IND vs ENG: ಭಾರತ ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್ ವೇಗಿಗೆ ಕಾಡಿದ ವೀಸಾ ಸಮಸ್ಯೆ
ಭಾರತ ವಿರುದ್ಧದ ವೈಟ್‌ಬಾಲ್ ಸರಣಿಗೆ ವೀಸಾ ಪಡೆಯುವಲ್ಲಿ ವಿಳಂಬವಾಗುತ್ತಿರುವ ಕಾರಣ ಇಂಗ್ಲೆಂಡ್ ವೇಗಿ ಸಾಕಿಬ್ ಮಹಮೂದ್ ಅಬುಧಾಬಿಯಲ್ಲಿ ನಡೆಯುತ್ತಿರುವ ತಂಡದ ಪೂರ್ವ ತರಬೇತಿ ಶಿಬಿರದಿಂದ ಹೊರಗುಳಿದಿದ್ದಾರೆ. ಭಾರತೀಯ ರಾಯಭಾರ ಕಚೇರಿಯ ಅನುಮೋದನೆ ಬಾಕಿ ಇರುವ ಕಾರಣ ಮಹಮೂದ್ ಅವರ ವೀಸಾವನ್ನು ಅಮಾನತುಗೊಳಿಸಲಾಗಿದೆ. ಜೋಫ್ರಾ ಆರ್ಚರ್, ಮಾರ್ಕ್ ವುಡ್, ಗಸ್ ಅಟ್ಕಿನ್ಸನ್ ಮತ್ತು ಬ್ರೈಡನ್ ಕಾರ್ಸ್ ಸೇರಿದಂತೆ ಇಂಗ್ಲೆಂಡ್‌ನ ಉಳಿದ ವೇಗದ ಬೌಲರ್‌ಗಳು ಜೇಮ್ಸ್ ಆಂಡರ್ಸನ್ ಅವರ ಮಾರ್ಗದರ್ಶನದಲ್ಲಿ ತಮ್ಮ ಸಿದ್ಧತೆಯನ್ನು ಉತ್ತಮಗೊಳ್ಳಿಸಿಕೊಂಡಿದ್ದಾರೆ.
ಭಾರತ ಪ್ರವಾಸಕ್ಕೆ ವೀಸಾ ಸಿಗದೆ ಸಾಕಿಬ್ ಮಹಮೂದ್ ಪರಾದಾಟ ನಡೆಸುತ್ತಿದ್ದು, ಅವರು ಟೀಮ್ ಇಂಡಿಯಾ ವಿರುದ್ಧ ಟಿ20 ಸರಣಿ ಆಡುತ್ತಾರಾ?. ಇಂಗ್ಲೆಂಡ್ ತಂಡದ ಜೊತೆಗೆ ವೀಸಾ ಪಡೆದು ಅವರು ಭಾರತಕ್ಕೆ ಪ್ರಯಾಣ ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಇನ್ನೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಸ್ಪಷ್ಟೀಕರಣವನ್ನು ನೀಡಿಲ್ಲ.ಈ ವಾರದ ಕೊನೆಯಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರಯಾಣ ಮಾಡಲಿದೆ.

ವರದಿಗಳ ಪ್ರಕಾರ, ಸಾಕಿಬ್ ಮಹಮೂದ್ ಭಾರತ ಪ್ರವಾಸಕ್ಕೂ ಮುನ್ನ ಯುಎಇಯಲ್ಲಿ ನಡೆಯುತ್ತಿರುವ ವೇಗದ ಬೌಲಿಂಗ್ ಶಿಬಿರದಲ್ಲಿ ಸೇರಬೇಕಿತ್ತು. ಆದರೆ ಇಸಿಬಿ ಸಾಕಿಬ್ ಮಹಮೂದ್ ತಮ್ಮ ವೀಸಾವನ್ನು ಇನ್ನೂ ಭಾರತೀಯ ರಾಯಭಾರ ಕಚೇರಿಯಿಂದ ಪಡೆದಿಲ್ಲ. ಆದ್ದರಿಂದ ಅವರು ಶಿಬಿರವನ್ನು ಸೇರಲು ಸಾಧ್ಯವಾಗಿಲ್ಲ.
ಇದೀಗ ಯುಎಇಯಲ್ಲಿ ನಡೆಯುತ್ತಿರುವ ವೇಗದ ಬೌಲಿಂಗ್ ಶಿಬಿರದಲ್ಲಿ ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸೆ ಮತ್ತು ಮಾರ್ಕ್ ವುಡ್ ಅವರೊಂದಿಗೆ ಮಹಮೂದ್ ಸೇರುವ ಸಾಧ್ಯತೆಯಿದೆ. ಈ ವೇಗದ ಬೌಲಿಂಗ್ ಶಿಬಿರವನ್ನು ಜೇಮ್ಸ್ ಆಂಡರ್ಸನ್ ನೋಡಿಕೊಳ್ಳುತ್ತಿದ್ದಾರೆ.
ಇಂಗ್ಲೆಂಡ್‌ಗೆ ವೀಸಾ ಸಮಸ್ಯೆ
ಪಾಕಿಸ್ತಾನ ಮೂಲದ ಇಂಗ್ಲೆಂಡ್ ಆಟಗಾರರಿಗೆ ವೀಸಾ ಸಮಸ್ಯೆ ಹೊಸದಲ್ಲ. ಕಳೆದ ವರ್ಷ ಆರಂಭದಲ್ಲಿ ಇಂಗ್ಲೆಂಡ್ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ಈ ವೇಳೆ ಸ್ಪಿನ್ನರ್ ಶೋಯೆಬ್ ಬಶೀರ್ ಅವರಿಗೂ ವೀಸಾ ವಿಳಂಬವಾಗಿತ್ತು. ಹೀಗಾಗಿ ಅವರು ಹೈದರಾಬಾದ್‌ನಲ್ಲಿ ನಡೆದ ಆರಂಭಿಕ ಟೆಸ್ಟ್ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ಈ ಬಾರಿ ಆದಿಲ್ ರಶೀದ್ ಮತ್ತು ರೆಹಾನ್ ಅಹ್ಮದ್ ತಮ್ಮ ವೀಸಾವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಭಾರತ-ಇಂಗ್ಲೆಂಡ್ ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್ (ಉಪನಾಯಕ), ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್.
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ-ವಿಕೆಟ್‌ಕೀಪರ್), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications