'ಕೆಎಲ್ ರಾಹುಲ್ ರನ್ ಸರಾಸರಿಗಿಂತ Instagram ಪೋಸ್ಟ್ ಗಳೇ ಅಧಿಕ'

ಬೆಂಗಳೂರು, ಆಗಸ್ಟ್ 31: ಟೆಸ್ಟ್, ಏಕದಿನ, ಟಿ20 ಹೀಗೆ ಎಲ್ಲಾ ಮಾದರಿ ಕ್ರಿಕೆಟ್ ಗೂ ಸರಿ ಹೊಂದಬಲ್ಲ ಪ್ರತಿಭಾವಂತ ಯುವ ಆಟಗಾರ ಎಂದು ಕ್ರಿಕೆಟ್ ಪಂಡಿತರು, ಫ್ಯಾನ್ಸ್ ಗಳಿಂದ ಹೊಗಳಿಸಿಕೊಂಡ ಕನ್ನಡಿಗ ಲೋಕೇಶ್ ರಾಹುಲ್ ಗೆ ಟೈಮ್ ಸರಿಯಿಲ್ಲ. ಇಂಗ್ಲೆಂಡ್ ಸರಣಿಯಲ್ಲಿ ಸತತವಾಗಿ ವೈಫಲ್ಯ ಕಾಣುತ್ತಿದ್ದಾರೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 2 ಬೌಂಡರಿ ಬಾರಿಸಿದ್ದ ಕೆಎಲ್ ರಾಹುಲ್ ಇಂದು ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಎಲ್ ಬಿ ಆಗಿ ಪೆವಿಲಿಯನ್ ಸೇರಿದರು. 24 ಎಸೆತಗಳಲ್ಲಿ 19ರನ್ ಗಳಿಸಿದ ಕೆಎಲ್ ರಾಹುಲ್ ಅವರು ಔಟಾಗುತ್ತಿದ್ದಂತೆ, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ, ಟೀಕೆ ಶುರುವಾಗಿದೆ.
ಸತತವಾಗಿ ವಿಫಲರಾದ್ರೂ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಅವರನ್ನು ಆರಂಭಿಕ ಆಟಗಾರರಾಗಿ ಮುಂದುವರೆಸುತ್ತಿರುವುದೇಕೆ? ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಗೆಳೆಯರನ್ನು ಮಾತ್ರ ಆಡಿಸುತ್ತಿದ್ದಾರಾ? ಯುವ ಆಟಗಾರರು ಕಾಯುತ್ತಿದ್ದಾರೆ ಎಂಬುದು ಮನಸ್ಸಿನಲ್ಲಿಟ್ಟು ಮುಂದಿನ ಇನ್ನಿಂಗ್ಸ್ ಗೆ ಇವರಿಬ್ಬರು ರೆಡಿಯಾಗಲಿ ಎಂಬ ಉಪದೇಶಗಳು ಕೇಳಿ ಬಂದಿವೆ.
{cricket_250_42377}
ಎಲ್ಲೋ ಕೆಲವರು ಮಾತ್ರ ಒಂದು ಸರಣಿಯಿಂದ ಆಟಗಾರನ ಪ್ರತಿಭೆಯನ್ನು ಅಳೆಯಲು ಸಾಧ್ಯವಿಲ್ಲ. ಕಳೆದ ಬಾರಿ ಇಂಗ್ಲೆಂಡ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕೂಡಾ ಏನು ಸಾಧಿಸಿರಲಿಲ್ಲ. ಆತುರವಾಗಿ ತಂಡದಿಂದ ಹೊರ ಹಾಕಿದರೆ ನಷ್ಟ ಎಂದಿದ್ದಾರೆ.
ರಾಹುಲ್ ಅವರ ಇನ್ಸ್ಟ್ರಾಗ್ರಾಮ್ ಪೋಸ್ಟ್
ಕೆಎಲ್ ರಾಹುಲ್ ಅವರ ಇಂಗ್ಲೆಂಡಿನ ಸರಣಿ ರನ್ ಸರಾಸರಿಗಿಂತ ಅವರ ಇನ್ಸ್ಟ್ರಾಗ್ರಾಮ್ ಪೋಸ್ಟ್ ಗಳೇ ಅಧಿಕವಾಗಿವೆ ಎಂದು ಕಿಚಾಯಿಸಲಾಗಿದೆ. ಬಿಸಿಸಿಐ ಇನ್ಸ್ಟ್ರಾಗ್ರಾಮ್ ಕೂಡಾ ರಾಹುಲ್ ಅವರೇ ನೋಡಿಕೊಳ್ಳುತ್ತಿದ್ದಾರೆ.
199ರನ್ ನಂತರ ರಾಹುಲ್ ಬ್ಯಾಟಿಂಗ್
199ರನ್ ನಂತರ ರಾಹುಲ್ ಬ್ಯಾಟಿಂಗ್ ಹೇಗಿದೆ, ನಾಲ್ಕನೇ ಟೆಸ್ಟ್ ಪಂದ್ಯದ ತನಕ ಎಷ್ಟು ರನ್ ಗಳಿಸಿದ್ದಾರೆ ನೋಡಿ
ತಂಡಕ್ಕೆ ಆಯ್ಕೆಯಾಗಿದ್ದು ಏಕೆ?
ಪಂದ್ಯವೊಂದರಲ್ಲಿ ಐದು ಕ್ಯಾಚ್ ಹಿಡಿಯಬಲ್ಲ ಅದರಲ್ಲೂ ಸ್ಲಿಪ್ ನಲ್ಲಿ ಕ್ಯಾಚ್ ತೆಗೆದುಕೊಳ್ಳುವ ಆಟಗಾರರ ಕೊರತೆ ಇದೆ. ಹೀಗಾಗಿ, ಕೆಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳಲಾಗಿದೆ.
ಧವನ್ ಕೂಡಾ ಫೇಲ್
ಆರಂಭಿಕ ಆಟಗಾರರಾಗಿ ಶಿಖರ್ ಧವನ್ ಕೂಡಾ ಫೇಲ್ ಆಗಿದ್ದಾರೆ. ಕೆಎಲ್ ರಾಹುಲ್ ಒಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಕೆಲವರು ವಾದಿಸಿದ್ದಾರೆ.
ಕುಕ್ ಗೆ ಪೈಪೋಟಿ
ಇಂಗ್ಲೆಂಡ್ ಆರಂಭಿಕ ಆಟಗಾರ ಅಲೆಸ್ಟರ್ ಕುಕ್ ಅವರಿಗೆ ಕೆಎಲ್ ರಾಹುಲ್ ಅವರು ಪೈಪೋಟಿ ನೀಡುತ್ತಿದ್ದಾರೆ.
ರಾಹುಲ್ ಹಾಗೂ ರೋಹಿತ್ ಹೋಲಿಕೆ
ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮ ನಡುವೆ ಹೋಲಿಕೆ ನಡೆಸಲಾಗುತ್ತಿದೆ.
ಗಾವಸ್ಕರ್ ಕೂಡಾ ಹೊಗಳಿದ್ದರು.
ಟೀಂ ಇಂಡಿಯಾದ ಭವಿಷ್ಯದ ಆಟಗಾರ ಎಂದು ಕೆಎಲ್ ರಾಹುಲ್ ರನ್ನು ಗವಾಸ್ಕರ್ ಕೂಡಾ ಹೊಗಳಿದ್ದರು.
ರಾಹುಲ್ ದ್ರಾವಿಡ್ ಜತೆ ಹೋಲಿಸಬೇಡಿ
ವಿದೇಶದಲ್ಲಿ ಕ್ರಿಕೆಟ್ ಹೇಗೆ ಆಡಬೇಕು ಎಂಬುದನ್ನು ರಾಹುಲ್ ದ್ರಾವಿಡ್ ಕಲಿಯಬೇಕು. ಕೆಎಲ್ ರಾಹುಲ್ ರನ್ನು ದ್ರಾವಿಡ್ ಜತೆ ಹೋಲಿಸಬೇಡಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications