For Quick Alerts
ALLOW NOTIFICATIONS  
For Daily Alerts
 

ಫಾರ್ಮ್‌ನಲ್ಲಿಲ್ಲ ಎಂದು ಆತನನ್ನು ಲಘುವಾಗಿ ಪರಿಗಣಿಸಲ್ಲ: ಭಾರತದ ಆಟಗಾರನ ಬಗ್ಗೆ ಬೆನ್‌ ಸ್ಟೋಕ್ಸ್ ಎಚ್ಚರಿಕೆ

IND Vs ENG: Rohit Sharma Is Dangerous Player We Are Not Take Him Lightly: Ben Stokes

ಸೂರ್ಯಕುಮಾರ ಯಾದವ್ ಮತ್ತು ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಬ್ಯಾಟರ್ ಗಳಾಗಿದ್ದಾರೆ. ಕೆಎಲ್ ರಾಹುಲ್ ಕೂಡ ಕಳೆದ ಎರಡು ಪಂದ್ಯಗಳಲ್ಲಿ ಸತತ ಅರ್ಧಶತಕ ಬಾರಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಆದರೆ, ನಾಯಕ ರೋಹಿತ್ ಶರ್ಮಾ ಮಾತ್ರ ಫಾರ್ಮ್‌ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ.

ನೆದರ್ಲ್ಯಾಂಡ್ಸ್ ವಿರುದ್ಧ ಅರ್ಧಶತಕ ಗಳಿಸಿದ ರೋಹಿತ್ ಶರ್ಮಾ ಸೂಪರ್ 12 ನ ಉಳಿದ ಪಂದ್ಯಗಳಲ್ಲಿ 4, 15, 2, ಮತ್ತು 15 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಸೆಮಿಫೈನಲ್‌ಗೆ ಮುನ್ನ ಭಾರತದ ಪಾಳಯದಲ್ಲಿ ಅವರ ಫಾರ್ಮ್‌ ತಂಡಕ್ಕೆ ಚಿಂತೆಯಾಗಿದೆ.

ಆದರೂ, ರೋಹಿತ್ ಶರ್ಮಾ ಪ್ರಮುಖ ಪಂದ್ಯಗಳಲ್ಲಿ ಉತ್ತಮ ರನ್ ಗಳಿಸಿರುವ ಇತಿಹಾಸವಿದ್ದು, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ ರನ್‌ ಬರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಆದರೆ, ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಯಾವುದೇ ಕಾರಣಕ್ಕೂ ರೋಹಿತ್ ಶರ್ಮಾ ಅವರನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಬೆನ್‌ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ನಾಯಕನನ್ನು ಕ್ಲಾಸ್ ಪ್ಲೇಯರ್ ಎಂದು ಅವರು ಬಣ್ಣಿಸಿದ್ದಾರೆ.

ಈ ಯುಗದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು

ಈ ಯುಗದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು

"ಅವರು ಈ ಯುಗದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು ಈ ಹಿಂದಿನ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡಿದ್ದಾರೆ ಎನ್ನುವುದನ್ನು ಪರಿಗಣಿಸಿ ಅವರನ್ನು ಲಘುವಾಗಿ ಭಾವಿಸಬಾರದು. ರೋಹಿತ್ ಶರ್ಮಾ ವಿಶ್ವದರ್ಜೆಯ ಆಟಗಾರ. ಅವರ ಬಗ್ಗೆ ನಾವು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಸೆಮಿಫೈನಲ್‌ನಂತಹ ದೊಡ್ಡ ಆಟಗಳಲ್ಲಿ ಅವರು ಹೇಗೆ ಆಡಿದ್ದಾರೆ ಎನ್ನುವುದನ್ನು ನೋಡಿದ್ದೇವೆ" ಎಂದು ಹೇಳಿದ್ದಾರೆ.

"ಅವರು ಇದನ್ನು ಅನೇಕ ಬಾರಿ ಮಾಡುವುದನ್ನು ನಾವು ನೋಡಿದ್ದೇವೆ. ವಿಶೇಷವಾಗಿ ಟಿ20 ಸ್ವರೂಪದಲ್ಲಿ ಅವರು ಅತ್ಯುತ್ತಮ ಆಟಗಾರರಾಗಿದ್ದಾರೆ. ನಾವು ಅವರನ್ನು ಲಘುವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ" ಎಂದು ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.

T20 World Cup 2022 Semifinal; ಪಾಕಿಸ್ತಾನ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ಅಭ್ಯಾಸದ ವೇಳೆ ರೋಹಿತ್ ಶರ್ಮಾಗೆ ಗಾಯ

ಅಭ್ಯಾಸದ ವೇಳೆ ರೋಹಿತ್ ಶರ್ಮಾಗೆ ಗಾಯ

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಟೀಂ ಇಂಡಿಯಾ ಭರ್ಜರಿಯಾಗಿ ಅಭ್ಯಾಸ ನಡೆಸುತ್ತಿದೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅಭ್ಯಾಸದ ವೇಳೆ ಮುಂಗೈಗೆ ಗಾಯ ಮಾಡಿಕೊಂಡಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ.

ಬ್ಯಾಟಿಂಗ್ ಅಭ್ಯಾಸದ ವೇಳೆ ಚೆಂಡು ಬಲ ಮುಂಗೈಗೆ ಬಡಿದ ಕಾರಣ ಅವರು ಗಾಯ ಮಾಡಿಕೊಂಡರು. ಆದರೂ, ಗಾಯದ ಸಮಸ್ಯೆ ತೀವ್ರವಾಗಿಲ್ಲ ಎನ್ನಲಾಗಿದ್ದು, ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೆ ಫಿಟ್ ಆಗಿರಲಿದ್ದಾರೆ.

ಕೊಹ್ಲಿಯನ್ನು ಹೊಗಳಿದ ಬೆನ್‌ಸ್ಟೋಕ್ಸ್

ಕೊಹ್ಲಿಯನ್ನು ಹೊಗಳಿದ ಬೆನ್‌ಸ್ಟೋಕ್ಸ್

ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಭಾರತೀಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವರ್ಷಗಳಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ತಮ್ಮದೇ ಛಾಪು ಮೂಡಿದ್ದಾರೆ ಎಂದು ಹೇಳಿದ್ದಾರೆ. ಅವರು ಕಳಪೆ ಫಾರ್ಮ್‌ನಲ್ಲಿದ್ದಾಗ ಹಲವರು ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು ನೋಡಿ ಆಶ್ಚರ್ಯವಾಯಿತು ಎಂದು ಇಂಗ್ಲೆಂಡ್ ಕ್ರಿಕೆಟಿಗ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2022 ರಲ್ಲಿ ಕೊಹ್ಲಿ ಅಸಾಧಾರಣ ಫಾರ್ಮ್‌ನಲ್ಲಿದ್ದಾರೆ. ಸೂಪರ್ 12 ಹಂತದ ಮುಕ್ತಾಯದ ನಂತರ ಅವರು ರನ್-ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐದು ಪಂದ್ಯಗಳಲ್ಲಿ, 123 ರ ಸರಾಸರಿಯಲ್ಲಿ ಮತ್ತು 138.98 ರ ಸ್ಟ್ರೈಕ್ ರೇಟ್‌ನಲ್ಲಿ 246 ರನ್‌ಗಳನ್ನು ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ ಅಂಕಿ ಅಂಶಗಳು ನಂಬಲಸಾಧ್ಯ

ವಿರಾಟ್ ಕೊಹ್ಲಿ ಅಂಕಿ ಅಂಶಗಳು ನಂಬಲಸಾಧ್ಯ

ನವೆಂಬರ್ 10, ಗುರುವಾರ ಅಡಿಲೇಡ್ ಓವಲ್‌ನಲ್ಲಿ 2022 ರ ಟಿ 20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಆಡಲಿದ್ದು, ಕೊಹ್ಲಿ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದೆ.

"ಅವರ ಅಂಕಿ ಅಂಶಗಳನ್ನು ನೋಡಿ, ಅದು ಎಷ್ಟು ನಂಬಲಸಾಧ್ಯ. ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಅಸಾಧ್ಯವಾದ ದಾಖಲೆಯನ್ನು ಮಾಡಿದ್ದಾರೆ. ಅವರಂತೆ ಇನ್ಯಾರಿಗೂ ರನ್ ಗಳಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದರು.

Story first published: Tuesday, November 8, 2022, 16:36 [IST]
Other articles published on Nov 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+