Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG: ಟೆಸ್ಟ್ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕಿ ಮತ್ತೊಂದು ಇತಿಹಾಸ ಬರೆದ ಅಶ್ವಿನ್

ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಗೆಲುವಿನ ಸನಿಹದಲ್ಲಿದೆ ಮತ್ತು 3-1 ಅಂತರದಲ್ಲಿ ಸರಣಿ ಗೆಲುವಿನ ಕನಸು ಕಾಣುತ್ತಿದೆ.

ಭಾನುವಾರ, ಫೆಬ್ರವರಿ 25ರಂದು ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡ 192 ರನ್‌ಗಳ ಗೆಲುವಿನ ಗುರಿ ನೀಡಿದ್ದು, ಸಾಧಾರಣ ಗುರಿ ಬೆನ್ನಟ್ಟಿರುವ ಭಾರತ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ ಮತ್ತು ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು, 152 ರನ್ ಗಳಿಸಬೇಕಿದೆ.

ಇದೇ ವೇಳೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತವರಿನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆದ ನಂತರ ಇತಿಹಾಸ ನಿರ್ಮಿಸಿದರು. ಭಾರತದಲ್ಲಿ ತಮ್ಮ 59ನೇ ಟೆಸ್ಟ್‌ ಪಂದ್ಯದಲ್ಲಿ 351ನೇ ವಿಕೆಟ್‌ನೊಂದಿಗೆ, ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ರವಿಚಂದ್ರನ್ ಅಶ್ವಿನ್ ಹಿಂದಿಕ್ಕಿದರು.

IND vs ENG: Ravichandran Ashwin Made History by Surpassing Anil Kumbles Record in Test Cricket

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕಾಂಪ್ಲೆಕ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ ಪಂದ್ಯದ 3ನೇ ದಿನದ ಭೋಜನ ವಿರಾಮದ ನಂತರದ ಅವಧಿಯಲ್ಲಿ ಅಶ್ವಿನ್ ಈ ಸಾಧನೆ ಮಾಡಿದರು.

ಬೆನ್ ಡಕೆಟ್ ಅವರನ್ನು ಔಟ್ ಮಾಡಿದ ನಂತರ ಅನಿಲ್ ಕುಂಬ್ಳೆ ಅವರ 350 ವಿಕೆಟ್‌ಗಳ ಸಂಖ್ಯೆಯನ್ನು ಸರಿಗಟ್ಟಿದರು. ನಂತರ ಒಲ್ಲಿ ಪೋಪ್ ಅವರನ್ನು ಡಕ್‌ಗೆ ಔಟ್ ಮಾಡುವ ಮೂಲಕ ರವಿಚಂದ್ರನ್ ಅಶ್ವಿನ್ ಅವರು ಮಾಜಿ ಸ್ಪಿನ್ನರ್ ದಾಖಲೆಯನ್ನು ಹಿಂದಿಕ್ಕಿದರು.

ಅನಿಲ್ ಕುಂಬ್ಳೆ ಅವರು ಭಾರತದಲ್ಲಿ ಆಡಿದ 63 ಟೆಸ್ಟ್ ಪಂದ್ಯಗಳಲ್ಲಿ 24.88ರ ಸರಾಸರಿಯಲ್ಲಿ 350 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇನ್ನು ರವಿಚಂದ್ರನ್ ಅಶ್ವಿನ್ ಸ್ವದೇಶದಲ್ಲಿ ಆಡಿದ 59 ಟೆಸ್ಟ್‌ ಪಂದ್ಯಗಳಲ್ಲಿ 21.40ರ ಸರಾಸರಿಯಲ್ಲಿ 354 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಲ್ಲದೆ ರವಿಚಂದ್ರನ್ ಅಶ್ವಿನ್ ಅವರು 5-ವಿಕೆಟ್ ಗೊಂಚಲು ಗಳಿಕೆಯಲ್ಲಿಯೂ ಮಾಜಿ ಲೆಗ್ ಸ್ಪಿನ್ನರ್‌ನನ್ನು ಹಿಮ್ಮೆಟ್ಟಿಸಿದ್ದಾರೆ. ಅಶ್ವಿನ್ 26 ಬಾರಿ ಫಿಫರ್ಸ್ 5-ವಿಕೆಟ್ ಗೊಂಚಲು ಪಡೆದಿದ್ದರೆ, ಅನಿಲ್ ಕುಂಬ್ಳೆ 25 ಬಾರಿ 5-ವಿಕೆಟ್ ಗೊಂಚಲು ಹೊಂದಿದ್ದಾರೆ.

ಆದಾಗ್ಯೂ, ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಏಳು ಬಾರಿ 10-ವಿಕೆಟ್‌ ಗೊಂಚಲು ಪಡೆದಿದ್ದರೆ, ರವಿಚಂದ್ರನ್ ಅಶ್ವಿನ್ ತಮ್ಮ ಹೆಸರಿಗೆ 6 ಬಾರಿ 10-ವಿಕೆಟ್‌ ಗೊಂಚಲು ಗಳಿಸಿದ್ದಾರೆ.

ಇದೇ ವೇಳೆ ರವಿಚಂದ್ರನ್ ಅಶ್ವಿನ್ ಅವರು ಮುತ್ತಯ್ಯ ಮುರಳೀಧರನ್, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಮತ್ತು ಅನಿಲ್ ಕುಂಬ್ಳೆ ನಂತರ ತವರಿನಲ್ಲಿ 350 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದ 5ನೇ ಬೌಲರ್ ಎನಿಸಿಕೊಂಡರು.

IND vs ENG: Ravichandran Ashwin Made History by Surpassing Anil Kumbles Record in Test Cricket

ತವರಿನಲ್ಲಿ 350ಕ್ಕೂ ಅಧಿಕ ಟೆಸ್ಟ್ ವಿಕೆಟ್‌ ಪಡೆದಿರುವ ಬೌಲರ್‌ಗಳು

ಮುತ್ತಯ್ಯ ಮುರಳೀಧರನ್ - 73 ಟೆಸ್ಟ್‌ ಪಂದ್ಯಗಳಿಂದ 493 ವಿಕೆಟ್

ಜೇಮ್ಸ್ ಆಂಡರ್ಸನ್ - 105 ಟೆಸ್ಟ್‌ ಪಂದ್ಯಗಳಿಂದ 434 ವಿಕೆಟ್

ಸ್ಟುವರ್ಟ್ ಬ್ರಾಡ್ - 98 ಟೆಸ್ಟ್‌ ಪಂದ್ಯಗಳಿಂದ 398 ವಿಕೆಟ್‌

ಆರ್ ಅಶ್ವಿನ್ - 59 ಟೆಸ್ಟ್‌ ಪಂದ್ಯಗಳಿಂದ 354 ವಿಕೆಟ್

ಅನಿಲ್ ಕುಂಬ್ಳೆ - 63 ಟೆಸ್ಟ್‌ ಪಂದ್ಯಗಳಿಂದ 350 ವಿಕೆಟ್

ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ ಪಡೆದ ಬೌಲರ್‌ಗಳು

  • ರವಿಚಂದ್ರನ್ ಅಶ್ವಿನ್ - 354
  • ಅನಿಲ್ ಕುಂಬ್ಳೆ - 350
  • ಹರ್ಭಜನ್ ಸಿಂಗ್ - 265
  • ಕಪಿಲ್ ದೇವ್ - 219
  • ರವೀಂದ್ರ ಜಡೇಜಾ - 211

IND vs ENG: ಇಂಗ್ಲೆಂಡ್ ವಿರುದ್ಧ ಡಬಲ್ ಸಾಧನೆ ಮಾಡಿ ಗ್ಯಾರಿ ಸೋಬರ್ಸ್ ದಾಖಲೆ ಸರಿಗಟ್ಟಿದ ಅಶ್ವಿನ್

ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ರವಿಚಂದ್ರನ್ ಅಶ್ವಿನ್

ಇದಕ್ಕೂ ಮೊದಲು, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಹೆಗ್ಗುರುತನ್ನು ಗಳಿಸಿದ ಅತ್ಯಂತ ವೇಗದ ಭಾರತೀಯ ಎನಿಸಿದರು. ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ಅಲ್ಲದೆ, ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಅನಿಲ್ ಕುಂಬ್ಳೆ, ಗ್ಲೆನ್ ಮೆಕ್‌ಗ್ರಾತ್, ಕರ್ಟ್ನಿ ವಾಲ್ಷ್ ಮತ್ತು ನಾಥನ್ ಲಿಯಾನ್ ನಂತರ 500ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದ 9ನೇ ಆಟಗಾರರಾಗಿದ್ದಾರೆ.

ಅಶ್ವಿನ್ ಅವರು 2 ತಂಡಗಳ ನಡುವಿನ ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಪರ ಅಧಿಕ ವಿಕೆಟ್ ಟೇಕರ್ ಆದರು. ವಿಶಾಖಪಟ್ಟಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ವೇಳೆ ಬಿಎಸ್ ಚಂದ್ರಶೇಖರ್ ಅವರನ್ನು ಹಿಂದಿಕ್ಕಿದ್ದರು.

ರವಿಚಂದ್ರನ್ ಅಶ್ವಿನ್ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಜೇಮ್ಸ್ ಆಂಡರ್ಸನ್ ನಂತರ 100ಕ್ಕೂ ಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರರಾದರು.

Story first published: Sunday, February 25, 2024, 18:00 [IST]
Other articles published on Feb 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+