Ind vs Eng : ಆತನ ಮೇಲೆ ನಂಬಿಕೆಯಿಲ್ಲದಿದ್ದರೆ ಹೊರಗಿಡಿ: ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಗವಾಸ್ಕರ್ ಖಡಕ್ ಸಲಹೆ!

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಣೆಸಾಟಕ್ಕೂ ಮುನ್ನ ಸಾಕಷ್ಟು ಚರ್ಚೆ ವಿಶ್ಲೇಷಣೆಗಳು ನಡೆಯುತ್ತಿದೆ. ಅನೇಕ ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಕ್ರಿಕೆಟಿಗರು ಈ ಪಂದ್ಯಕ್ಕೂ ಮುನ್ನ ಸಾಕಷ್ಟು ಸಲಹೆಗಳನ್ನು ನೀಡಿದ್ದು ಟೀಮ್ ಇಂಡಿಯಾ ಯಾವ ಬದಲಾವನೆಯೊಂದಿಗೆ ಈ ಮಹತ್ವದ ಪಂದ್ಯಕ್ಕೆ ಕಣಕ್ಕಿಳಿಯಲಿದೆ ಎಂಬುದು ಕುತೂಹಲವಾಗಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ.
ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಹೆಚ್ಚುವರಿ ಬ್ಯಾಟರ್‌ನೊಂದಿಗೆ ಕಣಕ್ಕಿಳಿಯಲು ಎಂಬುದು ಸುನಿಲ್ ಗವಾಸ್ಕರ್ ಸಲಹೆಯಾಗಿದೆ. ಹಾಗಾಗಿ ಟೀಮ್ ಇಂಡಿಯಾದಲ್ಲಿ ಆಲ್‌ರೌಂಡರ್ ಆಗಿ ಕಣಕ್ಕಿಳಿಯುಯತ್ತಿರುವ ಅಕ್ಷರ್ ಪಟೇಲ್‌ಗೆ ಈ ಮಹತ್ವದ ಪಂದ್ಯದಲ್ಲಿ ಆಡುವ ಅವಕಾಶ ನೀಡುವುದು ಬೇಡ ಎಂದಿದ್ದಾರೆ ಗವಾಸ್ಕರ್.

ಅಕ್ಷರ್ ಪಟೇಲ್ ಆಡುವುದು ಬೇಡ ಎಂದ ಗವಾಸ್ಕರ್
ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಕ್ಷರ್ ಪಟೇಲ್ ಅವರೊಂದಿಗೆ ಕಣಕ್ಕಿಳಿಯುವುದು ಬೇಡ ಎಂದಿದ್ದಾರೆ ಸುನಿಲ್ ಗವಾಸ್ಕರ್. ಅಕ್ಷರ್ ಪಟೇಲ್ ಬದಲಿಗೆ ಟೀಮ್ ಇಂಡಿಯಾ ಹೆಚ್ಚುವರಿ ಬ್ಯಾಟರ್‌ನೊಂದಿಗೆ ಕಣಕ್ಕಿಳಿಯಲಿ ಎಂದಿರುವ ಸುನಿಲ್ ಗವಾಸ್ಕರ್ ರಿಷಬ್ ಪಂತ್ 7ನೇ ಕ್ರಮಾಂಕದಲಿ ಹೆಚ್ಚುವರಿ ಬ್ಯಾಟರ್ ರೂಪದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ.

ಎರಡನೇ ಸ್ಪಿನ್ನರ್ ಬದಲಿಗೆ ಹೆಚ್ಚುವರಿ ಬ್ಯಾಟರ್
ಎರಡನೇ ಸ್ಪಿನ್ನರ್ ಆಗಿ ಕಣಕ್ಕಿಳಿಯುತ್ತಿರುವ ಅಕ್ಷರ್ ಪಟೇಲ್ ಬದಲಿಗೆ ಈ ಪಂದ್ಯದಲ್ಲಿ ಹೆಚ್ಚುವರಿ ಬ್ಯಾಟರ್ ಆಗಿ ಪಂತ್ ಕಣಕ್ಕಿಳಿಯಲಿ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಹಾರ್ದಿಕ್ ಒಆಂಡ್ಯ ಉತ್ತಮವಾಗಿ ಬೌಲಿಂಗ್ ದಾಳಿ ನಡೆಸುತ್ತಿರುವ ಕಾರಣ 5ನೇ ಬೌಲರ್ ಆಗಿ ಅವರು ದಾಳಿ ನಡೆಸುತ್ತಾರೆ. ಹಾಗಾಇ ಎರಡನೇ ಸ್ಪಿನ್ನರ್ ಬದಲಿಗೆ ಹೆಚ್ಚುವರಿ ಬ್ಯಾಟರ್‌ನೊಂದಿಗೆ ಕಣಕ್ಕಿಳಿಯಲಿ. ಇಂದು ವೇಳೆ 6 ಬೌಲಿಂಗ್ ಆಯ್ಕೆಯೊಂದಿಗೆ ಭಾರತ ಕಣಕಕ್ಇಳಿಯಬೇಕು ಎಣಿಸಿದರೆ ಅಕ್ಷರ್ ಪಟೇಲ್ ಬದಲಿಗೆ ಹರ್ಷಲ್ ಪಟೇಲ್‌ಗೆ ಅವಕಾಶ ನೀಡಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ದಿಗ್ಗಜ ಕ್ರಿಕೆಟಿಗ ಗವಾಸ್ಕರ್.

ಬೌಲಿಂಗ್ ವಿಭಾಗದ ಬಗ್ಗೆ ವಿಮರ್ಶಿಸಬೇಕಿದೆ
"ಟೀಮ್ ಇಂಡಿಯಾ ತನ್ನ ಬೌಲಿಂಗ್ ವಿಭಾಗದ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಬ್ಬರು ಸ್ಪಿನ್ನರ್‌ಗಳ ಪೈಕಿ ಓರ್ವ ಸ್ಪಿನ್ನರ್ ಬದಲಿಗೆ ಬ್ಯಾಟರ್‌ನೊಂದಿಗೆ ಕಣಕ್ಕಿಳಿಯಬಹುದು. ಪಂತ್ ಹಾಘೂ ದಿನೇಶ್ ಕಾರ್ತಿಕ್ ಜೊತೆಯಾಗಿ ಆಡಬಹುದು. ಅದು ಸಾಧ್ಯವಾದರೆ ಆಗ 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ 5ನೇ ಕ್ರಮಾಂಕದಲ್ಲಿ ರಿಷಭ್ ಪಂತ್, 6ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ಹಾಗೂ 7ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಕಣಕ್ಕಿಳಿಯಬಹುದು. ಈ ಮೂಲಕ ಬ್ಯಾಟಿಂಗ್ ವಿಭಾಗವನ್ನು ವಿಸ್ತರಿಸಿಕೊಳ್ಳಬಹುದು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್.

ಅಕ್ಷರ್ ಪಟೇಲ್ ಹೊರಗಿಡಲು ಕಾರಣ ಹೇಳಿದ ಗವಾಸ್ಕರ್
ಇನ್ನು ಈ ಸಂದರ್ಭದಲ್ಲಿ ಅಕ್ಷರ್ ಪಟೇಲ್ ಅವರನ್ನು ಆಡುವ ಬಳಗದಿಂದ ಯಾವ ಕಾರಣಕ್ಕಾಗಿ ಹೊರಗಿಡಬೇಕು ಎಂದಿದ್ದಾರೆ ಗವಾಸ್ಕರ್. "ನೀವು ಅಕ್ಷರ್ ಪಟೇಲ್ ಅವರಿಗೆ ಕೇವಲ 1-2 ಓವರ್‌ಗಳನ್ನು ಮಾತ್ರವೇ ನೀಡುತ್ತಿದ್ದೀರಿ ಎಂದಾದರೆ ಅವರನ್ನು ಪೂರ್ಣವಾಗಿ ಬಳಸಿಕೊಳ್ಳುತ್ತಿಲ್ಲ ಎಂದಾದರೆ ಅವರನ್ನು ಯಾವ ಕಾರಣಕ್ಕೆ ಆಯ್ಕೆ ಮಾಡುತ್ತೀರಿ? 7ನೇ ಕ್ರಮಾಂಕದಲ್ಲಿ ಅವರಿಂದ ರನ್ ಕೂಡ ಚೆನ್ನಾಗಿ ಬರುತ್ತಿಲ್ಲ. ಆತನೋರ್ವ ಉತ್ತಮ ಆಟಗಾರ, ವೆಸ್ಟ್ ಇಂಡೀಸ್‌ನಲ್ಲಿ ಆತನಿಂದ ಅದ್ಭುತ ಪ್ರದರ್ಶನ ಬಂದಿದೆ. ಆದರೆ ಆತನ ಮೇಲೆ ಬೌಲಿಂಗ್‌ನಲ್ಲಿ ನೀವು ನಂಬಿಕೆ ತೋರಿಸದಿದ್ದರೆ ಆತನ ಬದಲಿಗೆ ನಿಮಗೆ ನಂಬಿಕೆಯಿರುವ ಬೌಲರ್‌ನನ್ನು ಆಯ್ಕೆ ಮಾಡಿಕೊಳ್ಳಿ" ಎಂದು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದಾರೆ ಸುನಿಲ್ ಗವಾಸ್ಕರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications