For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: 69 ವರ್ಷ ಹಳೆಯ ದಾಖಲೆ ಮುರಿದ ರಾಹುಲ್-ರೋಹಿತ್ ಜೋಡಿ

Ind vs Eng: Rohit Sharma, KL Rahul break 69-year-old record at Lords as openers
69 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ರೋಹಿತ್-ರಾಹುಲ್ ಜೊತೆಯಾಟ | Oneindia Kannada

ಲಂಡನ್, ಆಗಸ್ಟ್ 13: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಎರಡನೇ ಟೆಸ್ಟ್ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ದಿನದಾಟ ಅಂತ್ಯವಾಗಿದ್ದು ಭಾರತ ಉತ್ತಮ ಸ್ಥಿತಿಯಲ್ಲಿದೆ. ಭಾರತದ ಈ ಉತ್ತಮ ಸ್ಥಿತಿಗೆ ಆರಂಭಿಕ ಜೋಡಿಯೇ ಕಾರಣ ಎಂದರೆ ತಪ್ಪಾಗಲಾದರು. ಮೊದಲ ವಿಕೆಟ್‌ಗೆ ನೀಡಿದ 126 ರನ್‌ಗಳ ಜೊತೆಯಾಟ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಟೀಮ್ ಇಂಡಿಯಾ ಆರಂಭಿಕ ಆಟಗಾರರ ಈ ಜೊತೆಯಾಟ ಲಾರ್ಡ್ಸ್ ಅಂಗಳದಲ್ಲಿ ಭಾರತೀಯ ಆಟಗಾರರ 69 ವರ್ಷಗಳ ಹಿಂದಿನ ದಾಖಲೆಯನ್ನು ತಿದ್ದಿ ಬರೆಯುವಂತಾಗಿದೆ.

ಲಾರ್ಡ್ಸ್ ಅಂಗಳದಲ್ಲಿ ಭಾರತದ ಆರಂಭಿಕ ಜೋಡಿಯಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದು ಶತಕದ ಜೊತೆಯಾಟವನ್ನು ನೀಡುವ ಮೂಲಕ ಈ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ 1952ರಲ್ಲಿ ಭಾರತದ ಆರಂಭಿಕ ಜೋಡಿ ಕೊನೆಯ ಬಾರಿಗೆ ಶತಕದ ಜೊತೆಯಾಟವನ್ನು ನೀಡಿತ್ತು. ಅಂದು ವಿನೋದ್ ಮಂಕಡ್ ಹಾಗೂ ಪಂಕಜ್ ರಾಯ್ ಭಾರತದ ಪರವಾಗಿ ಆರಂಭೀಕರಾಗಿ ಕಣಕ್ಕಿಳಿದು 106 ರನ್‌ಗಳ ಆರಂಭಿಕ ಜೊತೆಯಾಟ ನೀಡಿತ್ತು. ಅದಾದ ಬಳಿಕ ಇದೇ ಮೊದಲ ಭಾರತಿಗೆ ಭಾರತೀಯ ಆರಂಭಿಕರು ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯ ಲಾರ್ಡ್ಸ ಅಂಗಳದಲ್ಲಿ ನಡೆಯುತ್ತಿದೆ. ಈ ಪಂದ್ಯದ ಆರಂಭದಲ್ಲಿಯೂ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಪಂದ್ಯ ಕೆಲ ಕಾಲ ತಡವಾಗಿ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಟಾಸ್ ಗೆದ್ದಿದ್ದು ಭಾರತ ತಂಡವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಆದರೆ ಈ ಸವಾಲನ್ನು ಭಾರತೀಯ ದಾಂಡಿಗರು ದಿಟ್ಟವಾಗಿ ಎದುರಿಸಿದ್ದಾರೆ. ಇಂಗ್ಲೆಂಡ್‌ನ ಬೌಲಿಂಗ್ ದಾಳಿಯ ವಿರುದ್ಧ ಭಾರತೀಯ ಬ್ಯಾಟ್ಸ್‌ಮನ್‌ಗಳು ಸವಾರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರಂಭಿಕ 15 ಓವರ್‌ಗಳಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಸಾಕಷ್ಟು ಎಚ್ಚರಿಕೆಯಿಂದ ಪ್ರದರ್ಶನವನ್ನು ನೀಡಿದರು. ಬಳಿಕ ಅನುಭವಿ ರೋಹಿತ್ ಶರ್ಮಾ ತಮ್ಮ ಆಟಕ್ಕೆ ವೇಗವನ್ನು ನೀಡಿದರು. ಸರಾಗವಾಗಿ ರನ್ ಗಳಿಸಲು ಆರಂಭಿಸಿದರು. ಜೇಮ್ಸ್ ಆಂಡರ್ಸನ್, ಮಾರ್ಕ್ ವುಡ್, ಸಾಮ್ ಕರನ್ ವಿರುದ್ಧ ರೋಹಿತ್ ಅತ್ಯುತ್ತಮ ಆಟವನ್ನು ಆಡಿದರು.

ಇಂಗ್ಲೆಂಡ್ ತಂಡದ ವೇಗಿಗಳ ವಿರುದ್ಧ ರೋಹಿತ್-ರಾಹುಲ್ ಜೋಡಿ ನಿಯಂತ್ರಣದ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಪ್ರವಾಸಿ ಭಾರತಕ್ಕೆ ಅದ್ಭುತ ಆರಂಭ ದೊರೆಯಿತು. ರೋಹಿತ್ ಶರ್ಮಾ ಉತ್ತಮ ಆಟದ ಮೂಲಕ ಶತಕದ ಸನಿಹಕ್ಕೆ ತಲುಪಿದ್ದರು. ಆದರೆ ಅಂತಿಮವಾಗಿ 17 ರನ್‌ಗಳ ಕೊರತೆಯಿಂದ ರೋಹಿತ್ ಶತಕವನ್ನು ಕಳೆದುಕೊಂಡರು. ಆಡರ್ಸನ್ ಎಸೆತಕ್ಕೆ ಪ್ರತ್ಯುತ್ತರ ನೀಡಲು ವಿಫಲವಾದ ರೋಹಿತ್ ಶರ್ಮಾ 83 ರನ್‌ಗಳಿಗೆ ಔಟಾದರು. ಈ ಮೂಲಕ 126 ರನ್‌ಗಳಿಗೆ ಭಾರತದ ಆರಂಭಿಕ ಜೋಡಿಯ ಜೊತೆಯಾಟ ಅಂತ್ಯವಾಗಿತ್ತು.

ರೋಹಿತ್ ಶರ್ಮಾ ಒಟ್ಟು 145 ಎಸೆತಗಳನ್ನು ಎದುರಿಸಿ 83 ರನ್‌ಗಳನ್ನು ಗಳಿಸಿದ್ದರು. ಬಳಿಕ 44ನೇ ಓವರ್‌ನಲ್ಲಿ ಜೇಮ್ಸ್ ಆಂಡರ್ಸನ್ ರೋಹಿತ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಆತಿಥೇಯ ತಂಡಕ್ಕೆ ಆಂಡರ್ಸನ್ ಮೊದಲ ಯಶಸ್ಸು ನೀಡುವಲ್ಲಿ ಯಶಸ್ವಿಯಾದರು.

ಲಾರ್ಡ್ಸ್ ಟೆಸ್ಟ್‌ನಲ್ಲಿಯೂ ಭಾರತ ಮೊದಲ ದಿನದಾಟದಲ್ಲಿ ಸಂಪೂರ್ಣವಾಗಿ ತನ್ನ ಹಿಡಿತವನ್ನು ಭದ್ರಪಡಿಸಿಕೊಂಡಿದೆ. ಆರಂಭಿಕ ಆಟಗಾರ ಅಜೇಯ ಶತಕವನ್ನು ಪೂರೈಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ಅವರಿಗೆ ಅನುಭವಿ ಅಜಿಂಕ್ಯ ರಹಾನೆ ಕೂಡ ಸಾಥ್ ನೀಡುತ್ತಿದ್ದಾರೆ. ಕೆಎಲ್ ರಾಹುಲ್ 127 ರನ್‌ಗಳಿಸಿದ್ದರೆ ರಹಾನೆ 1 ರನ್‌ಗಳಿಸಿ ಎರಡನೇ ದಿನ ಆಟವನ್ನು ಮುಂದುವರಿಸಲಿದ್ದರೆ. ಇದಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ಕೂಡ ಉತ್ತಮ ಆಟವನ್ನು ಪ್ರದರ್ಶಿಸಿ ದೊಡ್ಡ ಮೊತ್ತವನ್ನು ಗಳಿಸುವ ನಿರೀಕ್ಷೆ ಮೂಡಿಸಿದ್ದರು. ಆದರೆ 42 ರನ್‌ಗಳಿಸಿದ್ದ ವೇಳೆ ವಿರಾಟ್ ಕೊಹ್ಲಿ ರಾಬಿನ್ಸನ್‌ಗೆ ವಿಕೆಟ್ ನೀಡಿ ಫೆವಿಲಿಯನ್‌ಗೆ ಸಾಗಿದರು. ಇನ್ನು ಅನುಭವಿ ಆಟಗಾರ ಪೂಜಾರ ಈ ಪಂದ್ಯದಲ್ಲಿಯೂ ಭಾರತದ ಪಾಲಿಗೆ ನಿರಾಸೆ ಮೂಡಿಸಿದ್ದಾರೆ. ಪೂಜಾರ ಕೇವಲ 9 ರನ್‌ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿದರು. ಈ ಮೂಲಕ ಭಾರತೀಯ ಅನುಭವಿ ಬ್ಯಾಟ್ಸ್‌ಮನ್‌ನ ಕಳಪೆ ಪ್ರದರ್ಶನ ಮುಂದುವರಿದಿದೆ.

Story first published: Friday, August 13, 2021, 12:25 [IST]
Other articles published on Aug 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+