ಭಾರತದ ಈ ಆಟಗಾರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಶತಸಿದ್ಧ ಎಂದ ಮಾಜಿ ಕ್ರಿಕೆಟಿಗ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮೊದಲ ಪಂದ್ಯದಲ್ಲಿ ಭಾರತ ತಮಡ ಅದ್ಭುತ ಗೆಲುವು ಸಾಧಿಸಿದ ಬಳಿಕ ಇದೀಗ ಎರಡನೇ ಪಂದ್ಯದಲ್ಲಿಯೂ ಬರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ ಭಾರತೀಯ ತಂಡದ ಅಭಿಮಾನಿಗಳು. ಇನ್ನು ಈ ಪಂದ್ಯಕ್ಕೆ ಕೊಹ್ಲಿ, ಪಂತ್, ಬೂಮ್ರಾರಂತಾ ಪ್ರಮುಖ ಆಟಗಾರರು ಕೂಡ ಲಭ್ಯವಾಗಿರುವ ಕಾರಣ ಯಾವ ಆಟಗಾರ ಆಡುವ ಬಳಗದಿಂದ ಹೊರಗುಳಿಯಬಹುದು ಎಂಬುದು ಕುತೂಹಲ ಮೂಡಿಸಿದೆ.
ಈ ಸಂದರ್ಭದಲ್ಲಿ ಭಾರತ ತಂಡದ ಓರ್ವ ಆಟಗಾರ ನೀಡುತ್ತಿರುವ ಅದ್ಭುತ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಈ ಆಟಗಾರ ಮುಂಬರುವ ಟಿ20 ವಿಶ್ವಕಪ್‌ನ ತಂಡದಲ್ಲಿ ಖಂಡಿತವಾಗಿಯೂ ಸ್ಥಾನವನ್ನು ಪಡೆಯಲಿದ್ದಾರೆ ಎಂದಿದ್ದಾರೆ. ಜಾಫರ್ ಈ ಮಾತುಗಳನ್ನಾಡಲು ಕಾರಣ ಭಾರತದ ಆಟಗಾರ ಇತ್ತೀಚಿನ ಪಂದ್ಯಗಳಲ್ಲಿ ಭಾರತದ ಪರವಾಗಿ ನೀಡುತ್ತಿರುವ ಪ್ರದರ್ಶನ.

ಸ್ವಿಂಗ್ ಬೌಲಿಂಗ್ ಮೂಲಕ ಕಂಗೆಡಿಸುತ್ತಿರುವ ಅನುಭವಿ
ಕೆಲ ಸಮಯಗಳ ಹಿಂದೆ ಕಳೆಗುಂದಿದಂತೆ ಕಂಡು ಬರುತ್ತಿದ್ದ ಭಾರತದ ಅನುಭವಿ ಆಟಗಾರ ಭುವನೇಶ್ವರ್ ಕುಮಾರ್ ಇತ್ತೀಚೆಗೆ ಮತ್ತೆ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಅಮೋಘ ಬೌಲಿಂಗ್ ದಾಳಿಯಿಂದಾಗಿ ಎದುರಾಳಿ ದಾಂಡಿಗರನ್ನು ಕಂಗೆಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ ಸ್ವಿಂಗ್ ದಾಳಿಯ ಮೂಲಕ ತಂಡಕ್ಕೆ ಮೇಲುಗೈ ಸಾಧಿಸುವಂತೆ ಮಾಡಿದ ಭುವನೇಶ್ವರ್ ಕುಮಾರ್ ಬಗ್ಗೆ ವಾಸಿಂ ಜಾಫರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಯಾವುದೇ ಪಿಚ್‌ನಲ್ಲಾದರೂ ಭುವಿ ಅಪಾಯಕಾರಿ ಎಂದ ಜಾಫರ್
ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ನೆಲದಲ್ಲಿ ತಮ್ಮ ಸ್ವಿಂಗ್ ಬೌಲಿಂಗ್ ಕೌಶಲ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸಿದ್ದಾರೆ. ಮೊದಲ ಪಂದ್ಯದಲ್ಲಿ ಮೂರು ಓವರ್‌ಗಳ ತಮ್ಮ ಬೌಲಿಂಗ್ ದಾಳಿಯಲ್ಲಿ ಭುವಿ 3.33ರ ಸರಾಸರಿಯಲ್ಲಿ ಕೇವಲ 10 ರನ್‌ಗಳನ್ನು ನೀಡಿದ್ದರು. ಈ ಪ್ರದರ್ಶನವನ್ನು ನೀಡಿದ ಬಳಿಕ ವಾಸಿಂ ಜಾಫರ್ ಈ ಹೇಳಿಕೆ ನೀಡಿದ್ದಾರೆ. ಭುವನೇಶ್ವರ್ ಕುಮಾರ್ ಕೇವಲ ಇಂಗ್ಲೆಂಡ್ ಪಿಚ್‌ನಲ್ಲಿ ಮಾತ್ರವಲ್ಲ ಯಾವುದೇ ರೀತಿಯಾದ ಪಿಚ್‌ನಲ್ಲಿಯೂ ಎದುರಾಳಿಗಳಿಗೆ ಅತ್ಯಂತ ಅಪಾಯಕಾರಿಯಾಗಬಲ್ಲ ಬೌಲರ್ ಎನಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವುಶ್ವಕಪ್‌ನ ತಂಡದಲ್ಲಿ ಭುವಿ ಸ್ಥಾನ ಪಡೆಯಲು ಅತ್ಯಂತ ಅರ್ಹರಾಗಿದ್ದಾರೆ. ಅವರು ಖಂಡಿತವಾಗಿಯೂ ಸ್ಥಾನವನ್ನು ಪಡೆಯಲಿದ್ದಾರೆ ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಭುವಿಯಲ್ಲಿರುವ ವಿಶೇಷ ಕೌಶಲ್ಯ
"ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ವಿಂಗ್ ಮಾಡಬಲ್ಲ ಬೌಲರ್ ವಿರುದ್ಧ ಬ್ಯಾಟರ್‌ಗಳು ಪರದಾಡುವುದನ್ನು ನಾವು ನೋಡಿದ್ದೇವೆ. ಹೆಚ್ಚಿನ ಬೌಲರ್‌ಗಳು ಚೆಂಡನ್ನು ಸ್ವಿಂಗ್ ಮಾಡುವುದನ್ನು ನೀವು ನೋಡಿರುವುದಿಲ್ಲ. ಆದರೆ ಭುವನೇಶ್ವರ್ ಕುಮಾರ್‌ಗೆ ಈ ಕಲೆ ಅದ್ಭುತವಾಗಿ ಸಿದ್ಧಿಸಿದೆ. ಅತ್ಯಂತ ಪರಿಣಾಮಕಾರಿಯಾಗಿ ಅದನ್ನು ಅವರು ಬಳಸಿಕೊಳ್ಳುತ್ತಾರೆ" ಎಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್.

ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಮೇಲೆ ಭಾರತದ ಕಣ್ಣು
ಭಾರತ ತಂಡ ಟೆಸ್ಟ್ ಸರಣಿಯನ್ನು ಭರ್ಜರಿಯಾಗಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡ ಬಳಿಕ ಇದೀಗ ಟಿ20 ಸರಣಿಯ ಮೇಲೆ ತನ್ನ ಚಿತ್ತ ನೆಟ್ಟಿದೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನಿಡಿದ ಅಮೋಘ ಪ್ರದರ್ಶನದ ಬಳಿಕ ಭಾರತ ತಂಡ ಎರಡನೇ ಪಂದ್ಯಕ್ಕೆ ಸಿದ್ಧತೆ ನಡೆಸಿದೆ. ಎರಡನೇ ಪಂದ್ಯದಲ್ಲಿ ಭಾರತದ ಆಡುವ ಬಳಗದವನ್ನು ನಿರ್ಧರಿಸುವುದು ಮ್ಯಾನೇಜ್‌ಮೆಂಟ್‌ಗೆ ದೊಡ್ಡ ಸವಾಲಾಗಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಕಳಪೆ ಫಾರ್ಮ್‌ನಲ್ಲಿ ಇರುವ ಕಾರಣ ಫಾರ್ಮ್‌ಗೆ ಮರಳಲು ಕೊಹ್ಲಿಗೆ ಇದೊಂದು ಅದ್ಭುತ ಅವಕಾಶವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications