ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮತ್ತೊಮ್ಮೆ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳನ್ನು ದಂಡಿಸಿದ ಎಡಗೈ ಬ್ಯಾಟರ್ ಆರ್ಭಟಿಸಿದ್ದಾರೆ. ತಮ್ಮ ನೈಜ್ಯ ಆಟ ಆಡಿದ ರಿಷಭ್ ಪಂತ್ ಅಭಿಮಾನಿಗಳ ಮನ ಕದ್ದರು.
ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭಮನ್ ಗಿಲ್ ಶತಕ ಬಾರಿಸಿ ಸಂಭ್ರಮಿಸಿದ ನಂತರ ಉಪನಾಯಕ ರಿಷಭ್ ಪಂತ್ ಸಹ ತಮ್ಮ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾದರು. ಅಲ್ಲದೆ ಭಾರತದ ಪರ ವಿಕೆಟ್ ಕೀಪರ್ ಆಗಿ ಏಳನೇ ಶತಕ ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಇವರ ಈ ಕ್ಲಾಸಿಕ್ ಇನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿವೆ. ಈ ಮೂಲಕ ರಿಷಭ್ ಪಂತ್ ಹಲವು ದಾಖಲೆಯನ್ನು ಬರೆದರು.

ರಿಷಭ್ ಪಂತ್ ಅವರು ಈ ಹಿಂದೆ ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ಸೆಪ್ಟಂಬರ್ 19, 2024 ರಂದು ಶತಕ ಬಾರಿಸಿ ಸಂಭ್ರಮಿಸಿದ್ದರು. ಶನಿವಾರ ಇಂಗ್ಲೆಂಡ್ ವಿರುದ್ಧ ತಮ್ಮ ನೈಜ್ಯ ಆಟವನ್ನು ಆಡಿ ಗಮನ ಸೆಳೆದರು. ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಮಾಡಿದ ರಿಷಭ್ ಪಂತ್, ಬೌನ್ಸಿ ಪಿಚ್‌ಗಳಲ್ಲಿ ಹೇಗೆ ಆಡಬೇಕು ಎಂಬುದನ್ನು ತೋರಿಸಿಕೊಟ್ಟರು. ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ಬಾರಿಸಿದ ಶತಕ, ಆಂಗ್ಲರ ವಿರುದ್ಧ ಬಾರಿಸಿದ ನಾಲ್ಕನೇ ಶತಕವಾಗಿತ್ತು. ಇನ್ನು ಇಂಗ್ಲೆಂಡ್‌ನಲ್ಲಿ ಮೂರನೇ ಶತಕ ಸಿಡಿಸಿದ ಸಂಭ್ರಮಿಸಿದರು. ರಿಷಭ್ ಪಂತ್, ನಾಯಕ ಶುಭಮನ್ ಗಿಲ್ ಅವರೊಂದಿಗೆ 4ನೇ ವಿಕೆಟ್‌ಗೆ 301 ಎಸೆತಗಳಲ್ಲಿ 209 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ಆಧಾರವಾದರು.
ರಿಷಭ್ ಪಂತ್ ಇಂಗ್ಲೆಂಡ್ ತಂಡದ ಬಸೀರ್ ಅವರ ಸ್ಪಿನ್ ಎಸೆತವನ್ನು ಆನ್ ಸೈಡ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಬಾರಿಸಿ ಸಂಭ್ರಮಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಬಾರಿಸಿದ ಏಳನೇ ಶತಕವಾಗಿದೆ. ಈ ಮೂಲಕ ಪಂತ್ ತಮ್ಮ ಗುರು ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಅಳಿಸಿದರು. ಭಾರತದ ಪರ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅತಿ ಹೆಚ್ಚು ಶತಕ ಬಾರಿಸಿದ ಹಿರಿಮೆ ಹೊಂದಿದ್ದರು. ಎಂಎಸ್ ಧೋನಿ 6 ಶತಕ ಬಾರಿಸಿದ ಹಿರಿಮೆಯನ್ನು ಹೊಂದಿದ್ದಾರೆ.
ರಿಷಭ್ ಪಂತ್, 43 ಟೆಸ್ಟ್, 7 ಶತಕ
ಎಂಎಸ್ ಧೋನಿ, 90 ಟೆಸ್ಟ್, 6 ಶತಕ
ವೃದ್ಧಿಮನ್ ಸಹಾ, 40 ಟೆಸ್ಟ್, 3 ಶತಕ
ಫಾರೂಖ್ ಇಂಜಿನಿಯರ್, 46 ಟೆಸ್ಟ್, 2 ಶತಕ
ಸೈಯದ್ ಕಿರ್ಮಾನಿ, 88 ಟೆಸ್ಟ್, 2 ಶತಕ