ವೈಯಕ್ತಿಕ ಜಗಳದಿಂದ ಅಶ್ವಿನ್‌ಗೆ ಕೊಹ್ಲಿ ತಂಡದಲ್ಲಿ ಸ್ಥಾನ ನೀಡುತ್ತಿಲ್ಲ ಎಂದು ಹೇಳಿಕೆ ನೀಡಿದ ಕ್ರಿಕೆಟಿಗ!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿವೆ. ಹಾಗೂ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಸದ್ಯ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಮುನ್ನಡೆಯನ್ನು ಸಾಧಿಸಿದೆ. ಇನ್ನು ಈ 4 ಪಂದ್ಯಗಳಲ್ಲಿಯೂ ಸಹ ಭಾರತದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಸ್ಥಾನವನ್ನು ನೀಡದೇ ಇರುವುದು ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಲಾರ್ಡ್ಸ್ ಅಂಗಳದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ನೀಡಿದ ಅತ್ಯದ್ಬುತ ಪ್ರದರ್ಶನದಿಂದ ಟೀಂ ಇಂಡಿಯಾ 151 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿ ಸರಣಿಯಲ್ಲಿ ಗೆಲುವಿನ ಖಾತೆ ತೆರೆಯುವುದರ ಮೂಲಕ ಮುನ್ನಡೆಯನ್ನು ಕಾಯ್ದುಕೊಂಡಿತು. ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಅದೇ ಬೌಲಿಂಗ್ ಪಡೆಯನ್ನು ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದಲ್ಲಿಯೂ ಮುಂದುವರಿಸಲಾಯಿತು. ಆದರೆ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾರತದ ಬೌಲರ್‌ಗಳು ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಂಕಾದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸರಣಿ ಸಹಿತ 76 ರನ್‌ಗಳ ಸೋಲನ್ನು ಅನುಭವಿಸಿತು.
ಸರಣಿಯ ಮೊದಲನೇ ಪಂದ್ಯದಿಂದಲೂ ಸಹ ರವಿಚಂದ್ರನ್ ಅಶ್ವಿನ್ ಅವರಿಗೆ ತಂಡದಲ್ಲಿ ಸ್ಥಾನ ನೀಡದೆ ಇರುವುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು, ಅದರಲ್ಲಿಯೂ ಪ್ರಸ್ತುತ ನಡೆಯುತ್ತಿರುವ ಓವಲ್ ಟೆಸ್ಟ್ ಪಂದ್ಯದಲ್ಲಿಯೂ ರವಿಚಂದ್ರನ್ ಅಶ್ವಿನ್ ಅವರಿಗೆ ಸ್ಥಾನ ನೀಡದೇ ಇರುವುದು ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ವಿಶ್ವದ ಎರಡನೇ ಅತ್ಯುತ್ತಮ ಟೆಸ್ಟ್ ಬೌಲರ್ ಹಾಗೂ ಮೊದಲನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಆಗಿರುವ ರವಿಚಂದ್ರನ್ ಅಶ್ವಿನ್ ಅವರಿಗೆ ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್ ಪಂದ್ಯಗಳಲ್ಲಿಯೂ ಅವಕಾಶ ನೀಡದೇ ಇರುವುದರ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗುತ್ತಿದ್ದು, ಇಂಗ್ಲೆಂಡ್ ಕ್ರಿಕೆಟಿಗ ನಿಕ್ ಕಾಂಪ್ಟನ್ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ರವಿಚಂದ್ರನ್ ಅಶ್ವಿನ್ ಅವರನ್ನು ವಿರಾಟ್ ಕೊಹ್ಲಿ ಆಯ್ಕೆ ಮಾಡದೇ ಇರುವುದರ ಕುರಿತು ತಮ್ಮ ಪಾಲಿನ ಟೀಕೆ ವ್ಯಕ್ತಪಡಿಸಿದ್ದಾರೆ.
ಹೌದು, ರವಿಚಂದ್ರನ್ ಅಶ್ವಿನ್ ಅವರಿಗೆ ಇಂಗ್ಲೆಂಡ್ ವಿರುದ್ಧದ ಮೊದಲ 4 ಟೆಸ್ಟ್ ಪಂದ್ಯಗಳಲ್ಲಿಯೂ ಅವಕಾಶ ನೀಡದೆ ಇರುವುದರ ಕುರಿತು ನಿಕ್ ಕಾಂಪ್ಟನ್ ಈ ಕೆಳಕಂಡಂತೆ ಟೀಕೆಯನ್ನು ಮಾಡಿದ್ದಾರೆ..

ಅಶ್ವಿನ್ ಆಯ್ಕೆಯಾಗದೆ ಇರಲು ವೈಯಕ್ತಿಕ ಜಗಳ ಕಾರಣ ಎಂದ ಕಾಂಪ್ಟನ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ 4 ಟೆಸ್ಟ್ ಪಂದ್ಯಗಳಲ್ಲಿಯೂ ರವಿಚಂದ್ರನ್ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳದೇ ಬೆಂಚ್ ಕಾಯುತ್ತಿದ್ದಾರೆ. ಈ ಕುರಿತಾಗಿ ತನ್ನ ಪಾಲಿನ ಟೀಕೆಯನ್ನು ಇಂಗ್ಲೆಂಡ್ ದೇಶದ ಕ್ರಿಕೆಟ್ ಆಟಗಾರ ನಿಕ್ ಕಾಂಪ್ಟನ್ ವ್ಯಕ್ತಪಡಿಸಿದ್ದು ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ನಡುವೆ ಇರುವ ವೈಯಕ್ತಿಕ ಭಿನ್ನಾಭಿಪ್ರಾಯದಿಂದಲೇ ಈ ರೀತಿಯ ನಿರ್ಧಾರವನ್ನು ವಿರಾಟ್ ಕೊಹ್ಲಿ ತೆಗೆದುಕೊಂಡಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ನಡುವಿನ ವೈಯಕ್ತಿಕ ಜಗಳದಿಂದಲೇ ಇಷ್ಟೆಲ್ಲಾ ನಡೆಯುತ್ತಿದೆ ಎಂದು ನಿಕ್ ಕಾಂಪ್ಟನ್ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿಯದ್ದು ಹೊಲಸುಬಾಯಿ ಎಂದಿದ್ದ ನಿಕ್ ಕಾಂಪ್ಟನ್
ಇಂಗ್ಲೆಂಡ್ ಕ್ರಿಕೆಟಿಗ ನಿಕ್ ಕಾಂಪ್ಟನ್ ವಿರಾಟ್ ಕೊಹ್ಲಿ ವಿಚಾರದಲ್ಲಿ ಮೂಗು ತೂರಿಸಿ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಇದೇ ಸರಣಿಯ ದ್ವಿತೀಯ ಪಂದ್ಯದ ವೇಳೆ ವಿರಾಟ್ ಕೊಹ್ಲಿ ರೋಷಾವೇಷದ ಆಟದ ವಿರುದ್ಧ ಕಿಡಿಕಾರಿದ್ದ ನಿಕ್ ಕಾಂಪ್ಟನ್ ವಿರಾಟ್ ಕೊಹ್ಲಿಯದ್ದು ಹೊಲಸು ಬಾಯಿ, ಆತ ಎದುರಾಳಿಗಳನ್ನು ಮೈದಾನದಲ್ಲಿ ಅತಿ ಕೆಟ್ಟ ಪದಗಳಿಂದ ನಿಂದಿಸುತ್ತಾನೆ. ಆತ ಸಚಿನ್ ತೆಂಡುಲ್ಕರ್ ಮತ್ತು ಕೇನ್ ವಿಲಿಯಮ್ಸನ್ ರೀತಿಯ ಶಾಂತ ಸ್ವಭಾವದ ಆಟಗಾರನಲ್ಲ ಎಂದು ನಿಕ್ ಕಾಂಪ್ಟನ್ ವಿವಾದಾತ್ಮಕ ಹೇಳಿಕೆಯನ್ನು ಈ ಹಿಂದೆ ಕೂಡ ನೀಡಿದ್ದರು.

ಅಶ್ವಿನ್‌ಗೆ ಸ್ಥಾನ ಸಿಗದಿರುವುದರ ಕುರಿತು ವಿರಾಟ್ ಕೊಹ್ಲಿ ಕೊಟ್ಟಿದ್ದ ಕಾರಣವಿದು
ಇನ್ನು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ರವಿಚಂದ್ರನ್ ಅಶ್ವಿನ್ ಅವರಿಗೆ ಸ್ಥಾನ ಸಿಗದೇ ಇರುವುದರ ಕುರಿತು ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದ ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡದಲ್ಲಿ ನಾಲ್ವರು ಎಡಗೈ ಬ್ಯಾಟ್ಸ್‌ಮನ್‌ಗಳು ಇದ್ದಾರೆ, ಹೀಗಾಗಿ ರವೀಂದ್ರ ಜಡೇಜಾ ಕೂಡ ಎಡಗೈ ಆಟಗಾರನಾಗಿರುವ ಕಾರಣ ತಂಡದಲ್ಲಿ ಸ್ಥಾನ ನೀಡಲಾಯಿತು ಎಂದು ಹೇಳಿಕೆ ನೀಡಿದ್ದರು. ಇಂಗ್ಲೆಂಡ್ ಪಿಚ್‌ಗಳಲ್ಲಿ ನಾಲ್ವರು ವೇಗಿಗಳು ಮತ್ತು ಓರ್ವ ಸ್ಪಿನ್ ಬೌಲರ್‌ಗೆ ಅವಕಾಶವನ್ನು ನೀಡಲಾಗುತ್ತಿದೆ ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ರವಿಚಂದ್ರನ್ ಅಶ್ವಿನ್ ಬದಲು ರವೀಂದ್ರ ಜಡೇಜಾಗೆ ಅವಕಾಶ ನೀಡಲಾಯಿತು ಇದು ವಿರಾಟ್ ಕೊಹ್ಲಿ ಕಾರಣವನ್ನು ತಿಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications