿದೆ. 250 ನಿಮಿಷಗಳ ಹೆಚ್ಚುವರಿ ಸಮಯದ ಲಭ್ಯತೆಯು ಪೂರ್ಣ 40-ಓವರ್‌ಗಳ ಪಂದ್ಯವನ್ನು ಪ್ರಾರಂಭಿಸಲು ಅಂಪೈರ್‌ಗಳು ಮಧ್ಯರಾತ್ರಿಯವರೆಗೆ ಕಾಯಬಹುದು ಎಂದು ಖಚಿತಪಡಿಸಿದ್ದಾರೆ.
ಇತರ ಪಂದ್ಯಗಳಿಗಿಂತ ಭಿನ್ನವಾಗಿ, ಬೆಳಿಗ್ಗೆ 12:10 ರವರೆಗೆ ಓವರ್‌ಗಳನ್ನು ಕಳೆದುಕೊಳ್ಳಲು ಪ್ರಾರಂಭಿಸುವುದಿಲ್ಲ. ಅಂದರೆ ನಿಗದಿತ ಪ್ರಾರಂಭದ ಸಮಯದಿಂದ ನಾಲ್ಕು ಗಂಟೆ 10 ನಿಮಿಷಗಳವರೆಗೆ.
ಪ್ರತಿ ತಂಡಕ್ಕೆ 10-ಓವರ್‌ಗಳ ಪಂದ್ಯಕ್ಕೆ ಕಟ್-ಆಫ್ ಭಾರತೀಯ ಕಾಲಮಾನ ಬೆಳಿಗ್ಗೆ (ಶುಕ್ರವಾರ) 1:44 ವರೆಗೆ ಕಾಯಬೇಕು. ಫಲಿತಾಂಶಕ್ಕಾಗಿ ಕನಿಷ್ಠ ಓವರ್‌ಗಳ ಸಂಖ್ಯೆ 10 ಓವರ್‌ಗಳು. ಎರಡೂ ತಂಡಗಳು ತಲಾ ಕನಿಷ್ಠ 10 ಓವರ್‌ಗಳನ್ನು ಆಡಬೇಕಾಗುತ್ತದೆ.
ಇದು ಗುಂಪು ಹಂತ ಮತ್ತು ಸೂಪರ್ 8ರ ಹಂತದಿಂದ ಹೊರತಾಗಿದೆ. ಅಲ್ಲಿ ಫಲಿತಾಂಶಕ್ಕಾಗಿ ಪ್ರತಿ ತಂಡಕ್ಕೆ ಕೇವಲ ಐದು-ಓವರ್‌ಗಳು ಮಾತ್ರ ಇತ್ತು.
ಮಳೆಯಿಂದಾಗಿ ಪಂದ್ಯ ರದ್ದಾದರೆ ಯಾರು ಫೈನಲ್‌ಗೆ ಹೋಗುತ್ತಾರೆ?
ಒಂದು ವೇಳೆ ಸೆಮಿಫೈನಲ್ ರದ್ದು ಅಥವಾ ಫಲಿತಾಂಶವಿಲ್ಲದೆ ಹೋದರೆ, ಭಾರತ ತಂಡ ಫೈನಲ್‌ಗೆ ಮುನ್ನಡೆಯಲಿದೆ. ಏಕೆಂದರೆ, ಭಾರತ ಸೂಪರ್ 8ರ ಅಂಕಪಟ್ಟಿಯಲ್ಲಿ ಸೋಲು ಕಾಣದೆ ಅಗ್ರಸ್ಥಾನದಲ್ಲಿದೆ. ಸೂಪರ್ 8ರ ಹಂತದಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು.
ಟಿ20 ವಿಶ್ವಕಪ್ 2024ರ ಫೈನಲ್ ಯಾವಾಗ ಮತ್ತು ಮಳೆ ಬಂದರೆ ಮೀಸಲು ದಿನವಿದೆಯೇ?
ಶನಿವಾರ, ಜೂನ್ 29ರಂದು 2024ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಬಾರ್ಬಡೋಸ್‌ನಲ್ಲಿ ನಡೆಯಲಿದ್ದು, ಆಗಲೂ ಮಳೆಯಾಗುವ ಮುನ್ಸೂಚನೆ ಇದೆ.
ಆದರೆ, ಭಾನುವಾರದಂದು ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಎರಡೂ ದಿನಗಳಲ್ಲಿ ಪಂದ್ಯ ನಡೆಯುವುದು ಸಾಧ್ಯವಾಗದಿದ್ದರೆ, ಟ್ರೋಫಿಯನ್ನು ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು ಹಂಚಿಕೊಳ್ಳುತ್ತವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications