IND vs AUS: ಇಂಗ್ಲೆಂಡ್ ತಂಡದ ಹೆಸರಿನಲ್ಲಿ ನಾಚಿಕೆಗೇಡಿನ ದಾಖಲೆ
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ 7 ವಿಕೆಟ್‌ಗಳ ದೊಡ್ಡ ಸೋಲಿನೊಂದಿಗೆ ಭಾರತ ಪ್ರವಾಸವನ್ನು ಪ್ರಾರಂಭಿಸಿದೆ. 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಿ ಕೇವಲ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಸುಲಭ ಗುರಿ ಬೆನ್ನತ್ತಿದ ಭಾರತದ ಪರ ಅಭಿಷೇಕ್ ಶರ್ಮಾ ಬಿರುಸಿನ ಅರ್ಧಶತಕದ ಬಲದಿಂದ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಭಾರತ ಕೇವಲ 12.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಸೋಲಿನೊಂದಿಗೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿ ನಾಚಿಕೆಗೇಡಿನ ದಾಖಲೆಯೊಂದು ದಾಖಲಾಗಿದೆ.
ಇಂಗ್ಲೆಂಡ್ ತಂಡ ಟಿ20 ಇತಿಹಾಸದಲ್ಲಿ ತನ್ನ ಅತ್ಯಂತ ನಾಚಿಕೆಗೇಡಿನ ದಾಖಲೆಯನ್ನು ಮಾಡಿದೆ. ಭಾರತ ವಿರುದ್ಧ 43 ಎಸೆತಗಳು ಬಾಕಿ ಇರುವಂತೆ ಇಂಗ್ಲೆಂಡ್ ಸೋಲು ಕಂಡಿತು. ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಎಸೆತಗಳಿಂದ ಸೋತ ನಾಚಿಕೆಗೇಡಿನ ದಾಖಲೆಯನ್ನು ಇಂಗ್ಲೆಂಡ್ ಹೆಸರಿನಲ್ಲಿ ಆಯಿತು.

ಆಸ್ಟ್ರೇಲಿಯಾ ವಿರುದ್ಧ 2018ರಲ್ಲಿ ಇಂಗ್ಲೆಂಡ್ ಅತಿಹೆಚ್ಚು ಎಸೆತಗಳಿಂದ ಸೋತಿತು. ಇನ್ನು 33 ಎಸೆತಗಳು ಬಾಕಿ ಇರುವಾಗಲೇ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದಿತ್ತು. ಆದರೆ, ಇದೀಗ ಇಂಗ್ಲೆಂಡ್ ತಂಡಕ್ಕೆ ಭಾರತ ಅತಿ ದೊಡ್ಡ ಸೋಲಿನ ಉಡುಗೊರೆ ನೀಡಿದೆ. ಆಸ್ಟ್ರೇಲಿಯಾ ತಂಡಕ್ಕೂ ಮುನ್ನ 2016ರಲ್ಲಿ ಇಂಗ್ಲೆಂಡ್ ತಂಡವನ್ನು ದಕ್ಷಿಣ ಆಫ್ರಿಕಾ 32 ಎಸೆತಗಳಿಂದ ಸೋಲಿಸಿತ್ತು.
ನಾಯಕನ ಏಕಾಂಗಿ ಹೋರಾಟ
ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳ ಅಬ್ಬರಿಸಲಿಲ್ಲ. ಬಟ್ಲರ್ 68 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ಬಟ್ಲರ್ ಅವರಿಗೆ ಮತ್ತೊಂದು ತುದಿಯಿಂದ ಸಾಥ್ ಸಿಗಲಿಲ್ಲ. ಆದರೂ, ಏಕಾಂಗಿ ಹೋರಾಟ ನಡೆಸಿದ ಬಟ್ಲರ್ 44 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 68 ರನ್ ಬಾರಿಸಿದರು.
ಬಟ್ಲರ್ ಹೇಳಿದ್ದೇನು?
ಪಂದ್ಯದ ಸೋಲಿನ ಬಳಿಕ ಮಾತನಾಡಿದ ನಾಯಕ ಜೋಸ್ ಬಟ್ಲರ್, 'ಆರಂಭದಲ್ಲಿ ಪಿಚ್‌ನಲ್ಲಿ ಚೆಂಡು ಸ್ವಲ್ಪ ಮೂವಿಂಗ್ ಆಗುತ್ತಿತ್ತು. ಬಹುಶಃ ಈ ಸೋಲನ್ನು ನಿರೀಕ್ಷಿಸಿರಲಿಲ್ಲ. ಇದು ನಿಜವಾಗಿಯೂ ಉತ್ತಮ ಪಿಚ್ ಅಂತರ ಕಾಣುತ್ತದೆ. ಭಾರತದ ಬೌಲರ್‌ಗಳು ಸ್ವಲ್ಪ ಮೂವಿಂಗ್ ಪಡೆದರ ಪರಿಣಾಮ ನಾವು ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ. ಆದರೆ ಇದು ಉತ್ತಮ ಪಿಚ್. ವೇಗವಾಗಿ ಸ್ಕೋರ್ ಮಾಡುವ ಮೈದಾನವಾಗಿದೆ. ಟೀಮ್ ಇಂಡಿಯಾದಲ್ಲಿ ಕೆಲವು ಉತ್ತಮ ಆಟಗಾರರಿದ್ದಾರೆ. ಉತ್ತಮ ಬೌಲರ್‌ಗಳ ವಿರುದ್ಧ ರನ್ ಗಳಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ ನಾವು ರನ್ ಔಟ್‌ಗಳಲ್ಲಿ ಉತ್ತಮವಾಗಿದ್ದೇವೆ. ಹೀಗಾಗಿ ಮುಂದಿನ ಪಂದ್ಯಕ್ಕೆ ನಾವು ಕಾಯುತ್ತಿದ್ದೇವೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications