For Quick Alerts
ALLOW NOTIFICATIONS  
For Daily Alerts
 

IND vs ENG: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲು ನಿರ್ಮಿಸಲು ಸಜ್ಜಾದ ರೋಹಿತ್ ಶರ್ಮಾ

ಭಾನುವಾರ, ಅಕ್ಟೋಬರ್ 29ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್‌ನ 29ನೇ ಪಂದ್ಯದಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಆತಿಥೇಯ ಭಾರತ ತಂಡ ಮುಖಾಮುಖಿಯಾಗುತ್ತಿದೆ.

ಇದೇ ವೇಳೆ 36 ವರ್ಷದ ರೋಹಿತ್ ಶರ್ಮಾ ವಿಶೇಷ ಮೈಲಿಗಲ್ಲು ನಿರ್ಮಿಸಲಿದ್ದು, ಭಾರತ ಪುರುಷರ ಕ್ರಿಕೆಟ್ ತಂಡದ ನಾಯಕನಾಗಿ 100ನೇ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ.

IND vs ENG: Rohit Sharma is All Set to Create Big Milestone in The Match Against England


ನಾಗ್ಪುರ ಮೂಲದ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಈ ಮೈಲುಗಲ್ಲು ತಲುಪಿದ ಏಳನೇ ಭಾರತೀಯ ನಾಯಕ ಎನಿಸಲಿದ್ದಾರೆ.

ಇದಕ್ಕೂ ಮುನ್ನ ಎಂಎಸ್ ಧೋನಿ (332 ಪಂದ್ಯ), ಮೊಹಮ್ಮದ್ ಅಜರುದ್ದೀನ್ (221 ಪಂದ್ಯ), ವಿರಾಟ್ ಕೊಹ್ಲಿ (213 ಪಂದ್ಯ), ಸೌರವ್ ಗಂಗೂಲಿ (196 ಪಂದ್ಯ), ಕಪಿಲ್ ದೇವ್ (108 ಪಂದ್ಯ) ಮತ್ತು ರಾಹುಲ್ ದ್ರಾವಿಡ್ (104 ಪಂದ್ಯ) 100 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಇತರ ಭಾರತೀಯ ನಾಯಕರಾಗಿದ್ದಾರೆ.

ರೋಹಿತ್ ಶರ್ಮಾ 2017ರಲ್ಲಿ ಮೊದಲ ಬಾರಿಗೆ ಭಾರತದ ನಾಯಕತ್ವ ವಹಿಸಿದ ನಂತರ 9 ಟೆಸ್ಟ್ ಪಂದ್ಯ, 39 ಏಕದಿನ ಪಂದ್ಯಗಳು ಮತ್ತು 51 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ.

IND vs ENG: Rohit Sharma is All Set to Create Big Milestone in The Match Against England

ಒಟ್ಟಾರೆಯಾಗಿ, ವಿಶ್ವ ಕ್ರಿಕೆಟ್‌ನಲ್ಲಿ 49 ಕ್ರಿಕೆಟಿಗರು ತಮ್ಮ ರಾಷ್ಟ್ರೀಯ ತಂಡಗಳನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.

2023ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಪಡೆ ಅದ್ಭುತ ಪ್ರದರ್ಶನ ನೀಡಿದ್ದು, ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಮೊದಲ ತಂಡವೆನಿಸಿಕೊಳ್ಳಲು ದೂರವಿಲ್ಲ. ಭಾರತ ತಂಡ ಎಲ್ಲಾ ಮೂರು ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಆಡಿದ ಎಲ್ಲಾ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಕಳಪೆ ವಿಶ್ವಕಪ್ ಅಭಿಯಾನ ಹೊಂದಿರುವ ಇಂಗ್ಲೆಂಡ್ ತಂಡದ ವಿರುದ್ಧ ರೋಹಿತ್ ಶರ್ಮಾ ಪಡೆ ತಮ್ಮ ಗೆಲುವಿನ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ. ಭಾರತ ತಂಡವು 2003ರ ನಂತರ 50 ಓವರ್‌ಗಳ ವಿಶ್ವಕಪ್ ಪಂದ್ಯದಲ್ಲಿ ಆಂಗ್ಲ ತಂಡವನ್ನು ಸೋಲಿಸಲು ಬಯಸುತ್ತದೆ.

2011ರ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿ ಟೈನಲ್ಲಿ ಅಂತ್ಯಗೊಂಡಿದ್ದವು. ನಂತರ, 2019ರಲ್ಲಿ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ 31 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿತ್ತು.

ಆ ಪಂದ್ಯದಲ್ಲಿ ರೋಹಿತ್ ಶರ್ಮಾ 15 ಬೌಂಡರಿಗಳೊಂದಿಗೆ 102 ರನ್ ಗಳಿಸಿದರು. ಆದರೆ 338 ರನ್ ಬೆನ್ನಟ್ಟಿದ ನಂತರ ಭಾರತವು ಐದು ವಿಕೆಟ್ ನಷ್ಟಕ್ಕೆ 306 ರನ್ ಗಳಿಸಲು ಶಕ್ತವಾಗಿತ್ತು.

ಕೊನೆಯ ಬಾರಿಗೆ ಭಾರತ ತಂಡವು 2003ರಲ್ಲಿ ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ಬ್ರಿಟಿಷ್ ತಂಡವನ್ನು ಸೋಲಿಸಿತ್ತು. ಅಲ್ಲಿ ಆಶಿಶ್ ನೆಹ್ರಾ ಅವರ ಸಾಹಸದ ನೆರವಿನಿಂದ ಭಾರತ ಗೆಲುವಿನ ಗೆರೆಯನ್ನು ದಾಟಿತು.

Story first published: Sunday, October 29, 2023, 11:55 [IST]
Other articles published on Oct 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+