For Quick Alerts
ALLOW NOTIFICATIONS  
For Daily Alerts
 

IND vs ENG: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್

ಸೋಮವಾರ, ಫೆಬ್ರವರಿ 26ರಂದು ರಾಂಚಿಯಲ್ಲಿ ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆತಿಥೇಯ ಭಾರತ ತಂಡ, ಐದು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 3-1 ಅಂತರದಿಂದ ವಶಪಡಿಸಿಕೊಂಡಿತು.

ಇದೇ ವೇಳೆ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಟೆಸ್ಟ್ ಸರಣಿಯೊಂದರಲ್ಲಿ ಭಾರತೀಯ ಬ್ಯಾಟರ್‌ನಿಂದ ಅತಿ ಹೆಚ್ಚು ರನ್ ಗಳಿಸಿದ್ದ (655) ವಿರಾಟ್ ಕೊಹ್ಲಿ ದಾಖಲೆಯನ್ನು ಸಮಬಲ ಸಾಧಿಸಿದ್ದಾರೆ. ಎಡಗೈ ಆಟಗಾರ ಬ್ಯಾಟ್‌ನೊಂದಿಗೆ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.

ರಾಂಚಿ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕ್ರೀಸ್‌ಗೆ ಬರುವ ಮೊದಲು ಯಶಸ್ವಿ ಜೈಸ್ವಾಲ್ 618 ರನ್ ಗಳಿಸಿದ್ದರು ಮತ್ತು ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಲು ಇನ್ನೂ 37 ರನ್‌ಗಳ ಅಗತ್ಯವಿತ್ತು.

IND vs ENG: Yashasvi Jaiswal Equals Virat Kohlis Record in Test Series Against England

2016-17ರಲ್ಲಿ ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಮಾಡಿದ್ದರು.

ಯಶಸ್ವಿ ಜೈಸ್ವಾಲ್ ಅವರು ಸೋಮವಾರ ಬೆಳಿಗ್ಗೆ ಟಾಮ್ ಹಾರ್ಟ್ಲಿ ಬೌಲಿಂಗ್‌ನಲ್ಲಿ ಡಿಆರ್ಎಸ್ ರಿವ್ಯೂ ನಿಕಟ ಹೋರಾಟ ಹೊಂದಿದ್ದರು. ಆದರೆ ಜೀವದಾನ ಪಡೆದ ಜೈಸ್ವಾಲ್ ಅವರು ವಿರಾಟ್ ಕೊಹ್ಲಿಯೊಂದಿಗೆ ಸಮಬಲ ಸಾಧಿಸಲು, ಶೋಯೆಬ್ ಬಶೀರ್ ಬೌಲಿಂಗ್‌ನಲ್ಲಿ ಎರಡು ಬೌಂಡರಿ ಬಾರಿಸಿದರು.

ಆದಾಗ್ಯೂ, ಜೋ ರೂಟ್ ಬೌಲಿಂಗ್‌ನಲ್ಲಿ ಜೇಮ್ಸ್ ಆಂಡರ್ಸನ್ ಅವರ ಅದ್ಭುತ ಕ್ಯಾಚ್‌ನಿಂದ ಕ್ರೀಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಆಟಕ್ಕೆ ವಿರಾಮ ಬಿತ್ತು.

ಮುಂಬರುವ ಧರ್ಮಶಾಲಾದಲ್ಲಿ ನಡೆಯುವ ಐದನೇ ಟೆಸ್ಟ್‌ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ನಂತರ, ದ್ವಿಪಕ್ಷೀಯ ಸರಣಿಯಲ್ಲಿ 700 ರನ್ ಗಳಿಸಿದ ಎರಡನೇ ಭಾರತೀಯ ಎಂಬ ಗುರಿಯನ್ನು ಭಾರತೀಯ ಆರಂಭಿಕ ಆಟಗಾರನಿಗೆ ಅವಕಾಶವಿದೆ.

ಟೆಸ್ಟ್ ಸರಣಿಯಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಹೊಂದಿರುವ ಗ್ರಹಾಂ ಗೂಚ್ ಮತ್ತು ಜೋ ರೂಟ್ ಅವರ ದಾಖಲೆಗಳನ್ನು ಮುರಿಯಲು ಯಶಸ್ವಿ ಜೈಸ್ವಾಲ್ ಪ್ರಯತ್ನಿಸುತ್ತಿದ್ದಾರೆ.

ಗ್ರಹಾಂ ಗೂಚ್ 1990ರಲ್ಲಿ 752 ರನ್ ಗಳಿಸಿದರು ಮತ್ತು 2021-22ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ ಜೋ ರೂಟ್ 737 ಗಳಿಸಿದರು.

IND vs ENG: Yashasvi Jaiswal Equals Virat Kohlis Record in Test Series Against England

ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಅವರು ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೈದರಾಬಾದ್‌ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕ್ರಮಣಕಾರಿ 80 ರನ್‌ಗಳೊಂದಿಗೆ ಪ್ರಾರಂಭಿಸಿದರು.

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ 209 ರನ್‌ಗಳ ದ್ವಿಶತಕವು ವಿಶಾಖಪಟ್ಟಣದಲ್ಲಿ ಭಾರತದ ಗೆಲುವಿಗೆ ಅಡಿಪಾಯ ಹಾಕಿತು. ನಂತರ ರಾಜ್‌ಕೋಟ್‌ನಲ್ಲಿ ಮತ್ತೊಂದು ದ್ವಿಶತಕದೊಂದಿಗೆ ಆತಿಥೇಯರಿಗೆ ಸರಣಿಯಲ್ಲಿ ಮುನ್ನಡೆ ಸಾಧಿಸಲು ಅವಕಾಶ ಮಾಡಿಕೊಟ್ಟರು.

ಈ ಮೂಲಕ ಯಶಸ್ವಿ ಜೈಸ್ವಾಲ್ ಅವರು ವಿನೋದ್ ಕಾಂಬ್ಳಿ ಮತ್ತು ವಿರಾಟ್ ಕೊಹ್ಲಿ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ದ್ವಿಶತಕಗಳನ್ನು ಬಾರಿಸಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿದರು.

ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 8 ಟೆಸ್ಟ್‌ ಪಂದ್ಯಗಳಲ್ಲಿ ಆಡಿ 971 ರನ್ ಗಳಿಸಿದ ನಂತರ, ವೇಗವಾಗಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಆಗಿದ್ದಾರೆ.

ಇದೇ ಅವಧಿಯಲ್ಲಿ 1210 ರನ್ ಗಳಿಸಿದ್ದ ಶ್ರೇಷ್ಠ ಡಾನ್ ಬ್ರಾಡ್‌ಮನ್‌ ನಂತರ ಇದು ಎರಡನೇ ಸ್ಥಾನದಲ್ಲಿದೆ. ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ 93.57ರ ಸರಾಸರಿ ಹೊಂದಿದ್ದಾರೆ.

Story first published: Monday, February 26, 2024, 16:12 [IST]
Other articles published on Feb 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+