IND vs ENG: ಕೊನೆಗೂ ಭಾರತದ ವೀಸಾ ಪಡೆದ ಇಂಗ್ಲೆಂಡ್ ತಂಡದ ಸ್ಟಾರ್ ಸ್ಪಿನ್ನರ್ ಶೋಯೆಬ್ ಬಶೀರ್
ಗುರುವಾರ, ಜನವರಿ 25ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.
ಆದರೆ, ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತದ ವೀಸಾ ವಿಳಂಬದಿಂದಾಗಿ, ಇಂಗ್ಲೆಂಡ್ ಪ್ರಕಟಿಸಿದ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲು ಸ್ಟಾರ್ ಸ್ಪಿನ್ನರ್ ಶೋಯೆಬ್ ಬಶೀರ್‌ಗೆ ಸಾಧ್ಯವಾಗಲಿಲ್ಲ.

ಆದರೆ, ಎರಡು ದಿನಗಳ ನಂತರ ಇಂಗ್ಲೆಂಡ್‌ನ ಯುವ ಸ್ಪಿನ್ನರ್ ಶೋಯೆಬ್ ಬಶೀರ್ ಅವರು ಟೆಸ್ಟ್ ಸರಣಿಗಾಗಿ ಭಾರತಕ್ಕೆ ಆಗಮಿಸಲು ವೀಸಾ ಕ್ಲಿಯರೆನ್ಸ್ ಪಡೆದಿದ್ದಾರೆ. ಈ ಕುರಿತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಪ್ರತಿಕ್ರಿಯಿಸಿ, ಆ ಸಮಸ್ಯೆಯನ್ನು ಪರಿಹರಿಸಲಾಗಿದೆ ಮತ್ತು ವಾರಾಂತ್ಯದಲ್ಲಿ ತಂಡವನ್ನು ಸೇರಲಿದ್ದಾರೆ ಎಂದಿದೆ.
"ಶೋಯೆಬ್ ಬಶೀರ್ ಈಗ ತಮ್ಮ ವೀಸಾವನ್ನು ಪಡೆದಿದ್ದಾರೆ ಮತ್ತು ಈ ವಾರಾಂತ್ಯದಲ್ಲಿ ಭಾರತದಲ್ಲಿ ಇಂಗ್ಲೆಂಡ್ ತಂಡದೊಂದಿಗೆ ಸೇರಲು ಪ್ರಯಾಣಿಸಲಿದ್ದಾರೆ. ಪರಿಸ್ಥಿತಿಯನ್ನು ಪರಿಹರಿಸಲಾಗಿದೆ ಎಂದು ಹೇಳಲು ನಮಗೆ ಸಂತೋಷವಾಗಿದೆ," ಎಂದು ಇಸಿಬಿ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಏನಿದು ವೀಸಾ ಸಮಸ್ಯೆ?
ವೀಸಾ ವಿಳಂಬದಿಂದ ಶೋಯೆಬ್ ಬಶೀರ್ ಮತ್ತೆ ಇಂಗ್ಲೆಂಡ್‌ಗೆ ಮರಳಿದರು. ಇದರಿಂದ ಹೈದರಾಬಾದ್‌ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಯಿತು.

2023ರ ಡಿಸೆಂಬರ್ 11ರಂದು ಶೋಯೆಬ್ ಬಶೀರ್ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರೂ ಮತ್ತು ಉಳಿದ ಪ್ರವಾಸಿ ತಂಡವು ತಮ್ಮ ಕ್ಲೀಯರೆನ್ಸ್ ತ್ವರಿತವಾಗಿ ಪಡೆದರು. ಆದರೆ ಶೋಯೆಬ್ ಬಶೀರ್ ಅವರ ಅರ್ಜಿಯನ್ನು ವಿಳಂಬಗೊಳಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಈ ವಿಷಯದ ಬಗ್ಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು. ವೀಸಾ ಸಮಸ್ಯೆಗಳಿಂದ ತಂಡಕ್ಕೆ ಸೇರಲು ಸಾಧ್ಯವಾಗದ ಆಟಗಾರನನ್ನು ಆಯ್ಕೆ ಮಾಡುವ ಹತಾಶೆಯನ್ನು ಎತ್ತಿ ತೋರಿಸಿದರು.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪೂರ್ವ-ಸರಣಿ ಶಿಬಿರದ ಸಮಯದಲ್ಲಿ ಅಬುಧಾಬಿಯಲ್ಲಿ ಸಮಸ್ಯೆಯನ್ನು ಪರಿಹರಿಸಲು ನಿರೀಕ್ಷಿಸಿತ್ತು. ಆದರೆ ಅಂತಿಮವಾಗಿ ಶೋಯೆಬ್ ಬಶೀರ್ ಅವರನ್ನು ಹೆಚ್ಚಿನ ದಾಖಲೆಗಳಿಗಾಗಿ ಯುಕೆಗೆ ಕಳುಹಿಸಬೇಕಾಯಿತು.
"ನಾಯಕನಾಗಿ ನಾನು ಇದರಿಂದ ವಿಶೇಷವಾಗಿ ಹತಾಶೆಗೊಂಡಿದ್ದೇನೆ. ನಾವು ಡಿಸೆಂಬರ್ ಮಧ್ಯದಲ್ಲಿ ಟೆಸ್ಟ್ ತಂಡವನ್ನು ಘೋಷಿಸಿದ್ದೇವೆ. ನಾನು ಅವನ ಬಗ್ಗೆ ಹೆಚ್ಚು ನಿರಾಶೆಗೊಂಡಿದ್ದೇನೆ. ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಈ ರೀತಿಯ ಪರಿಸ್ಥಿತಿ ಅವರ ಮೊದಲ ಅನುಭವವಾಗುವುದು ನನಗೆ ಇಷ್ಟವಿರಲಿಲ್ಲ. ನಾನು ಅವನ ಬಗ್ಗೆ ಮರುಕ ಪಡುತ್ತೇನೆ," ಎಂದು ಬೆನ್ ಸ್ಟೋಕ್ಸ್ ಹೇಳಿದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಶೋಯೆಬ್ ಬಶೀರ್ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಾರೆ ಮತ್ತು ಯುವ ಸ್ಪಿನ್ನರ್ ಶೀಘ್ರದಲ್ಲೇ ಭಾರತವನ್ನು ತಲುಪುತ್ತಾರೆ ಎಂದು ಭಾವಿಸಿದರು. ದುರದೃಷ್ಟಕರ ಘಟನೆಯ ನಂತರ, ಬಿಸಿಸಿಐಗೆ ಹಿನ್ನಡೆಯುಂಟಾಗಿದ್ದು, ಇಂಗ್ಲೆಂಡ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
"ನಾನು ಶೋಯೆಬ್ ಬಶೀರ್ ವೀಸಾ ಸಮಸ್ಯೆ ದುರದೃಷ್ಟಕರ. ನಿಮಗೆ ಹೆಚ್ಚಿನ ವಿವರಗಳನ್ನು ನೀಡಲು ನಾನು ವೀಸಾ ಕಚೇರಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಆದರೆ ಅವರು ಅದನ್ನು ತ್ವರಿತವಾಗಿ ಪಡೆಯುತ್ತಾರೆ ಮತ್ತು ನಮ್ಮ ದೇಶವನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ರೋಹಿತ್ ಶರ್ಮಾ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹೀಗಾಗಿ ಫೆಬ್ರವರಿ 2ರಂದು ವಿಶಾಖಪಟ್ಟಣದಲ್ಲಿ ಪ್ರಾರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಆಡಲು ಶೋಯೆಬ್ ಬಶೀರ್ ಮೊದಲ ಆಯ್ಕೆಯಲ್ಲಿರುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications