ಟೀಮ್ ಇಂಡಿಯಾದ ಮಾಜಿ ನಾಯಕ ಅಜಿಂಕ್ಯ ರಹಾನೆ, ಫಾರ್ಮ್ ಇಲ್ಲದೆ ಮರಳುತ್ತಿದ್ದಾರೆ. ಸತತ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವ ಇವರನ್ನು ಟೀಮ್ ಇಂಡಿಯಾ ಟೆಸ್ಟ್ ತಂಡದಿಂದ ಕೈ ಬಿಟ್ಟಿದೆ. ಇವರು ದೇಶೀಯ ಟೂರ್ನಿಯಲ್ಲಿ ತಮ್ಮ ಪ್ರದರ್ಶನ ನೀಡಿ ತಂಡಕ್ಕೆ ಎಂಟ್ರಿ ಆಗಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಈ ಆಸೆ ಸಹ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲ.
ಬೌನ್ಸಿ ಪಿಚ್‌ಗಳಲ್ಲಿ ಸುಲಭವಾಗಿ ರನ್ ಬಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಅಜಿಂಕ್ಯ ರಹಾನೆ ಈಗ ರನ್ ಬಾರಿಸಲು ಪರದಾಟ ನಡೆಸಿದ್ದಾರೆ. ಇದರಿಂದ ಇವರ ಅಂತಾರಾಷ್ಟ್ರೀಯ ಭವಿಷ್ಯ ಅಪಾಯದಲ್ಲಿದೆ.

ಸಿಕ್ಕ ಅವಕಾಶವನ್ನು ಎಲ್ಲ ಕೈ ಚೆಲ್ಲುತ್ತಿರುವ ರಹಾನೆ ನಿರಾಸೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರಹಾನೆ ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಟೆಸ್ಟ್ ಆಡಿದ್ದರು. ವಿಂಡೀಸ್ ಪ್ರವಾಸದ ಎರಡೂ ಇನ್ನಿಂಗ್ಸ್‌ಗಳಲ್ಲೂ ರಹಾನೆ ಸಿಂಗಲ್ ಡಿಜಿಟ್‌ನಲ್ಲೇ ಆಟ ಮುಗಿಸಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ರಹಾನೆ ತಂಡಕ್ಕೆ ನೆರವಾಗಿದ್ದರು. ಕಷ್ಟದ ಸನ್ನಿವೇಶದಲ್ಲಿ ಬ್ಯಾಟ್ ಮಾಡಿದ್ದ ರಹಾನೆ ಅಮೋಘ ಇನ್ನಿಂಗ್ಸ್ ಕಟ್ಟಿದರು. ಇವರು ಆಸೀಸ್ ಬೌಲರ್‌ಗಳನ್ನು ಬೆವರಿಳಿಸಿ ಆರ್ಭಟಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ರಹಾನೆ ಒಟ್ಟು 129 ಎಸೆತಗಳನ್ನು ಎದುರಿಸಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 89 ರನ್ ಸಿಡಿಸಿ ಟೀಮ್ ಇಂಡಿಯಾಕ್ಕೆ ಆಧಾರವಾಗಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ್ದ ರಹಾನೆ 46 ರನ್ ಬಾರಿಸಿದ್ದರು.
ಈ ಇನ್ನಿಂಗ್ಸ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಆದರೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಿರಾಸೆ ಅನುಭವಿಸಿದರು. 2019ರಲ್ಲಿ ಭಾರತದ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ಬಂದಾಗ ರಹಾನೆ ಅಮೋಘ ಪ್ರದರ್ಶನ ನೀಡಿದ್ದರು. ಇದೇ ಸರಣಿಯ ಪಂದ್ಯ ರಾಂಚಿಯಲ್ಲಿ ನಡೆದಾಗ ಅವರು ಕೊನೆಯ ಟೆಸ್ಟ್ ಶತಕವನ್ನು ದಾಖಲಿಸಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ಮೂರಂಕಿ ಮುಟ್ಟದೇ ನಿರಾಸೆ ಅನುಭವಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಅವರಿಗೆ ಅವಕಾಶ ಇತ್ತು. ಆದರೆ ಈ ಅವಕಾಶವನ್ನು ರಹಾನೆ ಕೈ ಚೆಲ್ಲಿದರು.

ಪರಿಣಾಮ ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಘೋಷಿಸಲಾದ ತಂಡದಲ್ಲೂ ರಹಾನೆಗೆ ಸ್ಥಾನ ಲಭಿಸಲಿಲ್ಲ. ಹೀಗಾಗಿ ಅವರು ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಆಸೆಯನ್ನು ಹೊಂದಿದ್ದರು.
ಪ್ರಸಕ್ತ ರಣಜಿ ಋತುವಿನ ಮೊದಲ ಪಂದ್ಯದಲ್ಲಿ ರಹಾನೆ ಗಾಯದ ಸಮಸ್ಯೆಯಿಂದ ಆಡಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದರು. ಆದರೆ, ಈ ಬಾರಿಯೂ ರಹಾನೆ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಆಂಧ್ರ ವಿರುದ್ಧದ ಪಂದ್ಯದಲ್ಲಿ ರಹಾನೆ ನಿತೀನ್ ಕುಮಾರ್ ರೆಡ್ಡ ಎಸೆದ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯೂಗೆ ಬಲಿಯಾದರು. ಈ ಮೂಲಕ ನಿರಾಸೆ ಅನುಭವಿಸಿದರು.
ಅಜಿಂಕ್ಯ ರಹಾನೆ ಭಾರತದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಆಸೆಯನ್ನು ಹೊಂದಿದ್ದರು. ಆದರೆ ರಹಾನೆ ಅವರ ಆಸೆ ಕೈ ಗೂಡಲಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಇನ್ನು ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿಲ್ಲ. ರಹಾನೆ ಅವರ ಪ್ರದರ್ಶನ ನೋಡಿದರೆ ತಂಡಕ್ಕೆ ಮರಳುವುದು ಡೌಟ್ ಎಂದೇ ಹೇಳಲಾಗುತ್ತಿದೆ.