'ಸ್ಲೆಡ್ಜ್ ಮಾಡಿದ್ರೆ ಹುಲಿಯಂತೆ ತಿರುಗಿ ಬೀಳ್ತಾರೆ ವಿರಾಟ್': ಇಂಗ್ಲೆಂಡ್ ಆಟಗಾರರಿಗೆ ಎಚ್ಚರಿಕೆ ನೀಡಿದ ಮಾಜಿ ಪ್ಲೇಯರ್
ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ. ತಂಡದ ಗೆಲುವಿಗೆ ಸದಾ ಹಪಾಹಪಿಸುವ ಆಟಗಾರನಿದ್ದರೆ ಅದು ಕಿಂಗ್ ಕೊಹ್ಲಿ. ಮೈದಾನದಲ್ಲಿ ಚಿರತೆಯಂತೆ ಓಡಾಡುವ ವಿರಾಟ್ ಕೊಹ್ಲಿ, ಎದುರಾಳಿಗಳಿಗೆ ಭಯ ಹುಟ್ಟಿಸುವ ಆಟಗಾರ.
ಒಂದು ಕಾಲದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ವಿರುದ್ಧ ಆಡುವಾಗ ಟೀಮ್ ಇಂಡಿಯಾ ಆಟಗಾರರು ಭಯದಿಂದ ಆಡುತ್ತಿದ್ದರು. ಆದರೆ, ಯಾವಾಗ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಕಾಲಿಟ್ಟರೋ, ಅಲ್ಲಿಂದ ತಿರುಗಿ ಬೀಳುವ ಗುಣ ಬೆಳೆಯಿತು.
ಸ್ಲೆಡ್ಜಿಂಗ್ ಮಾಡುವ ಎದುರಾಳಿ ತಂಡದ ಆಟಗಾರರಿಗೆ ಮೈದಾನದಲ್ಲೇ ತಕ್ಕ ಉತ್ತರ ನೀಡುವ ಛಾತಿ ಬೆಳೆಸಿಕೊಂಡಿದ್ದ ವಿರಾಟ್ ಕೊಹ್ಲಿ, ಇದನ್ನು ತಮ್ಮ ಆಟಗಾರರಿಗೂ ಕಲಿಸಿದರು. ನಾಯಕತ್ವ ವಹಿಸಿಕೊಂಡ ನಂತರ, ತಮ್ಮ ಆಟಗಾರರಿಗೆ ನಿರ್ಭೀತಿಯಿಂದ ಆಡುವುದನ್ನು ಹೇಳಿಕೊಟ್ಟರು.

ಇದೀಗ ಭಾರತ ಮತ್ತು ಇಂಗ್ಲೆಂಡ್ ನಡುವಿನ ಬಹು ನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯು ಜನವರಿ 25ರಿಂದ ಹೈದರಾಬಾದ್‌ನಲ್ಲಿ ಮೊದಲ ಪಂದ್ಯ ಆಡುವುದರೊಂದಿಗೆ ಪ್ರಾರಂಭವಾಗಲಿದೆ.
ಉಭಯ ತಂಡಗಳ ನಡುವಿನ ಟೆಸ್ಟ್ ಪೈಪೋಟಿಯ ಬಗ್ಗೆ ಮಾತನಾಡುವುದಾದರೆ, ಆಂಗ್ಲ ತಂಡವು ಭಾರತ ವಿರುದ್ಧ ಮೇಲುಗೈ ಸಾಧಿಸಿದೆ. ಆದಾಗ್ಯೂ, ಟೀಮ್ ಇಂಡಿಯಾ ತವರಿನ ಪ್ರಯೋಜನವನ್ನು ಹೊಂದಲಿದೆ ಮತ್ತು ತ್ರಿ ಲಯನ್ಸ್ ತಂಡಕ್ಕೆ ಭೀತಿ ಹುಟ್ಟಿಸಿದೆ.
ಇತ್ತೀಚಿಗೆ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಅವರು 2012ರ ಇಂಗ್ಲೆಂಡ್ ತಂಡದ ಭಾರತ ಪ್ರವಾಸದ ಬಗ್ಗೆ ಕೇಳದ ಕೆಲವು ಘಟನೆಗಳನ್ನು ಬಹಿರಂಗಪಡಿಸಿದರು. ಅಲ್ಲಿ ಪ್ರವಾಸಿ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆಲುವು ಸಾಧಿಸಿದರು.
ಮೊದಲ ಪಂದ್ಯದಲ್ಲಿ ಸೋತರೂ, ಇಂಗ್ಲೆಂಡ್ ತನ್ನದೇ ಶೈಲಿಯಲ್ಲಿ ಪುಟಿದೆದ್ದಿತು ಮತ್ತು ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿತು ಹಾಗೂ ಸರಣಿಯನ್ನು ವಶಪಡಿಸಿಕೊಂಡಿತು. ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು. ಅಲ್ಲಿ ವಿರಾಟ್ ಕೊಹ್ಲಿ ಮತ್ತು ನಾಯಕ ಎಂಎಸ್ ಧೋನಿ ಕ್ರಮವಾಗಿ 103 ಮತ್ತು 99 ರನ್ ಗಳಿಸಿದರು.

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ಗ್ರೇಮ್ ಸ್ವಾನ್, ದೆಹಲಿ ಮೂಲದ ಯುವ ಬ್ಯಾಟರ್‌ನೊಂದಿಗೆ ವಾದಕ್ಕೆ ಇಳಿಯದಂತೆ ಇಂಗ್ಲೆಂಡ್ ಆಟಗಾರರಿಗೆ ಸಲಹೆ ನೀಡಲಾಗಿತ್ತು ಎಂದು ಬಹಿರಂಗಪಡಿಸಿದರು. ಇಬ್ಬರೂ ಜಗಳವಾಡಿದ ನಂತರ, ವಿರಾಟ್ ಕೊಹ್ಲಿ ಅವರು ಸ್ಟೀವ್ ಫಿನ್ ಅವರ ವಿರುದ್ಧ ಹೇಗೆ ಕ್ರೂರವಾಗಿ ರನ್ ಗಳಿಸಿದರು ಎಂಬುದನ್ನು ಮಾಜಿ ಸ್ಪಿನ್ನರ್ ಹೇಳಿದ್ದಾರೆ.
"ವಿರಾಟ್ ಕೊಹ್ಲಿಗೆ ಏನನ್ನೂ (ಸ್ಲೆಡ್ಜಿಂಗ್) ಹೇಳಬೇಡಿ ಎಂದು ನಮಗೆ ಮೊದಲೇ ಹೇಳಲಾಗಿತ್ತು. ಸ್ಟೀವನ್ ಫಿನ್ ಬೌಲಿಂಗ್‌ನಲ್ಲಿ ಒಂದೆರಡು ಅದ್ಭುತ ಬೌಂಡರಿ ಬಾರಿಸಿದರು. ಫಿನ್ ತಾಳ್ಮೆ ಕಳೆದುಕೊಂಡನು ಮತ್ತು ವಿರಾಟ್ ಕೊಹ್ಲಿಗೆ ಸಿಕ್ಕಿಬಿದ್ದನು, ನಂತರ ನೇರವಾಗಿ ತನ್ನ ತಪ್ಪನ್ನು ಅರಿತುಕೊಂಡನು".
"ವಿರಾಟ್ ಕೊಹ್ಲಿ ಹುಲಿಯಂತೆ ಘರ್ಜಿಸಿದರು ಮತ್ತು ಸ್ಟೀವನ್ ಫಿನ್ ಬೌಲಿಂಗ್‌ನಲ್ಲಿ ಎಲ್ಲಾ ಕಡೆ ಚೆಂಡು ಬಾರಿಸಿ, ರನ್ ಸೋರಿಕೆ ಮಾಡಿದರು," ಎಂದು ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಪಾಡ್‌ಕಾಸ್ಟ್‌ನಲ್ಲಿ ಗ್ರೇಮ್ ಸ್ವಾನ್ ತಿಳಿಸಿದರು.
ಗ್ರೇಮ್ ಸ್ವಾನ್ ಮತ್ತು ಸಹ ಸ್ಪಿನ್ನರ್ ಮಾಂಟಿ ಪನೇಸರ್ ಅವರು ಕ್ರಮವಾಗಿ ಒಟ್ಟು 20 ಮತ್ತು 17 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್‌ನ ಸ್ಟಾರ್ ಬೌಲರ್‌ಗಳಾಗಿದ್ದರು. ನಂತರ ಗ್ರೇಮ್ ಸ್ವಾನ್ ಅವರು ಮಾಂಟಿ ಪನೇಸರ್ ಅವರನ್ನು ಹೊಗಳಲು ಆರಂಭಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications