ಧೋನಿ ತರಹದ ಇಬ್ಬರು ಆಟಗಾರರನ್ನು ಹೊಂದಲು ಭಾರತ ಅದೃಷ್ಟ ಮಾಡಿದೆ: ಸಬಾ ಕರೀಂ

ಮಾಜಿ ವಿಕೆಟ್ ಕೀಪರ್ ಸಬಾ ಕರೀಂ ಟೀಮ್ ಇಂಡಿಯಾ ಎಂಎಸ್ ಧೋನಿ ತರಹದ ಇಬ್ಬರು ಅಟಗಾರರನ್ನು ಹೊಂದಿರುವುದಕ್ಕೆ ಅದೃಷ್ಟ ಮಾಡಿದೆ ಎಂದಿದ್ದಾರೆ. ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ದಿಗ್ಗಜ ಕ್ರಿಕೆಟಿಗ ಎಂಎಸ್ ಧೋನಿ ರೀತಿಯಲ್ಲಿ ಆಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.ಇದೇ ಸಂದರ್ಭದಲ್ಲಿ ಅವರು ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಇಬ್ಬರೂ ಆಟಗಾರರು ಮೂರು ಮಾದರಿಯಲ್ಲೂ ಆಡುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.
"ನನಗೆ ಹಾಗೆಯೇ ಭಾಸವಾಗುತ್ತಿದೆ. ಭಾರತ ತಂಡ ಇಬ್ಬರು ಎಂಎಸ್ ಧೋನಿಯನ್ನು ಹೊಂದಿದ್ದರೆ ಅದಕ್ಕಿಂತ ದೊಡ್ಡ ಸಂಗತಿಯಿಲ್ಲ. ಈ ಇಬ್ಬರೂ ಆಟಗಾರರು ಆಡಿದ ನಿರ್ಭೀತ ಮತ್ತು ನಿರಾತಂಕದ ಶೈಲಿ ಮತ್ತು ಈ ಇಬ್ಬರೂ ಆಟಗಾರರಿಗೆ ತಮ್ಮ ಪಾತ್ರಗಳು ಏನು ಎಂಬುದು ಅರಿವಿದೆ. ಹೀಗೆ ಲೆಕ್ಕಾಚಾರದೊಂದಿಗೆ ಅದ್ಭುತವಾದ ಆಕ್ರಮಣಶೀಲತೆಯನ್ನು ತೋರಿಸಿದ್ದಾರೆ" ಎಂದು ಸಬಾ ಕರೀಂ ಹೇಳಿದ್ದಾರೆ.

ಇಬ್ಬರೂ ಮ್ಯಾಚ್ ವಿನ್ನರ್‌ಗಳು
ಇದೇ ಸಂದರ್ಭದಲ್ಲಿ ಕರೀಂ, ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಇಬ್ಬರೂ ಮ್ಯಾಚ್ ವಿನ್ನರ್‌ಗಳು, ಚುಟುಕು ಕ್ರಿಕೆಟ್ ಮಾದರಿಯಲ್ಲಿ ಅವರನ್ನು ಹೊಂದಿರುವುದು ತಂಡದ ಅದೃಷ್ಟ ಎಂದಿದ್ದಾರೆ. "ಇಬ್ಬರು ಆಟಗಾರರು ಕೂಡ ತಮ್ಮನ್ನು ಮ್ಯಾಚ್ ವಿನ್ನರ್‌ಗಳು ಎಂದು ಸಾಬೀತುಪಡಿಸುವ ಪ್ರಯತ್ನದಲ್ಲಿರುತ್ತಾರೆ. ಮೊದಲಿಗೆ ರಿಷಭ್ ಪಂತ್ ಇದನ್ನು ಮಾಡಿದ್ದರು, ಈಗ ಇಶಾನ್ ಕಿಶನ್ ಕೂಡ ಅವಕಾಶವನ್ನು ಪಡೆದಿದ್ದೂ ಅವರು ಕೂಡ ಅಂತಾದ್ದೇ ಮನಸ್ಥಿತಿಯನ್ನು ಹೊಂದಿದ್ದಾರೆ" ಎಂದು ಹೇಳಿದ್ದಾರೆ.

ಮೂರು ಮಾದರಿಯಲ್ಲೂ ಪ್ರತಿನಿಧಿಸುವ ಭರವಸೆ
"ಚುಟುಕು ಕ್ರಿಕೆಟ್ ಮಾದರಿಯಲ್ಲಿ ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಅವರಂತಾ ಮ್ಯಾಚ್ ವಿನ್ನಿಂಗ್ ಸಾಮರ್ಥ್ಯವನ್ನು ಹೊಂದಿದ ಆಟಗಾರರನ್ನು ಹೊಂದಿರುವುದಕ್ಕೆ ಭಾರತ ಅದೃಷ್ಟ ಮಾಡಿದೆ ಎಂಬ ಭಾವನೆ ಮೂಡುತ್ತದೆ. ಭವಿಷ್ಯದಲ್ಲಿ ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಟೀಮ್ ಇಂಡಿಯಾವನ್ನು ಮೂರು ಮಾದರಿಯಲ್ಲೂ ಪ್ರತಿನಿಧಿಸುವ ಭರವಸೆಯಿದೆ" ಎಂದು ಸಬಾ ಕರೀಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದ್ಭುತ ಪ್ರದರ್ಶನ ನೀಡಿದ ಆಟಗಾರರು
ಕಳೆದ ಎರಡ್ಮೂರು ತಿಂಗಳಿನಿಂದ ರಿಷಭ್ ಪಂತ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮೊದಲಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ರಿಷಭ್ ಪಂತ್ ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಇನ್ನು ಇಶಾನ್ ಕಿಶನ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣೀಯ ಎರಡನೇ ಪಂದ್ಯದಲ್ಲಿ ಪದಾರ್ಪಣೆಯನ್ನು ಮಾಡಿ ಅರ್ಧಶತಕವನ್ನು ಸಿಡಿಸಿದ್ದರು. ಈ ಪ್ರದರ್ಶನದ ಕಾರಣಕ್ಕೆ ಚೊಚ್ಚಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications