For Quick Alerts
ALLOW NOTIFICATIONS  
For Daily Alerts
 

IND vs ENG: ವಿಶಾಖಪಟ್ಟಣಂನಲ್ಲಿ ರೋಹಿತ್ ಆರ್ಭಟ ಜೋರು: ಇಂಗ್ಲೆಂಡ್‌ಗೆ ಶುರುವಾಗಿದೆ ಹಿಟ್‌ಮ್ಯಾನ್ ಕಟ್ಟಿಹಾಕುವ ಟೆನ್ಷನ್

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಟೆಸ್ಟ್ ಸರಣಿಯ ಪಂದ್ಯ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 28 ರನ್‌ಗಳಿಂದ ಸೋಲು ಕಂಡಿದೆ. ಈ ಮೂಲಕ ಇಂಗ್ಲೆಂಡ್ ಪ್ರವಾಸವನ್ನು ಭರ್ಜರಿಯಾಗಿ ಆರಂಭಿಸಿದೆ. ಅಲ್ಲದೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 2 ರಿಂದ ನಡೆಯಲಿದೆ. ಎರಡೂ ತಂಡಗಳು ವಿಶಾಖಪಟ್ಟಣಂನಲ್ಲಿ ಮುಖಾಮುಖಿಯಾಗಲಿವೆ. ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಸರಣಿ ಸಮಬಲಗೊಳಿಸುವ ಉದ್ದೇಶದಿಂದ ವಿಶಾಖಪಟ್ಟಣಂನಲ್ಲಿ ಮೈದಾನಕ್ಕಿಳಿಯಲಿದೆ.

IND vs ENG: Rohit Shines in Visakhapatnam: England Feels the Pressure of Taming the Hitman

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅನುಭವಿಗಳ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ, ಮಿಡ್ಲ್ ಆರ್ಡರ್ ಬ್ಯಾಟರ್ ಕೆ.ಎಲ್ ರಾಹುಲ್‌, ನಾಲ್ಕನೇ ಕ್ರಮಾಂಕದಲ್ಲಿ ಆಡುವ ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮ್ಮದ್ ಶಮಿ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್‌ ಪಂದ್ಯದಲ್ಲಿ ಸ್ಥಿರವಾಗಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಅಂದ ಮಾತ್ರಕ್ಕೆ ಅವರಲ್ಲಿ ಆಡುವ ಕ್ಷಮತೆ ಕಡಿಮೆ ಆಗಿದೆ ಎಂದು ಅಲ್ಲ. ರೋಹಿತ್‌ ಶರ್ಮಾ ಅವರು ಈಗಲು ಎದುರಾಳಿ ಪಾಲಿಗೆ ಸಿಂಹಸ್ವಪ್ನರೇ.. ಅವರು ಕ್ರೀಸ್‌ನಲ್ಲಿ ಇದಷ್ಟು ಅಟ್ಯಾಕಿಂಗ್‌ ಕ್ರಿಕೆಟ್‌ ನೋಡಲು ಸಿಗುತ್ತದೆ. ಇನ್ನು ರೋಹಿತ್ ಶರ್ಮಾ ಪಾಲಿಗೆ ಅಚ್ಚು ಮೆಚ್ಚಿನ ಅಂಗಳ ಇದ್ದರೇ ಅದರ ಕಥೆನೇ ಬೇರೆಯಾಗಿರುತ್ತದೆ.

ಹೇಗಿದೆ ರೋಹಿತ್ ದಾಖಲೆ

ರೋಹಿತ್ ಶರ್ಮಾ ವಿಶಾಖಪಟ್ಟಣದಲ್ಲಿ ಪ್ರವಾಸಿಗರಿಗೆ ಸಮಸ್ಯೆಯಾಗಲಿದ್ದಾರೆ. ಈ ಮೈದಾನದಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್‌ನಿಂದ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಅದರಲ್ಲೂ ಕಳೆದ 4 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಎದುರಾಳಿ ಬೌಲರ್‌ಗಳನ್ನು ಮನ ಬಂದಂತೆ ಥಳಿಸಿದ್ದಾರೆ. ಕಳೆದ 4 ಪಂದ್ಯಗಳಲ್ಲಿ ರೋಹಿತ್ ಶರ್ಮಾ 176, 127, 159 ಮತ್ತು 13 ರನ್ ಗಳಿಸಿ ಅಬ್ಬರಿಸಿದ್ದಾರೆ.

ವಿಶಾಖಪಟ್ಟಣಂನಲ್ಲಿ ಕಳೆದ 4 ಪಂದ್ಯಗಳಲ್ಲಿ ಭಾರತದ ನಾಯಕ 3 ಬಾರಿ ಶತಕದ ಗಡಿ ದಾಟಿದ್ದಾರೆ. ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡಕ್ಕೆ ಇದು ಒಳ್ಳೆಯ ಲಕ್ಷಣವಲ್ಲ. ರೋಹಿತ್ ಶರ್ಮಾ ಅವರನ್ನು ವಿಶಾಖಪಟ್ಟಣದಲ್ಲಿ ಕಟ್ಟಿ ಹಾಕುವುದು ಬ್ರಿಟಿಷರಿಗೆ ದೊಡ್ಡ ಸವಾಲು.

IND vs ENG: Rohit Shines in Visakhapatnam: England Feels the Pressure of Taming the Hitman

ಹೈದರಾಬಾದ್ ನಲ್ಲಿ ಟೀಂ ಇಂಡಿಯಾಕ್ಕೆ ಸೋಲು

ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡ 28 ರನ್‌ಗಳ ಸೋಲು ಎದುರಿಸಬೇಕಾಯಿತು. ಈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 246 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ 436 ರನ್ ಗಳಿಸಿತು.

ಈ ಮೂಲಕ ಟೀಂ ಇಂಡಿಯಾ 190 ರನ್ ಗಳ ಪ್ರಬಲ ಮುನ್ನಡೆ ಪಡೆಯಿತು. ಎರಡನೇ ಇನ್ನಿಂಗ್ಸ್ ನಲ್ಲಿ ಒಲಿ ಪೋಪ್ ಶತಕ ಸಿಡಿಸಿದ್ದು ಟೀಂ ಇಂಡಿಯಾದ ನಿರೀಕ್ಷೆಗೆ ಚ್ಯುತಿ ತಂದಿದೆ. ಭಾರತ ತಂಡ ಟೆಸ್ಟ್ ಗೆಲ್ಲಲು 231 ರನ್‌ಗಳ ಗುರಿಯನ್ನು ನೀಡಲಾಯಿತು. ಆದರೆ ರೋಹಿತ್ ಶರ್ಮಾ ತಂಡವು ಕೇವಲ 202 ರನ್‌ಗಳಿಗೆ ಸೀಮಿತವಾಯಿತು. ಈ ಮೂಲಕ ಇಂಗ್ಲೆಂಡ್ ಮೊದಲ ಟೆಸ್ಟ್‌ನಲ್ಲಿ 28 ರನ್‌ಗಳ ಜಯ ಸಾಧಿಸಿದೆ.

ಎರಡನೇ ಟೆಸ್ಟ್‌ ಪಂದ್ಯದಲ್ಲಿ ರೋಹಿತ್ ಶತಕ ಬಾರಿಸಿ ತಂಡಕ್ಕೆ ನೆರವಾದರೆ ಒಳ್ಳೆಯದು. ಅದರಲ್ಲೂ ನೆಚ್ಚಿನ ಅಂಗಳದಲ್ಲಿ ಹಿಟ್‌ ಮ್ಯಾನ್‌ ಮೂರಂಕಿ ಮುಟ್ಟಲಿ ಎಂಬುದೇ ಅಭಿಮಾನಿಗಳ ಆಶಯ.

Story first published: Thursday, February 1, 2024, 8:00 [IST]
Other articles published on Feb 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+