IND vs ENG: ಮೂರು ಸ್ಥಾನಕ್ಕಾಗಿ ಆರು ಆಟಗಾರರ ಪೈಪೋಟಿ: ಒಬ್ಬರು ಪದಾರ್ಪಣೆ ಮಾಡುವುದು ಖಚಿತ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯಕ್ಕೆ ರಾಜ್‌ಕೋಟ್ ಅಂಗಳ ಸಂಪೂರ್ಣ ಸಿದ್ಧವಾಗಿದೆ. ಆದರೆ ಯಾರಿಗೆ ಅವಕಾಶ ನೀಡಬೇಕು ಎಂಬ ಚಿಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಇರುವ ಮೂರು ಸ್ಥಾನಗಳಿಗೆ ಆರು ಯುವ ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ.
ಮೂರನೇ ಟೆಸ್ಟ್‌ನಲ್ಲಿ ತಂಡದ ಸಂಯೋಜನೆ ಏನು ಇರಲಿದೆ ಎಂಬುದೇ ಅಭಿಮಾನಿಗಳಲ್ಲಿ ಸದ್ಯ ಮೂಡಿರುವ ಬಿಲಿಯನ್ ಡಾಲರ್ ಪ್ರಶ್ನೆ ಆಗಿದೆ. ಬೇರೆ ತಂಡಗಳಂತೆ ಭಾರತ ಪಂದ್ಯದ ಹಿಂದಿನ ದಿನವೇ ತಂಡವನ್ನು ಘೋಷಿಸುವದಿಲ್ಲ. ಹೀಗಾಗಿ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗವನ್ನು ನೋಡಬೇಕಾದಲ್ಲಿ, ಗುರುವಾರದ ವರೆಗೂ ಕಾಯಲೇ ಬೇಕು. ಪಂದ್ಯಕ್ಕಾಗಿ ಒಟ್ಟು 6 ಆಟಗಾರರು ಕಣಕ್ಕಿಳಿಯಲು ಕಾತುರಾಗಿದ್ದಾರೆ. ಆದರೆ ಕೇವಲ ಮೂವರಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆಯಿದೆ.

ಪದಾರ್ಪಣೆ ಮಾಡುವವರು ಯಾರು?
ಮೊದಲು ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಬರುವ ಆಟಗಾರನ ಚರ್ಚೆಗಳು ಬಹುವಾಗಿ ನಡೆದಿವೆ. ಶ್ರೇಯಸ್ ಅಯ್ಯರ್ ಮೊದಲ ಎರಡು ಪಂದ್ಯಗಳನ್ನು ಆಡಿದ್ದರು. ಕಳಪೆ ಪ್ರದರ್ಶನದ ಕಾರಣದಿಂದ ಅವರು ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಸರ್ಫರಾಜ್ ಖಾನ್ ಈಗಾಗಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದಾದ ನಂತರ ಇದೀಗ ದೇವದತ್ ಪಡಿಕ್ಕಲ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ರಜತ್ ಪಾಟಿದಾರ್ ಕಳೆದ ಪಂದ್ಯದಲ್ಲಿಯೇ ಪದಾರ್ಪಣೆ ಮಾಡಿದ್ದರು. ಆದರೆ ಈಗ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅನುಪಸ್ಥಿತಿಯಿಂದ ಈ ಇಬ್ಬರಲ್ಲಿ ಒಬ್ಬರಿಗೆ ಪದಾರ್ಪಣೆ ಮಾಡುವ ಅವಕಾಶ ಸಿಗಬಹುದು. ಸರ್ಫರಾಜ್ ಖಾನ್ ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇವದತ್ ಕೂಡ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಸರ್ಫರಾಜ್ ತಂಡದೊಂದಿಗೆ ದೀರ್ಘಕಾಲ ತಿರುಗಾಡುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚು. ಹೀಗಿರುವಾಗ ದೇವದತ್ ಪಡಿಕ್ಕಲ್ ಅವರ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಕೆಲ ದಿನ ಕಾಯಲೇ ಬೇಕು.

ಧ್ರುವ್ ಜುರೈಲ್‌ಗೆ ಅವಕಾಶ
ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಭರತ್ ಗೆ ಅವಕಾಶ ನೀಡಲಾಯಿತು. ಇದು ಉತ್ತಮ ಸಮಯವಾಗಿದ್ದು, ಭಾರತ್ ಉತ್ತಮ ಪ್ರದರ್ಶನ ನೀಡಿ ತನ್ನ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಶತಕ ಅಲ್ಲ, ಅರ್ಧಶತಕ ಕೂಡ ಗಳಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಇದೀಗ ಧ್ರುವ ಜುರೈಲ್ ಗೆ ಅವಕಾಶ ನೀಡುವ ಬಗ್ಗೆ ನಾಯಕ ಹಾಗೂ ಕೋಚ್ ಚಿಂತನೆ ನಡೆಸಿದಂತೆ ಕಾಣುತ್ತಿದೆ. ಆದರೆ ಧ್ರುವ ಮತ್ತು ಭರತ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗುವುದು ಖಚಿತ. ಕೊನೆ ಕ್ಷಣದಲ್ಲಿ ಈ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ.
ಕುಲದೀಪ್, ಅಕ್ಷರ್ ಯಾರಿಗೆ ಸ್ಥಾನ?
ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಏಕಕಾಲದಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ನಾಯಕ ನಿರ್ಧರಿಸುವುದು ಕಡಿಮೆ. ರವಿಚಂದ್ರನ್ ಅಶ್ವಿನ್ ಖಂಡಿತವಾಗಿಯೂ ಆಡುತ್ತಾರೆ. ರವೀಂದ್ರ ಜಡೇಜಾ ಸಂಪೂರ್ಣ ಫಿಟ್ ಆಗಿದ್ದರೆ ಅವರೂ ಆಡುತ್ತಾರೆ. ಇದು ಅವರ ತವರು ಮೈದಾನವೂ ಆಗಿದೆ. ಇದಲ್ಲದೇ ಕುಲದೀಪ್ ಮತ್ತು ಅಕ್ಷರ್ ಅವರಲ್ಲಿ ಒಬ್ಬರನ್ನು ಮೂರನೇ ಸ್ಪಿನ್ನರ್ ಆಗಿ ಆಯ್ಕೆ ಮಾಡಬೇಕಿದೆ. ಜಡೇಜಾ ಫಿಟ್ ಆಗದಿದ್ದರೆ ಅಕ್ಷರ್ ಮತ್ತು ಕುಲದೀಪ್ ಇಬ್ಬರಿಗೂ ಅವಕಾಶ ಸಿಗಬಹುದು. ಫೆಬ್ರವರಿ 15 ರಂದು ಬೆಳಿಗ್ಗೆ 9 ಗಂಟೆಗೆ ಟಾಸ್ ಸಮಯದಲ್ಲಿ ನಾಯಕನು ಯಾವ ತಂಡವನ್ನು ಪ್ರಕಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications