ಟೀಮ್ ಇಂಡಿಯಾದ ಈ ನಿರ್ಧಾರ 'ಮಾಸ್ಟರ್‌ಸ್ಟ್ರೋಕ್' ಎಂದ ಮದನ್‌ಲಾಲ್

ಬೆಂಗಳೂರು, ಆಗಸ್ಟ್ 5: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲೊ ಮೊದಲ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದ ಭಾರತೀಯ ಆಟಗಾರರು ಮೊದಲ ದಿನದಾಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವನ್ನು ಭಾರತೀಯ ಬೌಲರ್‌ಗಳು 183 ರನ್‌ಗಳಿಗೆ ಆಲೌಟ್ ಮಾಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಒಂದು ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಮದನ್‌ಲಾಲ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಆಡುವ ಬಳಗದಲ್ಲಿ ಓರ್ವ ಆಟಗಾರನನ್ನು ಸೇರಿಸಿಕೊಂಡಿರುವುದಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಅವರನ್ನು ಹಾಡಿ ಹೊಗಳಿದ್ದಾರೆ.
ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ವೇಗಿ ಶಾರ್ದೂಲ್ ಠಾಕೂರ್ ಅವರನ್ನು ಸೇರಿಸಿಕೊಂಡಿರುವುದು ಮದನ್‌ಲಾಲ್ ಮೆಚ್ಚುಗೆಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ಈ ನಿರ್ಧಾರ ತಾಂತ್ರಿಕವಾಗಿ ಅದ್ಭುತವಾದ ನಡೆ ಎಂದಿದ್ದಾರೆ ಮದನ್‌ಲಾಲ್. ಔಟ್ ಸ್ವಿಂಗ್ ಬೌಲರ್ ಆಗಿರುವ ಶಾರ್ದೂಲ್ ಠಾಕೂರ್ ಇಂಗ್ಲೆಂಡ್‌ನ ಕಂಡೀಶನ್‌ಗೆ ಅತ್ಯಂತ ಸೂಕ್ತವಾಗಿರುವ ಬೌಲರ್ ಆಗಿದ್ದು ವಿಕೆಟ್ ಪಡೆಯುವ ಬೌಲರ್ ಎನಿಸಿದ್ದಾರೆ ಎಂದು ಮದನ್‌ಲಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲ ದಿನ ಯಶಸ್ಸು ಸಾಧಿಸಿದ ಠಾಕೂರ್
ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. 13 ಓವರ್‌ಗಳ ಬೌಲಿಂಗ್ ಮಾಡಿದ ಠಾಕೂರ್ 41 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಒಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಕೆಟ್ ಕೂಡ ಸೇರಿದೆ. ಜೋ ರೂಟ್ ಇಂಗ್ಲೆಂಡ್ ತಂಡದ ಪರವಾಗಿ ಉತ್ತಮ ಆಟವನ್ನು ಪ್ರದರ್ಶಿಸಿ ಅರ್ಧ ಶತಕವನ್ನು ಗಳಿಸಿದ್ದರು. ಬಳಿಕ ಶಾರ್ದೂಲ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

ಅಗ್ಗಕ್ಕೆ ಔಟ್ ಮಾಡುವ ಸಾಮರ್ಥ್ಯ
ಆಜ್‌ತಕ್ ವಾಹಿನಿಯ ಜೊತೆಗೆ ಮಾತನಾಡಿದ ಮದನ್‌ಲಾಲ್ ಭಾರತೀಯ ಬೌಲರ್‌ಗಳ ಪ್ರದರ್ಶನವನ್ನು ಹೊಗಳಿದ್ದಾರೆ. "ಆರಂಭಿಕ ಸೆಶನ್‌ನಲ್ಲಿ ಪರಿಸ್ಥೊತಿಗೆ ಒಗ್ಗಿಕೊಳ್ಳಲು ಅವರು ಕೆಲ ಸಮಯಗಳನ್ನು ತೆಗೆದುಕೊಂಡರು. ಯಾಕೆಂದರೆ ಇದು ಸರಣಿಯ ಮೊದಲ ದಿನವಾಗಿತ್ತು. ಆದರೆ ಎರಡನೇ ಹಾಗೂ ಮೂರನೇ ಸೆಶನ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಆರಂಭಿಸಿದರು. ಇಂತಾ ಸಂದರ್ಭದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಬ್ಯಾಟಿಂಗ್‌ಲೈನ್ಅಪ್ ಹೊಂದಿದ್ದರೂ ಇಂಗ್ಲೆಂಡ್ ತಂಡಕ್ಕೆ ಭಾರತದ ಬೌಲರ್‌ಗಳು ಕಠಿಣವಾದರು. ನಮ್ಮ ಬೌಲರ್‌ಗಳು ಇಂದು ನೀಡಿದ ಪ್ರದರ್ಶನದಂತೆ ಇಂಗ್ಲೆಂಡ್ ತಂಡವನ್ನು ಅಗ್ಗಕ್ಕೆ ಔಟ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಮದನ್‌ಲಾಲ್ ಹೇಳಿದ್ದಾರೆ.

ಕೋಹ್ಲಿ- ಶಾಸ್ತ್ರಿ ನಿರ್ಧಾರ ಅದ್ಭುತ
"ಈ ಟೆಸ್ಟ್‌ನಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಆಡಿಸುವ ನಿರ್ಧಾರವನ್ನು ತೆಗೆದುಕೊಂಡ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ನಿರ್ಧಾರವನ್ನು ನಾನು ಪ್ರಶಂಸಿಸುತ್ತೇನೆ. ಆತನೋರ್ವ ಅದ್ಭುತವಾದ ಔಟ್‌ಸ್ವಿಂಗ್ ಬೌಲರ್. ಚೆಂಡನ್ನು ಬ್ಯಾಟ್ಸ್‌ಮನ್‌ನಿಂದ ದೂರಹೋಗುವಂತೆ ಎಸೆದು ಅವರಿಗೆ ಕಠಿಣವಾಗಬಲ್ಲವ ಸಾಮರ್ಥ್ಯವಿದೆ" ಎಂದಿದ್ದಾರೆ ಮದನ್‌ಲಾಲ್.

ಟೀಮ ಟೀಮ್ ಇಂಡಿಯಾದ ಮಾಸ್ಟರ್‌ಸ್ಟ್ರೋಕ್ ನಿರ್ಧಾರ
ಮುಂದುವರಿದು ಮಾತನಾಡಿದ ಮದನ್‌ಲಾಲ್ "ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಶಾರ್ದೂಲ್ ಠಾಕೂರ್‌ಗೆ ಇದೆ.ನನ್ನ ಪ್ರಕಾರ ಇದೊಂದು ಮಾಸ್ಟರ್‌ಸ್ಟ್ರೋಕ್ ನಿರ್ಧಾರ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಹೇಗೆ ಬೌಲಿಂಗ್ ಮಾಡಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಈಗ ಅವರು ಇಂಗ್ಲೆಂಡ್‌ನಲ್ಲಿಯೂ ಅದೇ ರೀತಿಯ ಪ್ರದರ್ಶನವನ್ನು ನೀಡಬಲ್ಲವರಾಗಿದ್ದಾರೆ" ಎಂದು ಮದನ್‌ಲಾಲ್ ಭಾರತೀಯ ಬೌಲರ್‌ಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications