IND vs ENG: ಹೈದರಾಬಾದ್ ನಲ್ಲಿ ಟೀಮ್ ಇಂಡಿಯಾ ಸೋಲಿಗೆ ಈ ಆಟಗಾರರೇ ಕಾರಣ
ಗೆಲ್ಲ ಬಹುದಾದ ಪಂದ್ಯವನ್ನು ಹೇಗೆ ಸೋಲಬಹುದು ಎಂಬುದನ್ನು ಯಾವುದಾದರು ತಂಡ ಕಲಿಯಬೇಕು ಎಂದು ಕಲಿಯಬೇಕು ಅಂದರೆ, ಟೀಮ್ ಇಂಡಿಯಾವನ್ನು ನೋಡಿ ಕಲಿಯಬೇಕು. ತವರಿನ ಕಂಡೀಷನ್, ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ.. ಇಷ್ಟೇ ಏಕೆ ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು ಆರಂಭದಲ್ಲಿ ಕಟ್ಟಿ ಹಾಕಿ 163 ರನ್ ಆಗುವಷ್ಟರಲ್ಲಿ ಐದು ವಿಕೆಟ್ ಪಡೆದು ಮೇಲುಗೈ ಸಾಧಿಸಿತ್ತು.
ಈ ಹಂತದಲ್ಲಿ ಅಟ್ಯಾಕಿಂಗ್ ಬೌಲಿಂಗ್ ನಡೆಸುವಲ್ಲಿ ಎಡವಿದ ಟೀಮ್ ಇಂಡಿಯಾ ಬೌಲರ್ಸ್ ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ 420 ರನ್ ಕಲೆ ಹಾಕುವಂತಾಯಿತು. ಟೀಮ್ ಇಂಡಿಯಾ 231 ರನ್ ಗುರಿ ಪಡೆಯಿತು. ಆದರೆ ಈ ಗುರಿ ಬೆನ್ನಟ್ಟಲು ವಿಫಲವಾಯಿತು. ಟೀಮ್ ಇಂಡಿಯಾದ ಸೋಲು ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಓಲಿ ಪೋಪ್ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೊಂದಿಗೆ ಪ್ರಮುಖ ಜೊತೆಯಾಟ ನಡೆಸಿ ತಂಡದ ಸ್ಕೋರ್ ಅನ್ನು 420 ರನ್‌ಗಳಿಗೆ ಕೊಂಡೊಯ್ದರು. ಓಲಿ ಪೋಪ್‌ಗೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಬೆನ್ ಫಾಕ್ಸ್, ರೆಹಾನ್ ಅಹ್ಮದ್ ಮತ್ತು ಟಾಮ್ ಹಾರ್ಟ್ಲಿ ಉತ್ತಮ ಬೆಂಬಲ ನೀಡಿದರು. ಒಲಿ ಪೋಪ್ ದ್ವಿಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರೂ, ಅವರು ಇಂಗ್ಲೆಂಡ್ ಅನ್ನು ಉತ್ತಮ ಸ್ಥಿತಿಯಲ್ಲಿ ತಂದಿಟ್ಟರು. ಇದು ಟೀಮ್ ಇಂಡಿಯಾಕ್ಕೆ ಹಿನ್ನಡೆಗೆ ಮುಖ್ಯ ಕಾರಣವಾಯಿತು.
ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದ ರೋಹಿತ್ ಶರ್ಮಾ 24 ಮತ್ತು 37 ರನ್ ಗಳಿಸಿ ಔಟಾದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ತಪ್ಪು ಹೊಡೆತಕ್ಕೆ ಮುಂದಾಗಿ ಭಾರತದ ನಾಯಕ ಔಟಾದರು. ಇದು ಭಾರತದ ಸೋಲಿಗೆ ಪ್ರಮುಖ ಕಾರಣ. ರೋಹಿತ್ ಉತ್ತಮ ಆರಂಭವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಬೇಕಾಗಿತ್ತು.
ಶುಭಮನ್ ಗಿಲ್ 'ಫ್ಲಾಪ್' ಬ್ಯಾಟಿಂಗ್
ಎರಡನೇ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆ ಶುಭಮನ್ ಗಿಲ್ ಔಟಾದರು. ಗಿಲ್ ಕಳೆದ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಕೇವಲ 160 ರನ್ ಗಳಿಸಿದ್ದಾರೆ. ಹೈದರಾಬಾದ್ ಟೆಸ್ಟ್‌ನಲ್ಲಿ ಭಾರತದ ಸೋಲಿಗೆ ಗಿಲ್ ಅವರ ಕಳಪೆ ಫಾರ್ಮ್ ಎರಡನೇ ಕಾರಣವಾಗಿದೆ. ಅದರ ನಂತರ ಇದೀಗ ಶುಭಮನ್ ಗಿಲ್ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ. ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಇವರಿಗೆ ಮಣೆ ಹಾಕುತ್ತದಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಅನುಭವಿಗಳ ಅವಕಾಶ ಪಡೆದ ಯಂಗ್ ಪ್ಲೇಯರ್
ಶ್ರೇಯಸ್ ಅಯ್ಯರ್ ಅವರ ಕಳಪೆ ಪ್ರದರ್ಶನವೂ ಭಾರತದ ಸೋಲಿಗೆ ಕಾರಣವಾಯಿತು. ಅಯ್ಯರ್ ಕಳೆದ ಹಲವು ಪಂದ್ಯಗಳಿಂದ ಟೆಸ್ಟ್ ಮಾದರಿಯಲ್ಲಿ ರನ್ ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಅಯ್ಯರ್ ಕೇವಲ 13 ರನ್ ಗಳಿಸಿದರು. ಇವರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೆಟ್ಟು ನೀಡಿದ್ದಾರೆ. ಅಯ್ಯರ್ ಅವರನ್ನು ತಂಡಕ್ಕೆ ಕರೆತರಲು ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ಅನುಭವಿಗಳಿಗೆ ಬಾಗಿಲು ಮುಚ್ಚಲಾಗಿದೆ. ಇದು ತಪ್ಪು ನಿರ್ಧಾರ ಎಂದು ಈಗ ಸಾಬೀತಾಗುತ್ತಿದೆ.ಬೌ
ಬೌಲಿಂಗ್‌ನಲ್ಲಿ ಕಾಣಿಸದ ಮೊನಚು
ಭಾರತದ ಬೌಲರ್‌ಗಳ ಬೌಡಿ ಲಾಂಗ್ವೆಜ್ ಮೊದಲ ಇನ್ನಿಂಗ್ಸ್‌ನಂತೆ ಎರಡನೇ ಇನ್ನಿಂಗ್ಸ್‌ನಲ್ಲಿ ಇರಲಿಲ್ಲ. ಭಾರತೀಯ ಸ್ಪಿನ್ನರ್‌ಗಳು ಆಕ್ರಮಣಕಾರಿ ಬೌಲಿಂಗ್‌ಗಿಂತ ಹೆಚ್ಚು ರಕ್ಷಣಾತ್ಮಕವಾಗಿ ಬೌಲಿಂಗ್ ಮಾಡುತ್ತಿದ್ದರು. ಇದು ಇಂಗ್ಲೆಂಡ್‌ಗೆ ಪಂದ್ಯದಲ್ಲಿ ಪುನರಾಗಮನವನ್ನು ಮಾಡಲು ಮತ್ತು ದೊಡ್ಡ ಸ್ಕೋರ್ ಅನ್ನು ಕಲೆ ಹಾಕಲು ಅವಕಾಶವನ್ನು ನೀಡುವಂತೆ ಮಾಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications