IND vs ENG ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮಳೆ ಕಾಟ ನೀಡಿದರೆ ಯಾರಿಗೆ ಲಾಭ? ಏನು ಹೇಳುತ್ತದೆ ಐಸಿಸಿ ನಿಯಮ?
ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ 9 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಮಾರ್ಚ್ 8 ರಂದು ಅಹಮದಾಬಾದ್‌ನಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳಲ್ಲಿ ಸ್ಫೋಟಕ ಬ್ಯಾಟರ್‌ಗಳ ದಂಡೇ ಇದೆ. ಹೊಡಿ ಬಡಿ ಆಟದ ಹೆಸರಾಂತ ಆಟಗಾರರು ಮೈದಾನಕ್ಕೆ ಇಳಿಯಲಿದ್ದು, ಎಲ್ಲರ ಚಿತ್ತ ಕದ್ದಿದೆ. ಈ ವೇಳೆ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಮಳೆ ಕಾಟ ನೀಡಿದರೆ ಯಾವ ತಂಡ ಫೈನಲ್‌ಗೆ ಪ್ರವೇಶಿಸುತ್ತದೆ? ನಾಕೌಟ್ ಹಂತಗಳಿಗೆ ಮೀಸಲು ದಿನ ಇದೆಯಾ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನ ಇದೆಯಾ?
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಗುರುವಾರ ನಡೆಯಲಿರುವ ಪಂದ್ಯಕ್ಕೆ ಮಳೆ ಕಾಟ ನೀಡಿದರೆ, ಪಂದ್ಯ ಆರಂಭಿಸಲು ಸಾಧ್ಯವೇ ಆಗದಿದ್ದರೆ, ಮೀಸಲು ದಿನ (ಮಾರ್ಚ್ 6)ದಂದು ಎರಡನೇ ಸೆಮಿಫೈನಲ್ ಆಡಲಾಗುತ್ತದೆ.
ಮಾರ್ಚ್ 5 ರಂದು ಪಂದ್ಯ ಪ್ರಾರಂಭವಾಗಿ ಪಂದ್ಯದ ಮಧ್ಯದಲ್ಲಿ ಮಳೆ ಕಾಟ ನೀಡಿದರೆ, ಮಳೆ ನಿಲ್ಲದೇ ಇದ್ದಲ್ಲಿ ಪಂದ್ಯವು ಮರುದಿನ ನಡೆಯಲಿದೆ. ಎಲ್ಲಿಗೆ ಪಂದ್ಯ ನಿಂತಿತ್ತೋ ಅಲ್ಲಿಂದ ಪಂದ್ಯ ಮತ್ತೆ ಆರಂಭವಾಗಲಿದೆ.
ಮೀಸಲು ದಿನದಂದೂ ಸಹ ಮಳೆ ಆಟಕ್ಕೆ ಕಾಟ ನೀಡಿದರೆ..
ಶುಕ್ರವಾರವೂ ಮಳೆ ಬಿಟ್ಟು ಬಿಡದೆ ಬಂದರೆ ಮತ್ತೊಂದು ಮೀಸಲು ದಿನದ ಅವಕಾಶ ಇದೆಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೀಸಲು ದಿನದಂದೂ ಸಹ ಒಂದೆ ಒಂದು ಎಸೆತ ಕಾಣದೇ ಪಂದ್ಯ ರದ್ದಾದರೆ, ಯಾವ ತಂಡ ಫೈನಲ್‌ಗೆ ಅರ್ಹತೆ ಪಡೆಯುತ್ತದೆ? ಎಂಬೆಲ್ಲಾ ಪ್ರಶ್ನೆಗಳು ಮೂಡಿವೆ. ಎರಡೂ ದಿನಗಳಲ್ಲಿ ಮಳೆ ಬಂದರೆ, ಸೂಪರ್ 8 ನಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸರಳವಾಗಿ ಹೇಳುವುದಾದರೆ ಇಂಗ್ಲೆಂಡ್ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯುತ್ತದೆ.
ಸೂಪರ್ 8 ಹಂತದಲ್ಲಿ ಟೀಮ್ ಇಂಡಿಯಾ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಇನ್ನು ಅಂಕ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಎರಡನೇ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಹೀಗಾಗಿ ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ, ಟೀಮ್ ಇಂಡಿಯಾ ಫೈನಲ್ ರೇಸ್‌ನಿಂದ ಹೊರಗುಳಿಯುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications