ಭಾರತ vs ಇಂಗ್ಲೆಂಡ್ U19 ಫೈನಲ್: ಯಾವಾಗ ಆರಂಭವಾಗಲಿದೆ ಪಂದ್ಯ, ನೇರಪ್ರಸಾರ ಹಾಗೂ ಸ್ಕ್ವಾಡ್

ಅಂಡರ್ 19 ವಿಶ್ವಕಪ್‌ನ ಫೈನಲ್ ಹಂತಕ್ಕೆ ಭಾರತೀಯ ತಂಡ ಪ್ರವೇಶ ಪಡೆದಿದ್ದು ಅಂತಿಮ ಟ್ರೋಫಿ ಎತ್ತಿ ಹಿಡಿಯಲು ಸಂಪೂರ್ಣ ಸಜ್ಜಾಗಿದೆ. ಯಶ್ ಧುಲ್ ನೇತೃತ್ವದ ಭಾರತ ಕಿರಿಯರ ತಂಡ ಫೈನಲ್‌ನಲ್ಲಿ ಇಂಗ್ಲೆಂಡ್ ಕಿರಿಯರ ಬಳಗವನ್ನು ಎದುರಿಸಲಿದೆ. ಈ ಫೈನಲ್ ಪಂದ್ಯ ಶನಿವಾರ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತ ಅಂಡರ್ 19 ತಂಡ ಅಂಡರ್ 19 ವಿಶ್ವಕಪ್‌ನಲ್ಲಿ 5ನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿಯುವ ಉತ್ಸಾಹದಲ್ಲಿದ್ದು ಅದಕ್ಕಾಗಿ ಶನಿವಾರ ಸರ್ವ ಪ್ರಯತ್ನವನ್ನು ಕೂಡ ನಡೆಸಲಿದೆ. ಇದಕ್ಕೂ ಮುನ್ನ 2018ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಸರಣಿಯಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿತ್ತು. ಆಗ ರಾಹುಲ್ ದ್ರಾವಿಡ್ ತಂಡದ ಕೋಚ್ ಆಗಿದ್ದರು. ಇನ್ನು ಇಂಗ್ಲೆಂಡ್ ಏಕೈಕ ಬಾರಿ ಅಂಡರ್ 19 ವಿಶ್ವಕಪ್ ಗೆದ್ದಿದ್ದು 1998ರಲ್ಲಿ.
ಈ ಬಾರಿಯ ಟೂರ್ನಿಯಲ್ಲಿ ಈವರೆಗೆ ನೀಡಿದ ಅದ್ಭುತ ಪ್ರದರ್ಶನಗಳನ್ನು ನೊಡಿದಾಗ ಫೈನಲ್ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿ ಯಶ್ ಧುಲ್ ನೇತೃತ್ವದ ಭಾರತ ತಂಡ ಎಂದು ಸುಲಭವಾಗಿ ಹೇಳಬಹುದು. ಆದರೆ ಇಂಗ್ಲೆಂಡ್ ಕೂಡ ಸಾಕಷ್ಟು ಅದ್ಭುತ ಆಟಗಾರರನ್ನು ಹೊಂದಿದ್ದು ಅಂತಿಮ ಹಂತದಲ್ಲಿ ತಿರುಗೇಟು ನೀಡುವ ಮೂಲಕ ಎದುರಾಳಿ ವಿರುದ್ಧ ಮೇಲುಗೈ ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಫೈನಲ್ ಪಂದ್ಯ ಸಾಕಷ್ಟು ರೋಚಕವಾಗಿರುವುದರಲ್ಲಿ ಅನುಮಾನವಿಲ್ಲ.

ನೇರಪ್ರಸಾರದ ಸಮಯ ಹಾಗೂ ಭಾರತೀಯ ಕಾಲಮಾನ
ಭಾರತ ಹಾಗೂ ಇಂಗ್ಲೆಂಡ್ ಅಂಡರ್ 19 ತಂಡಗಳ ನಡುವಿನ ಈ ಫೈನಲ್ ಪಂದ್ಯ ಶನಿವಾರ ನಡೆಯಲಿದೆ. ಆಂಟಿಗುವಾದಲ್ಲಿ ನಡೆಯಲಿರುವ ಈ ಪಂದ್ಯ ಭಾರತೀಯ ಕಾಲಮಾನ 6:30ಕ್ಕೆ ಆರಂಭವಾಗಲಿದೆ. ಭಾರತದಲ್ಲಿ ಈ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ.

ಲೈವ್ ಸ್ಟ್ರೀಮಿಂಗ್ ಹಾಗೂ ಚಾನಲ್
ಅಂಡರ್ 19 ವಿಶ್ವಕಪ್‌ನ ಈ ಫೈನಲ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನಡೆಯಲಿದೆ. ಭಾರತ ಮತ್ತು ಇಂಗ್ಲೆಂಡ್ ಅಂಡರ್-19 ಫೈನಲ್ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಿದೆ. ಸ್ಟಾರ್ ಸ್ಪೋರ್ಟ್ಸ್ 1/1 ಹೆಚ್‌ಡಿ ಹಾಗೂ ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2/2 ಹೆಚ್‌ಡಿ ಚಾನೆಲ್‌ಗಳು ಪಂದ್ಯವನ್ನು ನೇರಪ್ರಸಾರ ಮಾಡಲಿದೆ.

ಎರಡು ತಂಡಗಳ ಸಂಪೂರ್ಣ ಸ್ಕ್ವಾಡ್
ಭಾರತ U-19: ಯಶ್ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್ (ಉಪನಾಯಕ), ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್, ದಿನೇಶ್ ಬಾನಾ (ವಿಕೆಟ್ ಕೀಪರ್), ಆರಾಧ್ಯ ಯಾದವ್ (ವಿಕೆಟ್ ಕೀಪರ್), ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ, ಆರ್ ಎಸ್ ಹಂಗರ್ಗೇಕರ್, ವಾಸು ವತ್ಸ್, ವಿಕ್ಕಿ ಒಸ್ತ್ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್
ಇಂಗ್ಲೆಂಡ್ U-19: ಟಾಮ್ ಪರ್ಸ್ಟ್ (ನಾಯಕ), ಜಾರ್ಜ್ ಬೆಲ್, ಜೋಶುವಾ ಬೋಡೆನ್, ಅಲೆಕ್ಸ್ ಹಾರ್ಟನ್, ರೆಹಾನ್ ಅಹ್ಮದ್, ಜೇಮ್ಸ್ ಸೇಲ್ಸ್, ಜಾರ್ಜ್ ಥಾಮಸ್, ಥಾಮಸ್ ಆಸ್ಪಿನ್‌ವಾಲ್, ನಾಥನ್ ಬಾರ್ನ್‌ವೆಲ್, ಜಾಕೋಬ್ ಬೆಥೆಲ್, ಜೇಮ್ಸ್ ಕೋಲ್ಸ್, ವಿಲಿಯಂ ಲಕ್ಸ್ಟನ್, ಜೇಮ್ಸ್ ರೆವ್, ಫತೇ ಸಿಂಗ್, ಬೆಂಜಮಿನ್ ಕ್ಲಿಫ್

ಇದಕ್ಕೂ ಮುನ್ನ ಭಾರತ U19 ವಿಶ್ವಕಪ್ ಗೆದ್ದಿದ್ದ ವರ್ಷಗಳು
ಅಂಡರ್ 19 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಗೆದ್ದ ತಂಡ ಎಂಬ ದಾಖಲೆ ಭಾರತದ ಹೆಸರಿನಲ್ಲಿದೆ. ಭಾರತ 4 ಬಾರಿ ಈ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. 2018, 2012, 2008 ಮತ್ತು 2000 ರಲ್ಲಿ ಭಾರತದ ಅಂಡರ್-19 ಆಟಗಾರರ ಪಡೆ ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿತ್ತು. ಆದರೆ ಇಂಗ್ಲೆಂಡ್ ಒಂದು ಬಾರಿ ಮಾತ್ರವೇ ಈ ಸಾಧನೆ ಮಾಡಿದ್ದು 1998 ರಲ್ಲಿ ಈ ಟ್ರೋಫಿ ಗೆದ್ದು ಚಾಂಪಿಯನ್ ಆಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications