For Quick Alerts
ALLOW NOTIFICATIONS  
For Daily Alerts
 

IND vs ENG: ಚೊಚ್ಚಲ ಪಂದ್ಯದಲ್ಲೇ ಸುನಿಲ್ ಗವಾಸ್ಕರ್ ದಾಖಲೆ ಸರಿಗಟ್ಟಿದ ಸರ್ಫರಾಜ್ ಖಾನ್

ಭಾರತ ತಂಡದ ಯುವ ಬ್ಯಾಟರ್ ಸರ್ಫರಾಜ್ ಖಾನ್ ಅವರು ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರನ್ನು ಸರಿಗಟ್ಟುವ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅವಳಿ ಅರ್ಧಶತಕಗಳನ್ನು ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾನುವಾರ, ಫೆಬ್ರವರಿ 18ರಂದು ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಬೃಹತ್ ಮುನ್ನಡೆ ಸಾಧಿಸಿದ ವೇಳೆ ಸರ್ಫರಾಜ್ ಖಾನ್ 4ನೇ ದಿನದಂದು ಅರ್ಧಶತಕ ಬಾರಿಸಿದರು.

ಸರ್ಫರಾಜ್ ಖಾನ್ ಇದೀಗ ಸುನಿಲ್ ಗವಾಸ್ಕರ್, ದಿಲಾವರ್ ಹುಸೇನ್ ಮತ್ತು ಶ್ರೇಯಸ್ ಅಯ್ಯರ್ ಅವರ ಗೌರವಾನ್ವಿತ ಪಟ್ಟಿಯನ್ನು ಸೇರಿಕೊಂಡರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದ ನಾಲ್ಕನೇ ಭಾರತೀಯನಾದರು.

IND vs ENG: Sarfaraz Khan Equals Sunil Gavaskars Record on Debut Test Match

4ನೇ ದಿನದಂದು ಸ್ಪಿನ್ನರ್ ರೆಹಾನ್ ಅಹ್ಮದ್ ವಿರುದ್ಧ ತ್ವರಿತವಾಗಿ ಸಿಂಗಲ್ ರನ್ ಪಡೆಯುವ ಮೂಲಕ ಸರ್ಫರಾಜ್ ಖಾನ್ 96ನೇ ಓವರ್‌ನಲ್ಲಿ 50 ರನ್ ಪೂರ್ಣಗೊಳಿಸಿದರು.

ಸರ್ಫರಾಜ್ ಖಾನ್ 72 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಮೇತ ಅಜೇಯ 68 ರನ್ ಗಳಿಸಿದರು. ಈ ಮೂಲಕ ಭಾರತ ತಂಡದ ಮೊತ್ತವನ್ನು 4 ವಿಕೆಟ್‌ಗೆ 430 ರನ್‌ಗಳಿಗೆ ಏರಿಸಿದರು.

ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 4ನೇ ದಿನದ ಎರಡನೇ ಸೆಷನ್‌ನಲ್ಲಿ ಡಿಕ್ಲೇರ್ ಮಾಡಲು ನಿರ್ಧರಿಸಿದರು. ಹೀಗಾಗಿ ಇಂಗ್ಲೆಂಡ್‌ ತಂಡಕ್ಕೆ ಬೆನ್ನಟ್ಟಲು 557 ರನ್‌ಗಳ ಗುರಿಯನ್ನು ನೀಡಿದರು.

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅವಳಿ ಅರ್ಧಶತಕ ಗಳಿಸಿದ ಭಾರತೀಯ ಬ್ಯಾಟರ್‌ಗಳು

ದಿಲಾವರ್ ಹುಸೇನ್: 59 ಮತ್ತು 57 (ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧ)

ಸುನಿಲ್ ಗವಾಸ್ಕರ್: 65 ಮತ್ತು 67 (ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ)

ಶ್ರೇಯಸ್ ಅಯ್ಯರ್: 105 ಮತ್ತು 65 (ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ)

ಸರ್ಫರಾಜ್ ಖಾನ್: 61 ಮತ್ತು 68 (ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ)

IND vs ENG: Sarfaraz Khan Equals Sunil Gavaskars Record on Debut Test Match

4ನೇ ದಿನದ ಬೆಳಗಿನ ಅವಧಿಯಲ್ಲಿ ಭಾರತ ತಂಡ ಕುಲದೀಪ್ ಯಾದವ್ ಅವರ ವಿಕೆಟ್ ಕಳೆದುಕೊಂಡ ಬಳಿಕ ಸರ್ಫರಾಜ್ ಖಾನ್ ಬ್ಯಾಟಿಂಗ್‌ಗೆ ಬಂದರು. ಯಶಸ್ವಿ ಜೈಸ್ವಾಲ್ ಅವರ ಶತಕದ ಸಹಾಯದಿಂದ ಭಾರತ ತಂಡ ಅದಾಗಲೇ 300 ಪ್ಲಸ್ ಮುನ್ನಡೆ ಸಾಧಿಸಿತ್ತು ಮತ್ತು ಶುಭ್ಮನ್ ಗಿಲ್ 151 ಎಸೆತಗಳಲ್ಲಿ 91 ರನ್ ಗಳಿಸಿ ಔಟಾಗಿದ್ದರು.

ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಭಾರತ ತಂಡದ ಮುನ್ನಡೆಯನ್ನು 550 ರನ್ ಗಡಿ ದಾಟಿಸಲು ಮುರಿಯದ ಐದನೇ ವಿಕೆಟ್‌ಗೆ 172 ರನ್‌ಗಳ ಜೊತೆಯಾಟ ರಚಿಸಿದರು. ಯಶಸ್ವಿ ಜೈಸ್ವಾಲ್ ತಮ್ಮ ಎರಡನೇ ದ್ವಿಶತಕವನ್ನು ಬಾರಿಸಿದರು.

ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ 236 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 12 ಸಿಕ್ಸರ್‌ಗಳ ಸಮೇತ ಅಜೇಯ 214 ರನ್ ಬಾರಿಸಿದರು.

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ದ್ವಿಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಯಶಸ್ವಿ ಜೈಸ್ವಾಲ್ ಭಾನುವಾರ ಹೊಸ ಭಾರತೀಯ ದಾಖಲೆಯನ್ನು ನಿರ್ಮಿಸಿದರು.

Story first published: Sunday, February 18, 2024, 16:05 [IST]
Other articles published on Feb 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+