Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತದ ಗೆಲುವಿಗೆ ಕಾರಣವಾದ ಮೂರು ಕಾರಣಗಳು

ಭಾರತ, ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯನ್ನು ಹೀನಾಯವಾಗಿ ಸೋಲು ಕಂಡಿತ್ತು. ಈ ಸೋಲಿನ ಕಹಿಯನ್ನು ಮರೆಯಲು ಟೀಮ್ ಇಂಡಿಯಾಕ್ಕೆ ಏಕದಿನ ಸರಣಿ ಮಹತ್ವದಾಗಿತ್ತು. ಮಂಗಳವಾರ ಬರ್ಮಿಂಗ್‌ಹ್ಯಾಮ್‌ ಅಂಗಳದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತ ತಂಡದ ಪರ ಈ ಪಂದ್ಯದಲ್ಲಿ ಅನುಭವಿ ಆಟಗಾರರು ಕಣಕ್ಕೆ ಇಳಿದರು. 6 ತಿಂಗಳುಗಳ ಬಳಿಕ ವಿರಾಟ್‌ ಕೊಹ್ಲಿ, ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದ ಬಳಿಕ ಜಸ್ಪ್ರೀತ್ ಬುಮ್ರಾ ಮೈದಾನಕ್ಕೆ ಇಳಿದಿದ್ದರು. ಹೀಗಾಗಿ ಟೀಮ್ ಇಂಡಿಯಾ ಬಲಿಷ್ಠವಾಗಿ ಕಂಡಿತು. ಅದರಂತೆ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ 6 ವಿಕೆಟ್‌ ಜಯ ಸಾಧಿಸಿತು. ಇಂಗ್ಲೆಂಡ್‌ ವಿರುದ್ಧ ಟೀಮ್ ಇಂಡಿಯಾ ಮೊದಲ ಗೆಲುವು ದಾಖಲಿಸಲು ಕಾರಣವಾದ ಆ ಮೂರು ಅಂಶಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

IND vs ENG

ಟೀಮ್ ಇಂಡಿಯಾದ ಪರ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಲ್‌ರೌಂಡರ್‌ ಅಕ್ಷರ್ ಪಟೇಲ್ ಮಿಂಚಿದರು. ಇವರು ಬೌಲಿಂಗ್‌ನಲ್ಲಿ 4 ಹಾಗೂ ಬ್ಯಾಟಿಂಗ್‌ನಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಪರಿಣಾಮ ಭಾರತ ಸುಲಭ ಗೆಲುವು ದಾಖಲಿಸಿತು. ಆದರೆ ಭಾರತ ಗೆಲ್ಲಲು ಕಾರಣವಾದ ಮೊದಲ ಅಂಶ ಎಂದರೆ ಬಿಗುವಿನ ದಾಳಿ.

7 ಎಸೆತಗಳಲ್ಲಿ 3 ವಿಕೆಟ್‌

ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿತು. ಆರಂಭದಲ್ಲಿ ಇಂಗ್ಲೆಂಡ್‌ 12.1 ಓವರ್‌ಗಳಲ್ಲಿ 61 ರನ್ ಸೇರಿಸಿ ಸುಸ್ಥಿತಿಯಲ್ಲಿತ್ತು. ಆದರೆ ನಂತರದ ಏಳು ಎಸೆತಗಳಲ್ಲಿ ಇಂಗ್ಲೆಂಡ್‌ ತನ್ನ ಮೂವರು ಸ್ಟಾರ್ ಆಟಗಾರರನ್ನು ಕಳೆದುಕೊಂಡಿತು. ಆರಂಭಿಕ ಜಾಕೊಬ್‌ ಬೆಥೆಲ್‌ 13ನೇ ಓವರ್‌ನ ಎರಡನೇ ಎಸೆತದಲ್ಲಿ ಔಟ್ ಆದರೆ, ಬೆನ್ ಡಕೆಟ್‌ 4ನೇ ಎಸೆತದಲ್ಲಿ ಪೆವಿಲಿಯನ್ ಸೇರಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಹ್ಯಾರಿ ಬ್ರೂಕ್ ಅವರಿಗೆ ಬುಮ್ರಾ ಔಟ್ ಮಾಡಿ ಆತಿಥೇಯ ತಂಡಕ್ಕೆ ಶಾಕ್ ನೀಡಿದರು.

ಒಂದೇ ಕೈನಲ್ಲಿ ಸೂಪರ್ ಮ್ಯಾನ್‌ ರೀತಿ ಕ್ಯಾಚ್‌ ಹಿಡಿದ ಕನ್ನಡಿಗ ಕೆಎಲ್ ರಾಹುಲ್

ಒಂದೇ ಕೈನಲ್ಲಿ ಸೂಪರ್ ಮ್ಯಾನ್‌ ರೀತಿ ಕ್ಯಾಚ್‌ ಹಿಡಿದ ಕನ್ನಡಿಗ ಕೆಎಲ್ ರಾಹುಲ್

ಇಂಗ್ಲೆಂಡ್‌ ಒಂದು ಹಂತದಲ್ಲಿ 107 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೋ ರೂಟ್ ಹಾಗೂ ಲಿಯಾಮ್ ಡಾಸನ್ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರರು ಅಮೋಘ ಕ್ಯಾಚ್‌ಗಳನ್ನು ಪಡೆದರು.

ನಾಯಕ, ಉಪನಾಯಕನ ಜೊತೆಯಾಟ

ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ರನ್ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಮೂರನೇ ವಿಕೆಟ್‌ಗೆ ನಾಯಕ ಶುಭಮನ್‌ ಗಿಲ್ ಹಾಗೂ ಉಪನಾಯಕ ಶ್ರೇಯಸ್ ಅಯ್ಯರ್ (35) ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಆದರೆ ಈ ಹಂತದಲ್ಲಿ ಶುಭಮನ್‌ ಗಿಲ್ ಅವರಿಗೆ ಸ್ನಾಯು ಸೆಳೆತವಾಗಿದ್ದರಿಂದ ಅಜೇಯ 80 ರನ್‌ ಬಾರಿಸಿದ್ದಾಗ ಮೈದಾನದಿಂದ ಹೊರ ನಡೆದರು.

Jasprit Bumrah: ಜಡೇಜಾ ದಾಖಲೆ ಅಳಿಸಿ ಹಾಕಿದ ಜಸ್ಪ್ರೀತ್ ಬುಮ್ರಾ

Jasprit Bumrah: ಜಡೇಜಾ ದಾಖಲೆ ಅಳಿಸಿ ಹಾಕಿದ ಜಸ್ಪ್ರೀತ್ ಬುಮ್ರಾ

ಆಲ್‌ರೌಂಡರ್‌ಗಳ ಜವಾಬ್ದಾರಿಯುತ ಆಟ

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ಗಳಾದ ವಾಷಿಂಗ್ಟನ್‌ ಸುಂದರ್ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದರು. ಐದನೇ ವಿಕೆಟ್‌ಗೆ ವಾಷಿಂಗ್ಟನ್‌ ಸುಂದರ್ ಹಾಗೂ ಅಕ್ಷರ್ ಪಟೇಲ್ ಅಮೋಘ ಜೊತೆಯಾಟದ ಕಾಣಿಕೆ ನೀಡಿ ಜೋಡಿ ಜಯದಲ್ಲಿ ಮಿಂಚಿತು. ಈ ಜೋಡಿ 105 ಎಸೆತಗಳಲ್ಲಿ ಅಜೇಯ 102 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ಇಬ್ಬರೂ ಎಡಗೈ ಬ್ಯಾಟರ್‌ಗಳು ಅಮೋಘ ಪ್ರದರ್ಶನ ನೀಡಿ ಅರ್ಧಶತಕ ಬಾರಿಸಿ ಜಯದಲ್ಲಿ ಮಿಂಚಿದರು.

Story first published: Wednesday, July 15, 2026, 8:05 [IST]
Other articles published on Jul 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+