IND vs ENG Test: ಮೊಹಮ್ಮದ್ ಸಿರಾಜ್‌ಗೆ 6 ವಿಕೆಟ್: ಭಾರತಕ್ಕೆ 180 ರನ್ ಮುನ್ನಡೆ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡ ಸ್ಥಿರ ಪ್ರದರ್ಶನ ನೀಡಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಭಮನ್ ಗಿಲ್ ಪಡೆ ಅಮೋಘ ಪ್ರದರ್ಶನ ನೀಡಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ 6 ವಿಕೆಟ್ ಪಡೆದು ಮಿಂಚಿದರು. ಪರಿಣಾಮ ಭಾರತ ತಂಡ 180 ರನ್‌ಗಳ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ನೆರವಾದರು.
ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ನೆಲದಲ್ಲಿ 5ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ನಾಲ್ಕನೇ ಬಾರಿಗೆ ಐದಕ್ಕೂ ಹೆಚ್ಚು ವಿಕೆಟ್ ಪಡೆದು ಬೀಗಿದರು. ಇಂಗ್ಲೆಂಡ್ ವಿರುದ್ಧ ಇದೆ ಮೊದಲ ಬಾರಿಗೆ ಐದಕ್ಕೂ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದರು. ಇದಕ್ಕೂ ಮೊದಲು ಸಿರಾಜ್ 2021ರಲ್ಲಿ ಲಾರ್ಡ್ಸ್‌ನಲ್ಲಿ 4 ವಿಕೆಟ್ ಪಡೆದು ಬೀಗಿದ್ದರು.

ಆರಂಭದಿಂದಲೂ ಬಿಗುವಿನ ದಾಳಿ ನಡೆಸಿದ ಸಿರಾಜ್ ತಮ್ಮ ಕ್ಲಾಸಿಕ್ ಬೌಲಿಂಗ್ ಪ್ರದರ್ಶನ ನೀಡಿದರು. ಸಿರಾಜ್, ಇಂಗ್ಲೆಂಡ್ ತಂಡದ ಜಾಕ್ ಕ್ರಾಲಿ, ಜೋ ರೂಟ್, ಬೆನ್ ಸ್ಟೋಕ್ಸ್, ಜೋಶ್ ಟಂಗ್, ಶೋಯಿಬ್ ಬಸೀರ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ ಆರು ವಿಕೆಟ್ ಪಡೆದರು. ಎರಡನೇ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆದ ಆಕಾಶ್ ದೀಪ್ 4 ವಿಕೆಟ್ ಉರುಳಿಸಿದರು.
ಸಿರಾಜ್ ಟೆಸ್ಟ್‌ನಲ್ಲಿ ಬೆಸ್ಟ್ ಬೌಲಿಂಗ್ ಪ್ರದರ್ಶನ
ದಕ್ಷಿಣ ಆಫ್ರಿಕಾ ವಿರುದ್ಧ, 15 ರನ್‌ಗೆ 8 ವಿಕೆಟ್
ಇಂಗ್ಲೆಂಡ್ ವಿರುದ್ಧ, 70 ರನ್‌ಗೆ 6 ವಿಕೆಟ್
ವೆಸ್ಟ್ ಇಂಡೀಸ್ ವಿರುದ್ಧ, 60 ರನ್‌ಗೆ 5 ವಿಕೆಟ್
ಆಸ್ಟ್ರೇಲಿಯಾ ವಿರುದ್ಧ, 73 ರನ್‌ಗೆ 5 ವಿಕೆಟ್
ಇಂಗ್ಲೆಂಡ್ ವಿರುದ್ಧ, 32 ರನ್‌ಗೆ 4 ವಿಕೆಟ್
303 ರನ್ ಜೊತೆಯಾಟ
ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಆಟಗಾರರಾದ ಹ್ಯಾರಿ ಬ್ರೂಕ್ ಹಾಗೂ ಜೇಮಿ ಸ್ಮಿತ್ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 368 ಎಸೆತಗಳಲ್ಲಿ 303 ರನ್‌ಗಳ ಅಮೋಘ ಜೊತೆಯಾಟ ನೀಡಿತು. ಈ ಮೂಲಕ ಈ ಜೋಡಿ ಇಂಗ್ಲೆಂಡ್ ತಂಡಕ್ಕೆ ಆಧಾರವಾಯಿತು. ಹ್ಯಾರಿ ಬ್ರೂಕ್ 17 ಬೌಂಡರಿ, 1 ಸಿಕ್ಸರ್ ಸಹಾಯದಿಂದ 158 ರನ್ ಸಿಡಿಸಿದರು. ಇನ್ನು ವಿಕೆಟ್ ಕೀಪರ್ ಜೇಮಿ ಸ್ಮಿತ್ ಅಜೇಯರಾಗಿ 184 ರನ್ ಸಿಡಿಸಿದರು. ಇವರ ಬ್ಯಾಟ್‌ನಿಂದ 21 ಬೌಂಡರಿ, 4 ಸಿಕ್ಸರ್ ಸಿಡಿಸಿದರು.
20 ರನ್‌ಗೆ 5 ವಿಕೆಟ್
ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 387 ರನ್‌ಗೆ 5 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಈ ವೇಳೆ ಟೀಮ್ ಇಂಡಿಯಾದ ವೇಗದ ಬೌಲರ್‌ಗಳು ಅಬ್ಬರಿಸಿದರು. ಕೊನೆಯ 5 ವಿಕೆಟ್‌ಗಳನ್ನು ಟೀಮ್ ಇಂಡಿಯಾದ ಬೌಲರ್ಸ್ 20 ರನ್‌ಗಳ ಅಂತರದಲ್ಲಿ ಪಡೆದು ಬೀಗಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications