IND vs ENG: ಸೆಮಿಫೈನಲ್ ಪಂದ್ಯದ ಸಮಯ, ಪಿಚ್ ವರದಿ, ನೇರಪ್ರಸಾರದ ಪೂರ್ಣ ಮಾಹಿತಿ
ಮುಂಬೈ: ಟಿ20 ವಿಶ್ವಕಪ್‌ನ ಫೈನಲ್‌ಗೆ ಈಗಾಗಲೇ ನ್ಯೂಜಿಲೆಂಡ್ ಅರ್ಹತೆ ಪಡೆದಿದೆ. ಮಾರ್ಚ್ 8 ರಂದು ಫೈನಲ್ ಪಂದ್ಯ ನಡೆಯಲಿದ್ದು, ಇನ್ನೊಂದು ತಂಡ ಯಾವುದು ಎಂಬ ಪ್ರಶ್ನೆಗೆ ಗುರುವಾರ ಉತ್ತರ ಸಿಗಲಿದೆ. ವಾಂಖೆಡೆ ಅಂಗಳದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯವನ್ನು ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸುವ ಕನಸು ಎರಡೂ ತಂಡಗಳದ್ದಾಗಿದೆ.
ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಸ್ಥಿರ ಪ್ರದರ್ಶನ ನೀಡಿವೆ. ಟೀಮ್ ಇಂಡಿಯಾ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಮೋಘ ಪ್ರದರ್ಶನ ನೀಡಿ ಕಪ್‌ಗೆ ಮುತ್ತಿಡುವ ಕನಸು ಕಾಣುತ್ತಿದೆ. ಇದಕ್ಕೆ ಇನ್ನು ಎರಡು ಹೆಜ್ಜೆ ದೂರ ನಿಂತಿದೆ. ಹೀಗಾಗಿ ಎರಡನೇ ಸೆಮಿಫೈನಲ್ ಪಂದ್ಯ ರೋಚಕತೆ ಹುಟ್ಟಿಸಿದೆ.

ವಾಂಖೆಡೆ ಪಿಚ್ ಯಾರಿಗೆ ಸಹಾಯವಾಗಲಿದೆ?
ವಾಂಖೆಡೆಯ ಮೈದಾನದ 7ನೇ ಪಿಚ್‌ನಲ್ಲಿ ಪಂದ್ಯ ನಡೆಯಲಿದೆ. ಇದೇ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ನಡೆದಿತ್ತು. ಈಗ ಹೊಸ ಪಿಚ್‌ನಂತೆ ವರ್ತಿಸಲಿದೆ. ಎರಡನೇ ಸೆಮಿಫೈನಲ್ ಪಂದ್ಯಕ್ಕಾಗಿ ಬಳಸುವ ಪಿಚ್ ಕೆಂಪು ಬಣ್ಣದಾಗಿದೆ. ಈ ಪಿಚ್ ಬ್ಯಾಟರ್‌ಗಳಿಗೆ ಅನುಕೂಲಕರವಾಗುವ ಸಾಧ್ಯತೆ ಇದೆ. ಇನ್ನು ಟಾಸ್ ಸಹ ಮಹತ್ವದ ಪಾತ್ರವನ್ನು ವಹಿಸಲಿದೆ. ಇನ್ನು ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ವಿಶ್ವಕಪ್ ದಾಖಲೆ ಹೇಗಿದೆ?
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಈಗಾಗಲೇ ಟಿ20 ವಿಶ್ವಕಪ್‌ನಲ್ಲಿ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಟೀಮ್ ಇಂಡಿಯಾ 3 ಗೆಲುವು ದಾಖಲಿಸಿದ್ದು, ಇಂಗ್ಲೆಂಡ್ 2 ಜಯ ಸಾಧಿಸಿದೆ.
ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ?
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಪರ ಅತಿ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್ ಯಾರು?
ಸೂರ್ಯಕುಮಾರ್ ಯಾದವ್, 7 ಪಂದ್ಯ, 231 ರನ್
ಇಶಾನ್ ಕಿಶನ್, 7 ಪಂದ್ಯ, 224 ರನ್
ತಿಲಕ್ ವರ್ಮಾ, 7 ಪಂದ್ಯ, 178 ರನ್
ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್ ಯಾರು?
ವರುಣ್ ಚಕ್ರವರ್ತಿ, 7 ಪಂದ್ಯ, 12 ವಿಕೆಟ್
ಜಸ್ಪ್ರೀತ್ ಬುಮ್ರಾ, 6 ಪಂದ್ಯ, 9 ವಿಕೆಟ್
ಅರ್ಶದೀಪ್ ಸಿಂಗ್, 6 ಪಂದ್ಯ, 8 ವಿಕೆಟ್
ಇಂಗ್ಲೆಂಡ್ ತಂಡದ ಆಡುವ ಬಳದಲ್ಲಿ ಯಾರಿಗೆಲ್ಲಾ ಸಿಗಬಹುದು ಸ್ಥಾನ?
ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್, ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್.
ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಇಂಗ್ಲೆಂಡ್ ಆಟಗಾರರು ಇವರೇ
ಹ್ಯಾರಿ ಬ್ರೂಕ್, 7 ಪಂದ್ಯ, 228 ರನ್
ವಿಲ್ ಜಾಕ್ಸ್, 7 ಪಂದ್ಯ, 191 ರನ್
ಜಾಕಬ್ ಬೆತೆಲ್, 7 ಪಂದ್ಯ,
ಈ ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್ಸ್
ಆದಿಲ್ ರಶೀದ್, 7 ಪಂದ್ಯ, 11 ವಿಕೆಟ್
ಲಿಯಾಮ್ ಡಾಸನ್, 7 ಪಂದ್ಯ, 10 ವಿಕೆಟ್
ಜೋಫ್ರಾ ಆರ್ಚರ್, 7 ಪಂದ್ಯ, 10 ವಿಕೆಟ್
ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಸೆಮಿಫೈನಲ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯ ಸಂಜೆ 7ಕ್ಕೆ ನಡೆಯಲಿದೆ. ಅಲ್ಲದೆ ಪಂದ್ಯಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications