IND vs ENG Test: ಲಾರ್ಡ್ಸ್‌ನಲ್ಲಿ ಜಿದ್ದು ಗೆದ್ದ ಇಂಗ್ಲೆಂಡ್: ಜಡೇಜಾ ಏಕಾಂಗಿ ಹೋರಾಟ
ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 22 ರನ್‌ಗಳ ಅಮೋಘ ಜಯ ಸಾಧಿಸಿದೆ. ಟೀಮ್ ಇಂಡಿಯಾ ಪರ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲವಾಗುತ್ತಿದ್ದ ಪಿಚ್ ಮೇಲೆ ಆಲ್‌ರೌಂಡರ್ ರವೀಂದ್ರ ಜಡೇಜಾ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇಂಗ್ಲೆಂಡ್ ಜಯದ ನಗುವನ್ನು ಹೆಚ್ಚು ಗಂಟೆ ಹತ್ತಿಕ್ಕುವಲ್ಲಿ ಜಡ್ಡು ಸಫಲರಾಗಿದ್ದರು. ಇಂಗ್ಲೆಂಡ್ ತಂಡದ ಪ್ರತಿ ಸವಾಲನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದ ಜಡೇಜಾ ಸೋಲಿನಲ್ಲಿ ಮಿಂಚಿದರು.
ಇಂಗ್ಲೆಂಡ್ ನೀಡಿದ್ದ 193 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಕೊನೆಯ ಎರಡು ವಿಕೆಟ್‌ಗೆ ಟೀಮ್ ಇಂಡಿಯಾದ ಆಟಗಾರರು ತೋರಿದ ಭರ್ಜರಿ ಪ್ರದರ್ಶನ ಎಲ್ಲರೂ ಹುಬ್ಬೇರಿಸುವಂತೆ ಮಾಡಿತು. ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಸುಮಾರು 1 ಗಂಟೆ 40 ನಿಮಿಷ ಬ್ಯಾಟ್ ಮಾಡಿ ಇಂಗ್ಲೆಂಡ್ ಗೆಲುವನ್ನು ದೂರ ಕೊಂಡೊಯ್ಯುವ ಪ್ಲ್ಯಾನ್ ಮಾಡಿಕೊಂಡರು. ಆದರೆ ಇಂಗ್ಲೆಂಡ್ ಇದಕ್ಕೆ ತಕ್ಕ ಗೇಮ್ ಪ್ಲ್ಯಾನ್ ಮಾಡಿತು. ಕೊನೆಯ ಎರಡು ವಿಕೆಟ್ ಪಡೆಯಲು ಇಂಗ್ಲೆಂಡ್ 212 ಬೌಲ್ ಮಾಡಬೇಕಾಯಿತು.

ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ (39) ಬೆನ್ ಸ್ಟೋಕ್ಸ್ ತೋಡಿದ ಖೆಡ್ಡಾಗೆ ಬಲಿಯಾದರು. ರಿಷಭ್ ಪಂತ್ (9) ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ನಿತೀಶ್ ಕುಮಾರ್ ರೆಡ್ಡಿ (13) ಕೊಂಚ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು.
50 ಓವರ್ ಬ್ಯಾಟಿಂಗ್
ಟೀಮ್ ಇಂಡಿಯಾ 82 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂರು ವಿಕೆಟ್‌ಗಳನ್ನು ಪಡೆಯಲು ಇಂಗ್ಲೆಂಡ್ 50 ಓವರ್ ಬೌಲಿಂಗ್ ನಡೆಸಿತು. ಕೆಳ ಕ್ರಮಾಂಕದ ಆಟಗಾರರೊಂದಿಗೆ ಬ್ಯಾಟಿಂಗ್ ನಡೆಸಿದ ರವೀಂದ್ರ ಜಡೇಜಾ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ನೈಜ್ಯ ಬ್ಯಾಟಿಂಗ್ ಶೈಲಿಗೆ ವಿರುದ್ಧವಾಗಿ ಬ್ಯಾಟ್ ಮಾಡಿ ಮಿಂಚಿದರು.
ಜಸ್ಪ್ರೀತ್ ಬುಮ್ರಾ 54 ಎಸೆತಗಳನ್ನು ಎದುರಿಸಿ 5 ರನ್ ಬಾರಿಸಿದರು. ಇನ್ನು ಮೊಹಮ್ಮದ್ ಸಿರಾಜ್ 30 ಎಸೆತಗಳನ್ನು ಎದುರಿಸಿ 4 ರನ್ ಸಿಡಿಸಿದರು. ಆಲ್‌ರೌಂಡರ್ ರವೀಂದ್ರ ಜಡೇಜಾ 181 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 61 ರನ್ ಸಿಡಿಸಿದರು.
ಇಂಗ್ಲೆಂಡ್ ತಂಡದ ಪರ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ತಲಾ 3 ವಿಕೆಟ್ ಪಡೆದರು. ಇನ್ನು ಬ್ರೈಡನ್ ಕಾರ್ಸೆ 2 ವಿಕೆಟ್ ಕಬಳಿಸಿದರು. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಇಂಗ್ಲೆಂಡ್ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications