ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ತನ್ನ ಚಿಕ್ಕ ವಯಸ್ಸಿನಲ್ಲಿ ಹಲವು ದಾಖಲೆಗಹಳನ್ನು ಪುಡಿ ಮಾಡಿದ ಹಿರಿಮೆ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಯಶಸ್ವಿ, ಐದನೇ ಟೆಸ್ಟ್ ಪಂದ್ಯದಲ್ಲಿ ಇದೇ ಫಾರ್ಮ್‌ನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಕ್ ಟು ಬ್ಯಾಕ್ ದ್ವೀಶತಕ ಬಾರಿಸಿದ ಅದೆಷ್ಟೋ ಬ್ಯಾಟ್ಸ್‌ಮನ್‌ಗಳು ಇದ್ದಾರೆ. ಆದರೆ ಈ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಮುಂಚೂಣಿಯಲ್ಲಿದ್ದಾರೆ. ಯಶಸ್ವಿ ಚಿಕ್ಕ ವಯಸ್ಸಿನಲ್ಲೇ ಎರಡು ದ್ವಿಶತಕ ಬಾರಿಸಿದ ದಾಖಲೆ ಬರೆದಿದ್ದಾರೆ.

ಜೈಸ್ವಾಲ್ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಮಾತ್ರವಲ್ಲದೆ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ 1948 ರ ವರ್ಷದ ದಾಖಲೆಯನ್ನೂ ಮುರಿಯಬಹುದು. ಆದರೆ ಇದಕ್ಕಾಗಿ ಅವರು ಮತ್ತೊಂದು ದೊಡ್ಡ ಇನ್ನಿಂಗ್ಸ್ ಕಟ್ಟಬೇಕು.
ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಎವರ್ಟನ್ ವೀಕ್ಸ್ ಹೆಸರಿನಲ್ಲಿದೆ. ಅವರು 1948-49ರಲ್ಲಿ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 779 ರನ್ ಗಳಿಸಿದ್ದರು. ಅಂದಿನಿಂದ, ಯಾವುದೇ ಬ್ಯಾಟ್ಸ್‌ಮನ್‌ಗಳು ಈ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. 1971 ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತದ ಸುನಿಲ್ ಗವಾಸ್ಕರ್ 774 ರನ್ ಗಳಿಸಿದ್ದರು, ಆದರೆ ಅವರು ಎವರ್ಟನ್ ವೀಕ್ಸ್‌ನ ದಾಖಲೆಯನ್ನು ಮುರಿಯುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡರು. ಇದೀಗ ಈ 76 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಅವಕಾಶ ಜೈಸ್ವಾಲ್ ಗೆ ಸಿಕ್ಕಿದೆ.
ಯಶಸ್ವಿ ಜೈಸ್ವಾಲ್ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 655 ರನ್ ಗಳಿಸಿದ್ದಾರೆ. ಎವರ್ಟನ್ ವೀಕ್ಸ್‌ನ ದಾಖಲೆಯನ್ನು ಮುರಿಯಲು ಅವರಿಗೆ ಇನ್ನೂ 125 ರನ್‌ಗಳ ಅಗತ್ಯವಿದೆ. ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಜೈಸ್ವಾಲ್‌ಗೆ ಇದು ದೊಡ್ಡ ವಿಷಯವಲ್ಲ, ಅವರು ಒಮ್ಮೆ ಕ್ರೀಸ್‌ನಲ್ಲಿ ನೆಲಕಚ್ಚಿ ನಿಂತರೆ ದೊಡ್ಡ ಇನ್ನಿಂಗ್ಸ್ ಫಿಕ್ಸ್..

ಜೈಸ್ವಾಲ್ 125 ರನ್ ಗಳಿಸಿದರೆ ಸುನಿಲ್ ಗವಾಸ್ಕರ್ ದಾಖಲೆ ಮುರಿಯುವುದಷ್ಟೇ ಅಲ್ಲ, ಎವರ್ಟನ್ ವೀಕ್ಸ್ ಕೂಡ ಹಿಂದಿಕ್ಕಬಹುದು. 2016 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಐದು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೇವಲ 655 ರನ್ ಗಳಿಸಿದ್ದರು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತೀಯರು ಗಳಿಸಿದ ಅತಿ ಹೆಚ್ಚು ರನ್ ಇದಾಗಿದೆ.
ಯಶಸ್ವಿ ಐದನೇ ಪಂದ್ಯದಲ್ಲಿ ಜೈಸ್ವಾಲ್ ರನ್ ಗಳಿಸಿದ ತಕ್ಷಣ ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ. ಜೈಸ್ವಾಲ್ ಮುಂದುವರಿದರೆ ಇನ್ನೂ ಹಲವು ದಾಖಲೆಗಳು ನಿರ್ಮಾಣವಾಗಲಿವೆ. ಜೈಸ್ವಾಲ್ ಈ ಸರಣಿಯಲ್ಲಿ ಇದುವರೆಗೆ ಆಡಿದ ಇನ್ನಿಂಗ್ಸ್ ನೋಡಿದರೆ ಬೇಗ ಔಟಾಗದೇ ಇದ್ದರೆ ಬಿಗ್ ಇನ್ನಿಂಗ್ಸ್ ಫಿಕ್ಸ್...