ಅಂದು ಭಾರತದಲ್ಲಿ ಪಂದ್ಯ ರದ್ದಾದಾಗ ಇಂಗ್ಲೆಂಡ್ ನಡೆದುಕೊಂಡ ರೀತಿ ಮರೆಯೋಕಾಗಲ್ಲ: ಗವಾಸ್ಕರ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಸೆಪ್ಟೆಂಬರ್ 10ರ ಶುಕ್ರವಾರದಂದು ಆರಂಭವಾಗಬೇಕಿತ್ತು. ಲಂಡನ್ ನಗರದ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ಆರಂಭವಾಗಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗ ರದ್ದಾಯಿತು. ಹೌದು, ಟೀಮ್ ಇಂಡಿಯಾ ಬಳಗದಲ್ಲಿ ಕೊರೊನಾ ಸೋಂಕು ಹಬ್ಬುವ ಭೀತಿ ಇದ್ದ ಕಾರಣ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಈ ಪಂದ್ಯವನ್ನು ರದ್ದು ಮಾಡಲಾಯಿತು.
ಈ ಪಂದ್ಯ ಆರಂಭಕ್ಕೂ ಮುನ್ನ ಭಾರತದ ತರಬೇತುದಾರರಾದ ರವಿಶಾಸ್ತ್ರೀ, ಆರ್ ಶ್ರೀಧರ್ ಮತ್ತು ಭರತ್ ಅರುಣ್ ಹಾಗೂ ಫಿಸಿಯೋ ಓರ್ವರು ಕೊರೊನ ಸೋಂಕಿಗೆ ಒಳಗಾಗಿದ್ದರು. ಇದಾದ ಬೆನ್ನಲ್ಲೇ ಟೀಮ್ ಇಂಡಿಯಾದ ಮತ್ತೋರ್ವ ಫಿಸಿಯೋ ಯೋಗೇಶ್ ಪಾರ್ಮರ್ ಕೂಡ ಕೊರೋನಾ ಸೋಂಕಿಗೆ ಒಳಗಾದರು. ಹೀಗಾಗಿ ಕೂಡಲೇ ಎಚ್ಚೆತ್ತುಕೊಂಡ ಬಿಸಿಸಿಐ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಕಣಕ್ಕಿಳಿಸುವುದು ಅಸಾಧ್ಯ ಎಂದು ಪಂದ್ಯದಿಂದ ಹಿಂದೆ ಸರಿಯಿತು.
ಹೀಗೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರನ್ನು ಕಣಕ್ಕಿಳಿಸಲು ಆಗದೇ ಇದ್ದ ಕಾರಣ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮತ್ತು ಬಿಸಿಸಿಐ ಮಾತುಕತೆ ನಡೆಸಿ ಪಂದ್ಯವನ್ನು ರದ್ದುಗೊಳಿಸಿ ಮುಂದಿನ ದಿನಗಳಲ್ಲಿ ಈ ಪಂದ್ಯವನ್ನು ಪುನಃ ನಡೆಸಲು ತೀರ್ಮಾನ ಮಾಡಿದವು. ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವನ್ನು ರದ್ದು ಪಡಿಸಿ ಮುಂದೂಡಲ್ಪಟ್ಟ ನಿರ್ಧಾರವನ್ನು ಹಲವಾರು ಕ್ರಿಕೆಟ್ ಪಂಡಿತರು ಟೀಕಿಸಿದರು ಮತ್ತು ಇನ್ನೂ ಹಲವಾರು ಮಾಜಿ ಕ್ರಿಕೆಟಿಗರು ಸ್ವಾಗತಿಸಿದರು.
ಇದೀಗ ಈ ಕುರಿತು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ರದ್ದು ಗೊಳಿಸಿ ಮುಂದೂಡಲ್ಪಟ್ಟಿರುವುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ..

ಬಿಸಿಸಿಐ ತೀರ್ಮಾನವನ್ನು ಸ್ವಾಗತಿಸಿದ ಸುನಿಲ್ ಗವಾಸ್ಕರ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯವನ್ನು ರದ್ದು ಗೊಳಿಸಿದ ನಂತರ ಮುಂದಿನ ದಿನಗಳಲ್ಲಿ ಈ ಪಂದ್ಯವನ್ನು ಪುನಃ ಆಯೋಜಿಸುವ ತೀರ್ಮಾನ ಕೈಗೊಂಡ ಬಿಸಿಸಿಐ ಕುರಿತು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯವನ್ನು ಸಂಪೂರ್ಣವಾಗಿ ರದ್ದು ಮಾಡದೇ ಮುಂದಿನ ದಿನಗಳಲ್ಲಿ ಪಂದ್ಯವನ್ನು ಆಯೋಜಿಸಲು ಮುಂದಾಗಿರುವ ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಡೆಯನ್ನು ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.

ಈ ಹಿಂದೆ ಇಂಗ್ಲೆಂಡ್ ನಡೆದುಕೊಂಡ ರೀತಿಯನ್ನು ಮರೆಯೋಕಾಗಲ್ಲ ಎಂದ ಗವಾಸ್ಕರ್
ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದಾದ ರೀತಿಯೇ 2008ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 2 ಏಕದಿನ ಪಂದ್ಯಗಳು ರದ್ದಾಗಿದ್ದವು. ನವೆಂಬರ್ 26ರಂದು ಮುಂಬೈ ಅಟ್ಯಾಕ್ ನಡೆದಿದ್ದ ಕಾರಣ 7 ಪಂದ್ಯಗಳ ಏಕದಿನ ಸರಣಿಯ ಕೊನೆಯ 2 ಪಂದ್ಯಗಳು ರದ್ದಾಗಿದ್ದವು ಮತ್ತು ಇಂಗ್ಲೆಂಡ್ ತಂಡದ ಆಟಗಾರರು ತಮ್ಮ ತವರಿಗೆ ಮರಳಿದ್ದರು. ಹೀಗೆ ರದ್ದಾಗಿದ್ದ 2 ಏಕದಿನ ಪಂದ್ಯಗಳನ್ನು ನಂತರದ ದಿನಗಳಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನಾಡಲು ಭಾರತ ಪ್ರವಾಸವನ್ನು ಕೈಗೊಂಡಿದ್ದಾಗ ಯಶಸ್ವಿಯಾಗಿ ಮುಂದುವರಿಸಲಾಯಿತು ಎಂದು ಸುನೀಲ್ ಗವಾಸ್ಕರ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ರದ್ದಾದ ಮ್ಯಾಂಚೆಸ್ಟರ್ ಪಂದ್ಯ ಮುಂದಿನ ವರ್ಷ ನಡೆಯಲಿದೆ
ಸದ್ಯ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ಕೊರೊನ ವೈರಸ್ ಕಾರಣದಿಂದ ರದ್ದಾಗಿದ್ದು ಮುಂದಿನ ವರ್ಷ ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಾಗ ರದ್ದಾದ ಈ ಟೆಸ್ಟ್ ಪಂದ್ಯವನ್ನು ಪುನಃ ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಚಿಂತನೆ ನಡೆಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications