IND vs ENG: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಫಾರ್ಮ್‌ಗೆ ಬಂದ ಜಡ್ಡು ದಾಖಲೆ ವಿವರ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಗುರುವಾರದಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಇತಿಹಾಸ ಸೃಷ್ಟಿಸಿದ್ದಾರೆ.ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಫಾರ್ಮ್‌ಗೆ ಮರಳಿರುವ ರವೀಂದ್ರ ಜಡೇಜಾ ತಮ್ಮ ಅದ್ಭುತ ಸ್ಪಿನ್ ಬೌಲಿಂಗ್ ಮೂಲಕ ಹಲವು ದಾಖಲೆಗಳನ್ನು ಮಾಡಿದ್ದಾರೆ. ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾ ಪರ ಜಡೇಕಾ ಪ್ರಮುಖ ಪಾತ್ರವಹಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದು ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು 9 ಓವರ್ ಬೌಲಿಂಗ್ ಮಾಡಿ 2.9 ರ ಎಕಾನಮಿಯಲ್ಲಿ ಕೇವಲ 26 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯಗಳಲ್ಲಿ ಇಲ್ಲಿವರೆಗೆ ರವೀಂದ್ರ ಜಡೇಜಾ 42 ವಿಕೆಟ್ ಉರುಳಿಸಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್ ತಂಡದ ಮಾಜಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಈ ದಾಖಲೆಯನ್ನು ಹೊಂದಿದ್ದರು. ಆಂಡರ್ಸನ್ ಭಾರತ ಮತ್ತು ಇಂಗ್ಲೆಂಡ್ ಏಕದಿನ ಇತಿಹಾಸದಲ್ಲಿ ಇದುವರೆಗೆ ಒಟ್ಟು 31 ಪಂದ್ಯಗಳನ್ನು ಆಡಿದ್ದು, 5.17 ರ ಎಕಾನಮಿ ಮತ್ತು 33.52 ರ ಸರಾಸರಿಯಲ್ಲಿ ಒಟ್ಟು 40 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನವೆಂದರೆ 18 ರನ್‌ಗೆ 4 ವಿಕೆಟ್.
ಜಡೇಜಾ ಭಾರತ ಮತ್ತು ಇಂಗ್ಲೆಂಡ್ ಏಕದಿನ ಇತಿಹಾಸದಲ್ಲಿ ಒಟ್ಟು 36 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 4.77 ರ ಆರ್ಥಿಕತೆ ಮತ್ತು 24.41 ರ ಸರಾಸರಿಯಲ್ಲಿ 39 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಾದ ನಂತರ ಮೂರನೇ ಸ್ಥಾನದಲ್ಲಿ ಆಂಡ್ರ್ಯೂ ಫ್ಲಿಂಟಾಫ್ (37), ಹರ್ಭಜನ್ ಸಿಂಗ್ (36) ನಾಲ್ಕು, ಜಾವಗಲ್ ಶ್ರೀನಾಥ್ ಮತ್ತು ಆರ್. ಅಶ್ವಿನ್ (35) ಕ್ರಮವಾಗಿ ಐದನೇ ಸ್ಥಾನದಲ್ಲಿದ್ದಾರೆ.
600ರ ಗಡಿ ಮುಟ್ಟಿದ ಜಡ್ಡು
ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 600 ವಿಕೆಟ್ ಪಡೆದ ಮೊದಲ ಭಾರತದ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಲು ಜಡೇಜಾ ಕೇವಲ ಮೂರು ವಿಕೆಟ್‌ಗಳ ದೂರದಲ್ಲಿದ್ದರು. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಜೋ ರೂಟ್, ಜಾಕೋಬ್ ಬೆಥೆಲ್ ಮತ್ತು ಆದಿಲ್ ರಶೀದ್ ಅವರನ್ನು ಜಡ್ಡು ಔಟ್ ಮಾಡಿದರು. ಈ ಮೂರು ವಿಕೆಟ್‌ಗಳೊಂದಿಗೆ 600 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಭಾರತದ 5ನೇ ಮತ್ತು ವಿಶ್ವದ 26ನೇ ಬೌಲರ್
ಆಗಿದ್ದಾರೆ.
ರವೀಂದ್ರ ಜಡೇಜಾ ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ 323 ವಿಕೆಟ್‌ಗಳು, ಏಕದಿನ ಕ್ರಿಕೆಟ್‌ನಲ್ಲಿ 223 ವಿಕೆಟ್‌ಗಳು ಮತ್ತು ಟಿ20 ಕ್ರಿಕೆಟ್‌ನಲ್ಲಿ 54 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರಿಗಿಂತ ಮೊದಲು ಅನಿಲ್ ಕುಂಬ್ಳೆ, ಜಹೀರ್ ಖಾನ್, ಹರ್ಭಜನ್ ಸಿಂಗ್ ಮತ್ತು ರವಿಚಂದ್ರನ್ ಅಶ್ವಿನ್ ಈ ಸಾಧನೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೋ ರೂಟ್ ಅವರನ್ನು ರನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆಯನ್ನು ರವೀಂದ್ರ ಜಡೇಜಾ ನಿರ್ಮಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ಬಾರಿಗೆ ಜಡೇಜಾ ಸ್ಪಿನ್ ಮೋಡಿಗೆ ಜೋ ರೂಟ್ ಬಲಿಯಾಗಿದ್ದಾರೆ. ಇನ್ನು ಜಡೇಜಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ಬೌಲರ್ ಟೀಮ್ ಸೌಥಿಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಟೀಮ್ ಸೌಥಿ 221 ವಿಕೆಟ್‌ಗಳನ್ನು ದಾಖಲೆಯನ್ನು ಹೊಂದಿದ್ದರು. ಇದೀಗ ಜಡ್ಡು 223 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications