ಭಾರತ vs ಇಂಗ್ಲೆಂಡ್ U19: ಫೈನಲ್ ಪಂದ್ಯಕ್ಕಿದೆಯಾ ಮಳೆಯ ಭೀತಿ? ಪಿಚ್ ರಿಪೋರ್ಟ್ ಹಾಗೂ ಅಂಕಿಅಂಶಗಳು

ಅಂಡರ್ 19 ವಿಶ್ವಕಪ್ ಅಂತಿಮ ಘಟ್ಟವನ್ನು ತಲುಪಿದೆ. ಭಾರತದ ಕಿರಿಯರ ತಂಡ ಈ ಬಾರಿಯೂ ಅಂಡರ್ 19 ವಿಶ್ವಕಪ್‌ನ ಫೈನಲ್‌ಗೇರಿದ ಸಾಧನೆ ಮಾಡಿದೆ. ಯಶ್ ಧುಲ್ ನೇತೃತ್ವದ ಭಾರತ ಕಿರಿಯರ ತಂಡ ಫೈನಲ್‌ನಲ್ಲಿ ಇಂಗ್ಲೆಂಡ್ ಕಿರಿಯರ ಬಳಗವನ್ನು ಎದುರಿಸಲಿದೆ. ಈ ಫೈನಲ್ ಪಂದ್ಯ ಶನಿವಾರ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತ ಅಂಡರ್ 19 ತಂಡ ವಿಶ್ವಕಪ್ ಇತಿಹಾಸದಲ್ಲಿ ಅಮೋಘ ಸಾಧನೆಯನ್ನು ಮಾಡಿದ್ದು ಈವರೆಗೆ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಿದೆ. ಅಂಡರ್ 19 ಇತಿಹಾಸದಲ್ಲಿ ಈ ಸಾಧನೆಯನ್ನು ಉಳಿದ ಯಾವ ತಂಡಗಳು ಕೂಡ ಮಾಡಿಲ್ಲ. ಇದೀಗ ಐದನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿಯುವ ಅದ್ಭುತ ಅವಕಾಶವನ್ನು ಭಾರತದ ಕಿರಿಯರು ಹೊಂದಿದ್ದಾರೆ.
ಇನ್ನು ಮತ್ತೊಂದೆಡೆ ಇಂಗ್ಲೆಂಡ್ ತಂಡ ಅಂಡರ್ 19 ವಿಶ್ವಕಪ್‌ನ್ಲಲಿ ಒಂದು ಬಾರಿ ಮಾತ್ರವೇ ಚಾಂಪಿಯನ್ ಪಟ್ಟಕ್ಏರಿದ ಸಾಧನೆ ಮಾಡಿದೆ. 1998ರಲ್ಲಿ ಇಂಗ್ಲೆಂಡ್ ಚಾಂಪಿಯನ್ ಆದ ಬಳಿಕ ಮತ್ತೊಮ್ಮೆ ಆ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಇದೀಗ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಉತ್ಸಾಹದಲ್ಲಿದೆ.
ಹಾಗಾದರೆ ಭಾರತ ಹಾಗೂ ಇಂಗ್ಲೆಂಡ್ ತಂಡದ ಕಿರಿಯರ ಫೈನಲ್ ಮುಖಾಮುಖಿಗೆ ವೇದಿಕೆಯಾಗಿರುವ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದ ಪಿಚ್‌ನ ಸ್ವರೂಪ ಹೇಗಿದೆ? ಪಂದ್ಯ ನಡೆಯಲಿರುವ ದಿನ ಆಂಟಿಗುವಾದಲ್ಲಿ ಮಳೆಯಾಗಲಿದೆಯೇ? ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಏಕದಿನ ಕ್ರಿಕೆಟ್‌ನ ಅಂಕಿಅಂಶಗಳು ಹೇಗಿದೆ? ಆ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಮುಂದೆ ಓದಿ..
ಶನಿವಾರ ಆಂಟಿಗುವಾ ಹವಾಮಾನ: ಶನಿವಾರ ಫೆಬ್ರವರಿ 5ರಂದು ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ದಿನ ಆಂಟಿಗುವಾದಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಪಂದ್ಯಕ್ಕೆ ಕೆಲ ಕಾಲ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ವಿಳಂಬವಾಗಿ ಪಂದ್ಯ ನಡೆಯುವ ಸಾಧ್ಯತೆಯೂ ಇದೆ.
ಆಂಟಿಗುವಾ ಪಿಚ್ ರಿಪೋರ್ಟ್: ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ ಆಂಡಿ ರಾಬರ್ಟ್ಸ್ ಎಂಡ್ ಮತ್ತು ಕರ್ಟ್ಲಿ ಆಂಬ್ರೋಸ್ ಎಂಡ್ಈ ಎರಡು ಬೌಲಿಂಗ್ ಎಂಡ್‌ಗಳನ್ನು ಹೊಂದಿದೆ. ಈ ಪಿಚ್ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಕ್ಕೂ ಸಮವಾಗಿ ಬೆಂಬಲಿಸುತ್ತದೆ. ಈ ಮೈದಾನದಲ್ಲಿ ಏಕದಿನ ಕ್ರಿಕೆಟ್‌ನ ಸರಾಸರಿ ಸ್ಕೋರ್ 239 ಆಗಿದ್ದು ಯಾಔ ರೀತಿಯಾಗಿ ಪಿಚ್ ವರ್ತಿಸುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ. ಔಟ್ ಫೀಲ್ಡ್ ವೇಗವಾಗಿದ್ದು ಬ್ಯಾಟರ್‌ಗಳು ಇದರ ಲಾಭವನ್ನು ಪಡೆಯಲಬಹುದಾಗಿದೆ.
3. ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿನ ಏಕದಿನ ಕ್ರಿಕೆಟ್‌ನ ಅಂಕಿಅಂಶಗಳು
ಒಟ್ಟು ಪಂದ್ಯಗಳು: 20
ಮೊದಲು ಬ್ಯಾಟಿಂಗ್ ಮಾಡಿದ ತಂಡದ ಗೆಲುವು: 10 ಬಾರಿ
2ನೇ ಸರದಿಯಲ್ಲಿ ಬ್ಯಾಟಿಂಗ್ ಮಾಡಿದ ತಂಡದ ಗೆಲುವು: 10 ಬಾರಿ
ಸರಾಸರಿ ಸ್ಕೋರ್: 239
ಅತ್ಯಧಿಕ ಸ್ಕೋರ್: 322/6 ಆಸ್ಟ್ರೇಲಿಯಾ
ಕನಿಷ್ಠ ಸ್ಕೋರ್: 104/6
ತಂಡಗಳು ರನ್‌ಗಳಿಸಿದ ಮಾದರಿ ಹೀಗಿದೆ
200ಕ್ಕಿಂತ ಕಡಿಮೆ: 5 ಬಾರಿ
200 ರಿಂದ 249 ರನ್: 6 ಬಾರಿ
250 ರಿಂದ 299 ರನ್: 6 ಬಾರಿ
300 ಕ್ಕಿಂತ ಹೆಚ್ಚು: 3 ಬಾರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications