'ರವೀಂದ್ರ ಜಡೇಜಾರನ್ನು ಭಾರತ ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ'

ಚೆನ್ನೈ: ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ಟೀಮ್ ಇಂಡಿಯಾ ಬಹಳ ಮಿಸ್ ಮಾಡಿಕೊಳ್ಳುತ್ತಿದೆ ಎಂದು ಭಾರತದ ಪತ್ರಕರ್ತ ಬೋರಿಯಾ ಮಜುಂದಾರ್ ಹೇಳಿದ್ದಾರೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿ ಜಡೇಜಾ ಅವಶ್ಯಕತೆ ತುಂಬಾ ಇದೆ ಎಂದು ಮಜುಂದಾರ್ ಅಭಿಪ್ರಾಯಿಸಿದ್ದಾರೆ.
ಟ್ವೀಟ್ ಮಾಡಿರುವ ಬೋರಿಯಾ ಮಜುಂದಾರ್, 'ಎಲ್ಲರಿಗಿಂತ ಹೆಚ್ಚಾಗಿ ನಾವು ರವೀಂದ್ರ ಜಡೇಜಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಜ್ಯಾಕ್ ಲೀಚ್ ಅವರು ಶಹಬಾಝ್ ನದೀಮ್ ಅವರನ್ನು ಔಟ್ ಮಾಡಿದ ರೀತಿ ನೋಡಿದರೆ ಈ ಟೆಸ್ಟ್ ಎಷ್ಟು ವಿಭಿನ್ನ ಅನ್ನೋದು ಗೊತ್ತಾಗುತ್ತದೆ,' ಎಂದು ಬರೆದಿದ್ದಾರೆ.
'ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಜಡೇಜಾ ಅವರ ಅವಶ್ಯಕತೆ ಎಷ್ಟೆಂದು ತೋರಿಸಿದೆ. ಆರ್ ಅಶ್ವಿನ್‌ಗೆ ಬೆಂಬಲವಾಗಿ ಕುಲದೀಪ್ ಯಾದವ್ ಮುಂದಿನ ಪಂದ್ಯದಲ್ಲಿ ಆಡಬೇಕು' ಎಂದು ಮಜುಂದಾರ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ವೇಳೆ ರವೀಂದ್ರ ಜಡೇಜಾ ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದರು.
ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಮೊದಲನೇ ಟೆಸ್ಟ್ ಅನ್ನು ಗೆದ್ದುಕೊಂಡಿದೆ. ದ್ವಿತೀಯ ಟೆಸ್ಟ್ ಫೆಬ್ರವರಿ 13ರಿಂದ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ಈ ಟೆಸ್ಟ್ ಸರಣಿಯ ಫಲಿತಾಂಶ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಸ್ಪರ್ಧಿಯನ್ನು ನಿರ್ಧರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications