ಭಾರತೀಯ 5 ಭಾಷೆಗಳಲ್ಲಿ ಭಾರತ vs ಇಂಗ್ಲೆಂಡ್ ಸರಣಿ ನೇರಪ್ರಸಾರ

ನವದೆಹಲಿ: ಒಂದು ವರ್ಷದ ಬಳಿಕ ಭಾರತದಲ್ಲಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆರಂಭಗೊಳ್ಳುತ್ತಿದೆ. ಭಾರತಕ್ಕೆ ಪ್ರವಾಸ ಬರಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಫೆಬ್ರವರಿ 5ರಿಂದ ಆತಿಥೇಯರ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಅದಾಗಿ 5 ಟಿ20ಐ ಮತ್ತು 3 ಏಕದಿನ ಪಂದ್ಯಗಳೂ ನಡೆಯುವುದರಲ್ಲಿವೆ.
ಕೊರೊನಾ ಶುರುವಾದ ನಂತರ ದೀರ್ಘ ಕಾಲದ ಬಳಿಕ ಭಾರತದಲ್ಲಿ ನಡೆಯಲಿರುವ ಸುದೀರ್ಘ ಸರಣಿಯನ್ನು ಪ್ರಸಾರಗೊಳಿಸುವುದಕ್ಕಾಗಿ ಭಾರತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಸಜ್ಜಾಗಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ಸ್ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಇಂಗ್ಲೆಂಡ್-ಭಾರತ ಪಂದ್ಯಗಳು ನೇರಪ್ರಸಾರಗೊಳ್ಳಲಿವೆ.
ಭಾರತೀಯ ಐದು ಭಾಷೆಗಳಾದ ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಭಾರತ-ಇಂಗ್ಲೆಂಡ್ ಸರಣಿಯ ಪಂದ್ಯಗಳು ನೇರಪ್ರಸಾರಗೊಳ್ಳಲಿವೆ. ಬಾಲಿವುಡ್ ನಟ ಬೊಮನ್ ಇರಾನಿ ಅವರು ಸರಣಿಯ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತ vs ಇಂಗ್ಲೆಂಡ್ ಸರಣಿಯ ವೇಳೆ ದೊಡ್ಡ ಆದಾಯ ಗಳಿಸುವತ್ತ ಸ್ಟಾರ್ ಸ್ಪೋರ್ಟ್ಸ್ ಕಣ್ಣಿಟ್ಟಿದೆ ಎಂದು ತಿಳಿದು ಬಂದಿದೆ. ಬಲ್ಲ ಮಾಹಿತಿಗಳ ಪ್ರಕಾರ ಸ್ಟಾರ್ ಸ್ಪೋರ್ಟ್ಸ್ ತನ್ನ ಜಾಹೀರಾತುದಾರಿಂದ ಒಟ್ಟಾರೆ 500 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನಿಟ್ಟುಕೊಂಡಿದೆ. ಚೆನ್ನೈನಲ್ಲಿ ಫೆಬ್ರವರಿ 5ರಂದು ಟೆಸ್ಟ್ ಪಂದ್ಯದೊಂದಿಗೆ ಸರಣಿ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications