ಇಂಗ್ಲೆಂಡ್ ವಿರುದ್ಧದ ಗೆಲುವಿಗೆ ಅವರು ಮಾತ್ರ ಕಾರಣ ಎನ್ನಲೇಬೇಡಿ ಎಂದು ಕಿಡಿಕಾರಿದ ವಿರಾಟ್ ಕೊಹ್ಲಿ!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಬುಧವಾರ ( ಆಗಸ್ಟ್ 25 ) ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ವಿರಾಟ್ ಕೊಹ್ಲಿ ಪಡೆ ಇಂಗ್ಲೆಂಡ್ ವಿರುದ್ಧ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯಿತು ಮತ್ತು ಮಳೆ ಬಂದ ಕಾರಣ ಯಾವುದೇ ಫಲಿತಾಂಶ ದೊರಕದೇ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ತದನಂತರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಿತು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಗೆಲುವನ್ನು ಸಾಧಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿತು.
ಇದೀಗ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಸೆಣಸಾಡಲು ಸಿದ್ಧವಾಗಿದ್ದು, ಪಂದ್ಯ ಆರಂಭಕ್ಕೂ ಮುನ್ನವೇ ಆಗಸ್ಟ್ 24ರ ಮಂಗಳವಾರದಂದು ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಹೀಗೆ ಲೀಡ್ಸ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ ವಿರಾಟ್ ಕೊಹ್ಲಿ ಪತ್ರಕರ್ತರು ಕೇಳಿದ ಕೆಲವೊಂದಿಷ್ಟು ಪ್ರಶ್ನೆಗಳಿಗೆ ಉತ್ತರಿಸಿದರು ಮತ್ತು ಬುಧವಾರದಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದ ಕುರಿತು ಸಹ ವಿರಾಟ್ ಕೊಹ್ಲಿ ಕೆಲವೊಂದಷ್ಟು ಮಾಹಿತಿಗಳನ್ನು ಹಂಚಿಕೊಂಡರು.
ಹೀಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಪತ್ರಕರ್ತನೋರ್ವ ಕೇಳಿದ ಪ್ರಶ್ನೆಗೆ ಕಿಡಿಕಾರಿದ್ದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರ ಕುರಿತು ಪ್ರಶ್ನೆ ಎದುರಾದಾಗ ವಿರಾಟ್ ಕೊಹ್ಲಿ ಕಿಡಿಕಾರಿದ್ದಾರೆ. ವಿರಾಟ್ ಕೊಹ್ಲಿಯನ್ನು ಕೆರಳಿಸಿದ ಆ ಪ್ರಶ್ನೆಯ ಕುರಿತ ವಿವರ ಈ ಕೆಳಕಂಡಂತಿದೆ ಓದಿ..

ಎದುರಾಳಿ ತಂಡ ಬಲಹೀನವಾದದ್ದು ಭಾರತಕ್ಕೆ ಅನುಕೂಲವಾಯಿತಾ ಎಂಬ ಪ್ರಶ್ನೆಗೆ ಕಿಡಿಕಾರಿದ ಕೊಹ್ಲಿ
ಟೀಮ್ ಇಂಡಿಯಾ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ಜಯ ಸಾಧಿಸಿತು. ಆದರೆ ಪತ್ರಿಕಾಗೋಷ್ಠಿಯಲ್ಲಿ ಇಂಗ್ಲೆಂಡ್ ತಂಡದ ಕೆಲ ಆಟಗಾರರು ಅಲಭ್ಯರಾದದ್ದು ಮತ್ತು ಆಡುವ ಬಳಗದಲ್ಲಿದ್ದ ಕೆಲ ಸ್ಟಾರ್ ಆಟಗಾರರು ಗಾಯದ ಸಮಸ್ಯೆಗೊಳಗಾದದ್ದು ಭಾರತಕ್ಕೆ ಗೆಲ್ಲಲು ಸುಲಭ ಮಾರ್ಗವಾಯಿತಾ ಎಂಬ ಪ್ರಶ್ನೆ ಮೂಡಿತು. ಈ ಪ್ರಶ್ನೆ ಎದುರಾದ ಕೂಡಲೇ ಎದುರಾಳಿಯ ಬಲಹೀನತೆಯಿಂದ ಭಾರತ ಗೆಲುವು ಸಾಧಿಸಿತು ಎಂಬುದನ್ನು ಸಹಿಸದ ವಿರಾಟ್ ಕೊಹ್ಲಿ ಪ್ರಶ್ನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಗೆಲುವಿಗೆ ಅವರು ಕಾರಣರಲ್ಲ ಎಂದು ಕಿಡಿಕಾರಿದ ಕೊಹ್ಲಿ
ನಮ್ಮ ತಂಡದ ಆಟಗಾರರು ಅತ್ಯದ್ಭುತ ಪ್ರದರ್ಶನ ನೀಡಿದ ಕಾರಣ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದೆವೋ ಹೊರತು ಎದುರಾಳಿ ತಂಡದ ಆಟಗಾರರು ಗಾಯದ ಸಮಸ್ಯೆಗೊಳಗಾಗಿ ಬಲಹೀನರಾಗಿದ್ದಾರೆ ಎಂಬ ಕಾರಣದಿಂದಲ್ಲ ಎಂದು ವಿರಾಟ್ ಕೊಹ್ಲಿ ಕಿಡಿಕಾರಿದರು. ಭಾರತ ತಂಡದ ಆಟಗಾರರ ಅತ್ಯದ್ಭುತ ಪ್ರದರ್ಶನದಿಂದ ಸಿಕ್ಕ ಗೆಲುವಿಗೆ ಈ ರೀತಿಯ ಪ್ರಶ್ನೆಯನ್ನು ಹಾಕುವುದು ಸರಿಯಲ್ಲ ಎಂದು ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಎದುರಾಳಿಗಳು ಬಲಹೀನರಾಗುವ ತನಕ ನಾವು ಕಾಯುವುದಿಲ್ಲ, ಸ್ಟಾರ್ ಆಟಗಾರರಿದ್ದರೂ ಎದುರಾಳಿಗಳನ್ನು ಸೋಲಿಸುತ್ತೇವೆ
ಇನ್ನೂ ಮುಂದುವರೆದು ಮಾತನಾಡಿದ ವಿರಾಟ್ ಕೊಹ್ಲಿ ಎದುರಾಳಿ ತಂಡದ ಆಟಗಾರರು ಬಲಹೀನರಾಗುವವರೆಗೂ ಟೀಮ್ ಇಂಡಿಯಾ ಆಟಗಾರರು ಕಾಯುವುದಿಲ್ಲ, ಎದುರಾಳಿ ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಸಹ ಅವರನ್ನು ಸದೆ ಬಡಿಯುವ ಸಾಮರ್ಥ್ಯ ನಮ್ಮ ತಂಡಕ್ಕಿದೆ ಎಂದು ಬಲಹೀನತೆಯ ಪ್ರಶ್ನೆಯನ್ನು ತಳ್ಳಿ ಹಾಕಿ ತಮ್ಮ ತಂಡವನ್ನು ಸಮರ್ಥಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications