For Quick Alerts
ALLOW NOTIFICATIONS  
For Daily Alerts
 

ನಾವು ಕಠಿಣ ಹೋರಾಟ ನಡೆಸಿದೆವು: ಎಡ್ಜ್‌ಬಾಸ್ಟನ್ ಸೋಲಿನ ಬಳಿಕ ತಂಡದ ಪೈಪೋಟಿಯನ್ನು ಹೊಗಳಿದ ಜಡೇಜಾ

IND vs ENG: Ravindra Jadeja posts motivating message after Edgbaston test loss

ಕೊರೋನಾವೈರಸ್ ಕಾರಣದಿಂದಾಗಿ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯ ಇದೇ ಜುಲೈ 1ರಿಂದ ಮರು ಆಯೋಜನೆಯಾಗಿತ್ತು. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಕಳೆದ ವರ್ಷ ಆಯೋಜನೆಯಾಗಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವಾದ ಈ ಹಣಾಹಣಿಯಲ್ಲಿ ಇಂಗ್ಲೆಂಡ್ ಪ್ರವಾಸಿ ಟೀಂ ಇಂಡಿಯಾ ವಿರುದ್ಧ ಎಡ್ಜ್‌ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದ ಅಂಗಳದಲ್ಲಿ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯನ್ನು ಡ್ರಾ ಮಾಡಿಕೊಂಡಿದೆ.

ಹೌದು, ಕಳೆದ ವರ್ಷ ನಡೆದಿದ್ದ ಮೊದಲ 4 ಪಂದ್ಯಗಳ ಪೈಕಿ ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ ಗೆದ್ದಿತ್ತು, ಇಂಗ್ಲೆಂಡ್ 1 ಪಂದ್ಯದಲ್ಲಿ ಜಯ ಸಾಧಿಸಿತ್ತು ಹಾಗೂ ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಈ ಮೂಲಕ 2-1 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದ ಟೀಮ್ ಇಂಡಿಯಾ ಮುಂದೂಡಲ್ಪಟ್ಟಿದ್ದ ಐದನೇ ಟೆಸ್ಟ್ ಪಂದ್ಯದಲ್ಲಿ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಸರಣಿ ಗೆಲ್ಲುವ ಅವಕಾಶವನ್ನು ಹೊಂದಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಜಯ ಸಾಧಿಸಿದ ಇಂಗ್ಲೆಂಡ್ ಟೀಮ್ ಇಂಡಿಯಾದ ಈ ಕನಸಿಗೆ ತಣ್ಣೀರು ಎರಚಿದ್ದು ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇನ್ನು ಇತ್ತಂಡಗಳ ನಡುವಿನ ಈ ಅಂತಿಮ ಟೆಸ್ಟ್ ಪಂದ್ಯ ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ವಿಫಲವಾದ ಕಾರಣ ಪಂದ್ಯ ಟೀಮ್ ಇಂಡಿಯಾ ಕೈತಪ್ಪಿತು. ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಆಡಿದ 222 ರನ್‌ಗಳ ಅಮೋಘ ಜತೆಯಾಟ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆದ್ದಿತ್ತು. ಒಂದೆಡೆ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಈ ಪಂದ್ಯವನ್ನು ಸೋತ ಬೇಸರವಿದ್ದರೆ, ಮತ್ತೊಂದೆಡೆ ಸರಣಿ ಗೆಲ್ಲಲಾಗದ ನೋವಂತೂ ಇದ್ದೇ ಇದೆ. ಇನ್ನು ರವೀಂದ್ರ ಜಡೇಜಾ ಸರಣಿ ಡ್ರಾ ಆದ ನಂತರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ತಂಡದ ಹೋರಾಟದ ಕುರಿತು ಪ್ರಶಂಸೆ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ.

ಸರಣಿಯಲ್ಲಿ ನಮ್ಮ ಹೋರಾಟ ಅತ್ಯುತ್ತಮವಾಗಿತ್ತು ಎಂದ ಜಡೇಜಾ

ಕ್ರಿಕೆಟ್ ಏರಿಳಿತಗಳನ್ನು ಹೊಂದಿರುವಂತಹ ಆಟ, ತಂಡಕ್ಕೆ ಕೊಡುಗೆ ನೀಡುವುದು ಯಾವಾಗಲೂ ಉತ್ತಮ ಭಾವನೆಯಿಂದ ಕೂಡಿರಲಿದೆ, ಈ ಸರಣಿ ಕಠಿಣವಾದ ಹೋರಾಟಗಳಿಂದ ಕೂಡಿತ್ತು ಹಾಗೂ ನಮ್ಮ ಪೈಪೋಟಿ ಉತ್ತಮವಾಗಿತ್ತು ಎಂದು ರವೀಂದ್ರ ಜಡೇಜಾ ಬರೆದುಕೊಂಡು ತಂಡದ ಪ್ರದರ್ಶನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಥಮ ಓವರ್‌ಸೀಸ್ ಶತಕ ಬಾರಿಸಿದ ಜಡೇಜಾ

ಪ್ರಥಮ ಓವರ್‌ಸೀಸ್ ಶತಕ ಬಾರಿಸಿದ ಜಡೇಜಾ

ಅಂತಿಮ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 194 ಎಸೆತಗಳಿಗೆ 104 ರನ್ ಬಾರಿಸಿದ ರವೀಂದ್ರ ಜಡೇಜಾ ಇದೇ ಮೊದಲ ಬಾರಿಗೆ ಓವರ್‌ಸೀಸ್ ಶತಕ ಬಾರಿಸಿದ ಸಾಧನೆಯನ್ನು ಮಾಡಿದರು. ಹಾಗೂ ರಿಷಭ್ ಪಂತ್ ಜೊತೆ 222 ರನ್‌ಗಳ ಅತ್ಯುತ್ತಮ ಜತೆಯಾಟವನ್ನಾಡಿದ ರವೀಂದ್ರ ಜಡೇಜಾ ಆರಂಭಿಕ ಆಘಾತ ಅನುಭವಿಸಿ ಕುಸಿತ ಕಂಡಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿದ್ದರು.

ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಸರಣಿಗಳಲ್ಲಿ ಕಣಕ್ಕಿಳಿಯಲಿದ್ದಾರೆ ಜಡ್ಡು

ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಸರಣಿಗಳಲ್ಲಿ ಕಣಕ್ಕಿಳಿಯಲಿದ್ದಾರೆ ಜಡ್ಡು

ಸದ್ಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮಿಂಚಿರುವ ರವೀಂದ್ರ ಜಡೇಜಾ ಮುಂಬರುವ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಬಹುದಿನಗಳ ನಂತರ ಏಕದಿನ ತಂಡ ಸೇರಿರುವ ಜಡೇಜಾ ತಮ್ಮ ಉತ್ತಮ ಪ್ರದರ್ಶನವನ್ನು ಅಲ್ಲಿಯೂ ಮುಂದುವರೆಸಿ ತಮ್ಮ ಸ್ಥಾನವನ್ನು ಗಟ್ಟಿಪಡಿಸಿಕೊಳ್ಳುವ ನಿರೀಕ್ಷೆಯಿದೆ.

Story first published: Wednesday, July 6, 2022, 15:39 [IST]
Other articles published on Jul 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+