For Quick Alerts
ALLOW NOTIFICATIONS  
For Daily Alerts
 

ಕೌಟುಂಬಿಕ ವಿವಾದ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ರಿವಾಬಾಗೆ ಅರ್ಪಿಸಿದ ರವೀಂದ್ರ ಜಡೇಜಾ

ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ತಂದೆಯು ತಮ್ಮ ಕುಟುಂಬದಲ್ಲಿನ ಬಿರುಕಿಗೆ ಸೊಸೆ ರಿವಾಬಾ ಜಡೇಜಾ ಕಡೆ ಬೆರಳು ತೋರಿಸಿದ್ದರು ಮತ್ತು ಇದನ್ನು ಸ್ವತಃ ಕ್ರಿಕೆಟಿಗ ತಳ್ಳಿಹಾಕಿದ್ದರು.

ಈ ವಿವಾದದ ಕೆಲವು ದಿನಗಳ ನಂತರ, ಭಾರತೀಯ ಆಲ್‌ರೌಂಡರ್ ರವೀಂದ್ರ ಜಡೇಜಾ ರಾಜ್‌ಕೋಟ್‌ನಲ್ಲಿ ತನಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನ ಪತ್ನಿಗೆ ಅರ್ಪಿಸಿದನು. ತನಗೆ ಮಾನಸಿಕ ಬೆಂಬಲವನ್ನು ನೀಡಿದ ಅವಳು ನನ್ನನ್ನು ಪ್ರೇರೇಪಿಸುತ್ತಾಳೆ ಎಂದು ಹೇಳಿದರು.

IND vs ENG: Ravindra Jadeja Dedicates Man of the Match Award to His Wife Rivaba After Rajkot Test

ರಾಜ್‌ಕೋಟ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5-ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 434 ರನ್‌ಗಳ ಗೆಲುವು ಸಾಧಿಸುವಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಕೊಡುಗೆ ಪ್ರಮುಖವಾಗಿತ್ತು.

ರವಿಚಂದ್ರನ್ ಅಶ್ವಿನ್ ನಂತರ ಟೆಸ್ಟ್ ಪಂದ್ಯವೊಂದರಲ್ಲಿ ಶತಕ ಬಾರಿಸಿ 5 ವಿಕೆಟ್ ಪಡೆದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ರಾಜ್‌ಕೋಟ್‌ ತವರಿನ ಹೀರೋ ರವೀಂದ್ರ ಜಡೇಜಾ ಪಾತ್ರರಾದರು.

IND vs ENG: Ravindra Jadeja Dedicates Man of the Match Award to His Wife Rivaba After Rajkot Test

ರವೀಂದ್ರ ಜಡೇಜಾ ಅವರು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು 2ನೇ ಇನ್ನಿಂಗ್ಸ್‌ನಲ್ಲಿ ತಮ್ಮ ತವರಿನ ಪ್ರೇಕ್ಷಕರ ಮುಂದೆ ಆಡಿದ 2ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ಸಾಧನೆಗಾಗಿ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು.

ರವೀಂದ್ರ ಜಡೇಜಾ ಅವರು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು 2ನೇ ಇನ್ನಿಂಗ್ಸ್‌ನಲ್ಲಿ ತಮ್ಮ ತವರಿನ ಪ್ರೇಕ್ಷಕರ ಮುಂದೆ ಆಡಿದ 2ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ಸಾಧನೆಗಾಗಿ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಯಶಸ್ವಿ ಜೈಸ್ವಾಲ್ ದ್ವಿಶತಕ ಬಾರಿಸಿದರೆ, ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕನ ಆಟವಾಡಿದರು. ಆದರೆ ಪಂದ್ಯದ ತೀರ್ಪುಗಾರರು ರವೀಂದ್ರ ಜಡೇಜಾ ಅವರನ್ನು ಪಂದ್ಯದ ಆಟಗಾರ ಗೌರವಕ್ಕೆ ಆಯ್ಕೆ ಮಾಡಿದರು. ಏಕೆಂದರೆ ಬ್ಯಾಟ್ ಮತ್ತು ಬೌಲಿಂಗ್‌ನಲ್ಲಿ ತಂಡಕ್ಕೆ ಆಲ್‌ರೌಂಡರ್ ಕೊಡುಗೆ ನೀಡಿದರು.

"ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಕಬಳಿಸುವುದು ವಿಶೇಷ ಅನುಭವವಾಗಿದೆ. ಮತ್ತು ಅದೇ ಟೆಸ್ಟ್‌ ಪಂದ್ಯದಲ್ಲಿ ಶತಕ ಮತ್ತು 5 ವಿಕೆಟ್‌ಗಳ ಸಾಧನೆಯು ವಿಶೇಷವಾಗಿದೆ," ಎಂದು ರವೀಂದ್ರ ಜಡೇಜಾ ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.

"ಇದು ನನ್ನ ತವರು ಮೈದಾನದಲ್ಲಿ ಪಂದ್ಯದ ಆಟಗಾರ ಪ್ರಶಸ್ತಿ ವಿಶೇಷವಾಗಿದೆ. ನಾನು ಈ ಪ್ರಶಸ್ತಿಯನ್ನು ನನ್ನ ಹೆಂಡತಿಗೆ ಅರ್ಪಿಸಲು ಬಯಸುತ್ತೇನೆ. ಅವಳು ಮಾನಸಿಕವಾಗಿ ತೆರೆಮರೆಯಲ್ಲಿ ಶ್ರಮಿಸುತ್ತಿದ್ದಾಳೆರೆ. ಆಕೆ ಯಾವಾಗಲೂ ನನಗೆ ಆತ್ಮವಿಶ್ವಾಸವನ್ನು ನೀಡುತ್ತಾರೆ," ಎಂದು ರವೀಂದ್ರ ಜಡೇಜಾ ತಿಳಿಸಿದರು.

ಗಮನಾರ್ಹವೆಂದರೆ, ಗುಜರಾತ್‌ನ ಭಾರತೀಯ ಜನತಾ ಪಕ್ಷದ ಶಾಸಕರೂ ಆಗಿರುವ ರಿವಾಬಾ ಜಡೇಜಾ, ಅವರು ತಿಂಗಳ ಆರಂಭದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕೌಟುಂಬಿಕ ವೈಯಕ್ತಿಕ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ವರದಿಗಾರನ ವಿರುದ್ಧ ವಾಗ್ದಾಳಿ ನಡೆಸಿದ್ದರು.

2016ರಲ್ಲಿ ರವೀಂದ್ರ ಜಡೇಜಾ ಅವರು ರಿವಾಬಾ ಅವರನ್ನು ವಿವಾಹವಾದ ಕೆಲವೇ ತಿಂಗಳುಗಳಲ್ಲಿ ರವೀಂದ್ರ ಜಡೇಜಾ ಮತ್ತು ತಮ್ಮ ನಡುವಿನ ಸಂಬಂಧವು ಹದಗೆಟ್ಟಿದೆ ಎಂದು ಅವರ ತಂದೆ ಅನಿರುದ್ಧ್‌ಸಿನ್ಹ್ ಹೇಳಿದಾಗ ವಿವಾದ ಪ್ರಾರಂಭವಾಯಿತು.

ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರವೀಂದ್ರ ಜಡೇಜಾ ಕಟುವಾದ ಶಬ್ದಗಳಲ್ಲಿ ಪ್ರತಿಕ್ರಿಯಿಸಿದರು ಮತ್ತು ತನ್ನ ತಂದೆಯ ಆರೋಪಗಳನ್ನು ನಿರಾಕರಿಸಿದರು. ದಿನಪತ್ರಿಕೆಗೆ ನೀಡಿದ ತನ್ನ ತಂದೆಯ ಸಂದರ್ಶನವು 'ಅಸಂಬದ್ಧ' ಎಂದು ಹೇಳಿದರು.

Story first published: Monday, February 19, 2024, 15:26 [IST]
Other articles published on Feb 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+