ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ವಿಶಾಖಾಪಟ್ಟಣಂನಲ್ಲಿ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೆ ತುಂಬ ಮಹತ್ವದಾಗಿದೆ. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿರುವ ಉಭಯ ತಂಡಗಳಿಗೆ ಈ ಸರಣಿ ಮಹತ್ವದಾಗಿದೆ. ಮೊದಲ ಪಂದ್ಯದಲ್ಲಿ ಮಾಡಿದ ಎಡವಟ್ಟನ್ನು ಸರಿಪಡಿಸಿಕೊಳ್ಳಲು ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಪ್ಲ್ಯಾನ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಬೇಕಾಯಿತು. ಇದೀಗ ವಿಶಾಖಪಟ್ಟಣಂ ಮೈದಾನದಲ್ಲಿ ನಡೆಯಲಿರುವ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಲು ಟೀಂ ಇಂಡಿಯಾ ಪ್ರಯತ್ನಿಸಲಿದೆ. ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ತಂಡದ ಸ್ಪಿನ್ ಬೌಲರ್‌ಗಳ ಸವಾಲನ್ನು ಮೀರುವಲ್ಲಿ ವಿಫಲರಾದರು. ಹೀಗಾಗಿ ಸ್ಪಿನ್ ಬೌಲರ್‌ಗಳ ಸವಾಲು ಎದುರಿಸುವಲ್ಲಿ ಟೀಮ್ ಇಂಡಿಯಾ ನೆಟ್ಸ್‌ನಲ್ಲಿ ವಿಶೇಷ ಅಭ್ಯಾಸವನ್ನು ಆರಂಭಿಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಟಗಾರರ ಅಭ್ಯಾಸ ನಡೆಸಿದರು.

ಇಂಗ್ಲೆಂಡ್ ಎಡಗೈ ಸ್ಪಿನ್ನರ್ ಟಾಮ್ ಹಾರ್ಟ್ಲಿ ಅವರಿಗೆ ಹೆಚ್ಚು ತೊಂದರೆ ನೀಡಿದ್ದರು. ಹೀಗಿರುವಾಗ ವಿಶಾಖಪಟ್ಟಣದಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೂ ಮುನ್ನ ಭಾರತದ ಆಟಗಾರರು ನೆಟ್‌ನಲ್ಲಿ ಸ್ಪಿನ್ನರ್‌ಗಳನ್ನು ಎದುರಿಸಲು ವಿಶೇಷ ತಯಾರಿ ನಡೆಸುತ್ತಿರುವುದು ಕಂಡುಬಂತು.
ವಿಶಾಖಪಟ್ಟಣಂ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ಶುಕ್ರವಾರದಿಂದ ಆರಂಭವಾಗಲಿದ್ದು ಅದಕ್ಕೂ ಮುನ್ನ ಉಭಯ ತಂಡಗಳು ಅಲ್ಲಿಗೆ ತಲುಪಿವೆ. ಪಿಟಿಐ ಸುದ್ದಿ ಪ್ರಕಾರ, ಟೀಂ ಇಂಡಿಯಾ ಆಟಗಾರರು ಅಭ್ಯಾಸದ ಸಮಯದಲ್ಲಿ ನೆಟ್ಸ್‌ನಲ್ಲಿ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಹೊಡೆತಗಳನ್ನು ಆಡುವ ಬಗ್ಗೆ ಹೆಚ್ಚಾಗಿ ಅಭ್ಯಾಸ ಮಾಡಿದರು.

ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಆಟಗಾರರು ಭಾರತದ ಸ್ಪಿನ್ನರ್‌ಗಳ ವಿರುದ್ಧ ಈ ಹೊಡೆತಗಳ ಮೂಲಕ ಸಾಕಷ್ಟು ರನ್ ಗಳಿಸಿದ್ದರು. ಇದೀಗ ಭಾರತದ ಆಟಗಾರರು ಕೂಡ ಇದೇ ರೀತಿಯಲ್ಲಿ ಆಡಲು ಮುಂದಾಗಿದ್ದಾರೆ. ನೆಟ್ಸ್‌ನಲ್ಲಿ ಈ ಹೊಡೆತಗಳನ್ನು ಆಡುವ ಅಭ್ಯಾಸ ಮಾಡಿದ ಆಟಗಾರರಲ್ಲಿ ಶುಭಮನ್ ಗಿಲ್ ಹೊರತುಪಡಿಸಿ, ರಜತ್ ಪಾಟಿದಾರ್ ಸಹ ಈ ಅಭ್ಯಾಸದಲ್ಲಿ ಭಾಗಿಯಾಗಿದ್ದರು. ಈ ಹೊಡೆತಗಳ ಆಟಗಾರರ ಅಭ್ಯಾಸದ ಬಗ್ಗೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮೇಲ್ವಿಚಾರಣೆ ನಡೆಸಿದರು. ಆಟಗಾರರಿಗೆ ಈ ಶಾಟ್‌ಗಳನ್ನು ಹೇಗೆ ಆಡಬೇಕು ಎಂಬುದನ್ನು ವಿವರಿಸಿದ್ದಾರೆ. ನೀವು ಅದನ್ನು ಅಭ್ಯಾಸ ಮಾಡಬೇಕಾಗಿದೆ.
ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊಡೆತಗಳನ್ನು ಹೊಂದಿದ್ದರೆ ಅದು ಪ್ರಯೋಜನಕಾರಿಯಾಗಿರಲಿದೆ. ನಾವು ಸಾಂಪ್ರದಾಯಿಕ ರೀತಿಯಲ್ಲಿ ಆಡುತ್ತೇವೆ. ಬ್ಯಾಟ್‌ನೊಂದಿಗೆ ನೇರವಾಗಿ ಆಡುವುದು ಮತ್ತು ನಮ್ಮ ಫುಟ್‌ವರ್ಕ್ ಬಳಸುವುದು ನಮ್ಮ ಶಕ್ತಿ. ನಾವು ಅದನ್ನು ಚೆನ್ನಾಗಿ ಮಾಡಬೇಕಾಗಿದೆ.
ವಿಸಾಪಟ್ಟಣಂ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಲ್ಲಿನ ಟೀಂ ಇಂಡಿಯಾ ದಾಖಲೆಯನ್ನು ಗಮನಿಸಿದರೆ ಇಲ್ಲಿ 2 ಪಂದ್ಯಗಳು ನಡೆದಿದ್ದು, ಎರಡೂ ಪಂದ್ಯಗಳಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. 2016ರಲ್ಲಿ ಭಾರತ ಇಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿದಾಗ ಇಂಗ್ಲೆಂಡ್ ವಿರುದ್ಧ 246 ರನ್‌ಗಳ ಜಯ ಸಾಧಿಸಿತ್ತು. ಇದಾದ ಬಳಿಕ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 203 ರನ್‌ಗಳ ಜಯ ಸಾಧಿಸಿತ್ತು.