Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG: ರಾಜ್‌ಕೋಟ್‌ನಲ್ಲಿ ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರಗೆ ಸನ್ಮಾನ

ರಾಜ್ಯ ಮತ್ತು ರಾಷ್ಟ್ರ ತಂಡಕ್ಕಾಗಿ ಅವರ ಸಾಧನೆಗಳಿಗಾಗಿ ಭಾರತದ ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜಾ ಅವರನ್ನು ಗೌರವಿಸಲು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(SCA) ನಿರ್ಧರಿಸಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರಸಕ್ತ ಐದು ಪಂದ್ಯಗಳ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಫೆಬ್ರವರಿ 15ರಂದು ರಾಜ್‌ಕೋಟ್‌ನಲ್ಲಿ ನಡೆಯುವುದರಿಂದ, ಪಂದ್ಯ ಆರಂಭಕ್ಕೂ ಮುನ್ನ ಇವರಿಬ್ಬರನ್ನು ಅಭಿನಂದಿಸಲಾಗುತ್ತದೆ.

IND vs ENG: Saurashtra Cricket Association to honor Ravindra Jadeja, Cheteshwar Pujara in Rajkot

ರವೀಂದ್ರ ಜಡೇಜಾ ಭಾರತೀಯ ಟೆಸ್ಟ್ ತಂಡದಲ್ಲಿ ಪ್ರಮುಖ ಆಟಗಾರನಾಗಿದ್ದು, ಆದರೆ, ಚೇತೇಶ್ವರ ಪೂಜಾರ ರೆಡ್ ಬಾಲ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇದೇ ವೇಳೆ ರಣಜಿ ಟ್ರೋಫಿಯಲ್ಲಿ ಅವರ ಗಮನಾರ್ಹ ಪ್ರದರ್ಶನದ ಹಿನ್ನೆಲೆಯಲ್ಲಿ ಚೇತೇಶ್ವರ ಪೂಜಾರ ಅವರನ್ನು ಕರೆಯಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಆದರೆ, ಗಾಯಗೊಂಡು ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ರವೀಂದ್ರ ಜಡೇಜಾ ಅವರು ಫಿಟ್ನೆಸ್‌ಗೆ ಒಳಪಟ್ಟು ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಅನುಭವಿ ಕ್ರಿಕೆಟಿಗ ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಆಲ್‌ರೌಂಡ್ ಆಗಿದ್ದಾರೆ.

"ರಾಜ್‌ಕೋಟ್ ಕ್ರೀಡಾಂಗಣಕ್ಕೆ ಹೊಸ ಹೆಸರಿಡುವ ಸಮಾರಂಭದಲ್ಲಿ ನಾವು ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜಾ ಇಬ್ಬರನ್ನೂ ಅಭಿನಂದಿಸುತ್ತೇವೆ," ಎಂದು ಎಸ್‌ಸಿಎ ಅಧ್ಯಕ್ಷ ಜಯದೇವ್ ಶಾ ಹೇಳಿದ್ದಾರೆ.

"ನಾನು ಚೇತೇಶ್ವರ ಪೂಜಾರ ಆಡುತ್ತಿಲ್ಲದಿರುವು ಬಗ್ಗೆ ಹೆಚ್ಚು ಹೇಳಲಾರೆ. ಏಕೆಂದರೆ ಇದು ತಂಡದ ಮ್ಯಾನೇಜ್‌ಮೆಂಟ್ ಮತ್ತು ಆಯ್ಕೆಗಾರರ ನಿರ್ಧಾರ. ಆದರೆ ಅವರು ತಂಡದಲ್ಲಿದ್ದರೆ, ನಾವು ತುಂಬಾ ಹೆಮ್ಮೆಪಡುತ್ತಿದ್ದೆವು. ನಾವು ಈಗ ಹೆಮ್ಮೆಪಡುತ್ತಿಲ್ಲವಲ್ಲ, ಆದರೆ ಅವರು ಆಡಿದ್ದರೆ ನಾವು ಹೆಚ್ಚು ಹೆಮ್ಮೆಪಡುತ್ತೇವೆ," ಎಂದರು.

"ಚೇತೇಶ್ವರ ಪೂಜಾರ 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಭಾರತದಲ್ಲಿ ಅದನ್ನು ಮಾಡಲು ಹೆಚ್ಚಿನವರಿಗೆ ಯಶಸ್ವಿಯಾಗಲಿಲ್ಲ. ಅವರು ರಾಜ್‌ಕೋಟ್‌ನಲ್ಲಿ ಆಡುವುದು ಉತ್ತಮವಾಗಿತ್ತು. ಆದರೆ ಇದು ಆಟದ ಭಾಗವಾಗಿದೆ. ನೀವು ಕನಸು ಕಾಣುವ ಎಲ್ಲವನ್ನೂ ನೀವು ಪಡೆಯುವುದಿಲ್ಲ. ಪೂಜಾರ ತುಂಬಾ ಕಷ್ಟಪಟ್ಟಿದ್ದಾರೆ. ಸೌರಾಷ್ಟ್ರವನ್ನು ತುಂಬಾ ಹೆಮ್ಮೆ ಪಡುವಂತೆ ಮಾಡಿದರು," ಎಂದು ಜಯದೇವ್ ಶಾ ತಿಳಿಸಿದರು.

"ರವೀಂದ್ರ ಜಡೇಜಾ ಸೌರಾಷ್ಟ್ರವನ್ನು ಇನ್ನೂ ಹೆಮ್ಮೆಪಡಿಸಿದ್ದಾರೆ. ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ ಎಂದು ನಾನು ಕೇಳಿದೆ. ಅದರ ಬಗ್ಗೆ ಹೆಚ್ಚು ತಿಳಿದಿಲ್ಲ, ಆದರೆ ಅವರು ಕಾರ್ಯಕ್ರಮಕ್ಕೆ ಬರುವ ಸಾಧ್ಯತೆಯಿದೆ ಎಂದು ನಾನು ಭಾವಿಸುತ್ತೇನೆ. ವಿಶ್ವದ ಅತ್ಯುತ್ತಮ ಟೆಸ್ಟ್ ಆಲ್‌ರೌಂಡರ್ ಆಗಿದ್ದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ," ಎಂದು ಜಯದೇವ್ ಶಾ ಹೇಳಿದರು.

ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗೆ

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ ಪಂದ್ಯಗಳಿಂದ ಹಿಂದೆ ಸರಿದಿದ್ದ ವಿರಾಟ್ ಕೊಹ್ಲಿ, ವೈಯಕ್ತಿಕ ಕಾರಣಗಳಿಂದ ಸರಣಿಯ ಉಳಿದ ಮೂರು ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ.

ಇದೇ ವೇಳೆ, ಗಾಯದಿಂದಾಗಿ ವಿಶಾಖಪಟ್ಟಣ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ, ಅವರ ಭಾಗವಹಿಸುವಿಕೆಯು ಅವರ ಫಿಟ್ನೆಸ್ ಕ್ಲಿಯರೆನ್ಸ್ ಅನ್ನು ಅವಲಂಬಿಸಿರುತ್ತದೆ.

ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

Story first published: Saturday, February 10, 2024, 22:25 [IST]
Other articles published on Feb 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+