For Quick Alerts
ALLOW NOTIFICATIONS  
For Daily Alerts
 

KL Rahul: ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಕೆ.ಎಲ್ ರಾಹುಲ್‌ ವಿಕೆಟ್‌ ಕೀಪಿಂಗ್ ಏಕೆ ಮಾಡುವುದಿಲ್ಲ?

ಜನವರಿ 25 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಳ್ಳುವುದಿಲ್ಲ. ಈ ಸರಣಿಯ ವೇಳೆ ಅವರು ಕೇವಲ ಬ್ಯಾಟಿಂಗ್ ಸ್ಪೆಷಲಿಸ್ಟ್ ಆಗಿ ಕಣಕ್ಕೆ ಇಳಿಯಲಿದ್ದಾರೆ. ಅವರನ್ನು ವಿಕೆಟ್ ಕೀಪಿಂಗ್ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. ಹಾಗಿದ್ದರೆ ರಾಹುಲ್‌ ವಿಕೆಟ್‌ ಕೀಪಿಂಗ್‌ ಬಗ್ಗೆ ಪ್ರಶ್ನೆಗಳು ಎದ್ದಿವೆಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ಬಿಸಿಸಿಐನ ವಿಶ್ವಾಸಾರ್ಹ ಮೂಲವನ್ನು ಉಲ್ಲೇಖಿಸಿ, ಭಾರತೀಯ ಪಿಚ್‌ಗಳಲ್ಲಿ ವಿಕೆಟ್ ಕೀಪಿಂಗ್ ಸುಲಭವಲ್ಲ ಎಂದು ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಬರೆಯಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಕೆಲಸವನ್ನು ಸ್ಪೆಷಲಿಸ್ಟ್ ವಿಕೆಟ್‌ಕೀಪರ್‌ಗೆ ಮಾತ್ರ ನೀಡಲಾಗುವುದು ಮತ್ತು ಕೆಎಲ್ ರಾಹುಲ್ ಪ್ಲೇಯಿಂಗ್ ಇಲೆವೆನ್ ತಂಡದ ಭಾಗವಾಗಲಿದ್ದಾರೆ ಎಂದು ತಿಳಿಸಿದ್ದಾರೆ.

Ind vs Eng : team india player KL Rahul relieved from Test wicketkeeping duties

ರಾಹುಲ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ವಿದೇಶದಲ್ಲಿ ಟೆಸ್ಟ್ ಪಂದ್ಯಗಳ ಸಮಯದಲ್ಲಿ, ವೇಗದ ಬೌಲಿಂಗ್ ಸಮಯದಲ್ಲಿ ವಿಕೆಟ್ ಕೀಪರ್ ದೂರ ನಿಲ್ಲಬೇಕು, ಆದರೆ ಭಾರತದಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ಕೆಲಸವಿರುತ್ತದೆ, ಆದ್ದರಿಂದ ವಿಕೆಟ್ ಕೀಪಿಂಗ್ ಸುಲಭವಲ್ಲ. ಸ್ಪಿನ್-ಸ್ನೇಹಿ ಹೋಮ್ ಪಿಚ್‌ಗಳಲ್ಲಿ, ಚೆಂಡು ತಿರುಗಬಹುದು ಮತ್ತು ಪುಟಿಯಬಹುದು. ಇಲ್ಲಿ ವಿಕೆಟ್ ಕೀಪರ್ ನಿರಂತರವಾಗಿ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಬೇಕಾಗುತ್ತದೆ. ಈ ಪಾತ್ರಕ್ಕಾಗಿ ನಮಗೆ ತಜ್ಞರ ಅಗತ್ಯವಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರಾಹುಲ್ ನಮ್ಮ ಪ್ರಮುಖ ಬ್ಯಾಟ್ಸ್‌ಮನ್. ಅವರಿಗೆ ವಿಕೆಟ್‌ ಕೀಪಿಂಗ್ ಗ್ಲೌಸ್ ನೀಡುವ ಮೂಲಕ ಹೆಚ್ಚುವರಿ ಹೊರೆ ನೀಡಲು ನಾವು ಬಯಸುವುದಿಲ್ಲ. ಸ್ಟಂಪ್‌ಗಳ ಹಿಂದೆ ನಿಂತು ಗಾಯಗೊಳ್ಳುವ ಅಪಾಯವನ್ನು ನಾವು ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಸರಣಿಯಲ್ಲಿ ಭರತ್ ಮತ್ತು ಜುರೆಲ್ ನಮ್ಮ ವಿಕೆಟ್ ಕೀಪರ್ ಆಗಿರುತ್ತಾರೆ ಎಂದು ತಿಳಿಸಿದೆ.

Ind vs Eng : team india player KL Rahul relieved from Test wicketkeeping duties

ಕೆ.ಎಸ್.ಭರತ್ ಅವರಿಗೆ ಈ ಉತ್ತಮ ಅವಕಾಶ ಸಿಕ್ಕಿದೆ. ಇಲ್ಲಿಯವರೆಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್ ಆಗಿ ಉತ್ತಮ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗೆ, ಭರತ್ 5 ಟೆಸ್ಟ್ ಪಂದ್ಯಗಳಲ್ಲಿ 18.42 ಸರಾಸರಿಯಲ್ಲಿ 129 ರನ್ ಗಳಿಸಿದ್ದಾರೆ. ಅವಕಾಶ ಸಿಕ್ಕರೆ ಬ್ಯಾಟ್‌ನಿಂದ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು.

ಧ್ರುವ್ ಜುರೆಲ್ ಟೆಸ್ಟ್‌ಗೆ ಪದಾರ್ಪಣೆ?

ಧ್ರುವ್ ಜುರೆಲ್ ಚೊಚ್ಚಲ ಪಂದ್ಯ ಆಡುವ ಸಾಧ್ಯತೆಯೂ ಹೆಚ್ಚಿದೆ. ಜುರೆಲ್ ದೇಶೀಯ ಕ್ರಿಕೆಟ್‌ನಲ್ಲಿ ಕೆಂಪು ಚೆಂಡಿನ ಎದುರು ಪ್ರಬಲ ಪ್ರದರ್ಶನ ನೀಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಬ್ಯಾಟಿಂಗ್ ಸರಾಸರಿ 46.47 ಆಗಿದೆ. 15 ಪ್ರಥಮ ದರ್ಜೆ ಪಂದ್ಯಗಳಲ್ಲಿ 790 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 249 ರನ್.

Story first published: Sunday, January 14, 2024, 18:11 [IST]
Other articles published on Jan 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+