Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Ire: ಮೊದಲ ಟಿ20 ಆರಂಭಕ್ಕೂ ಮುನ್ನ ಐರ್ಲೆಂಡ್ ನಾಯಕನಿಂದ ಭಾರತಕ್ಕೆ ಎಚ್ಚರಿಕೆ

ಟೀಮ್ ಇಂಡಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲು ಸಜ್ಜಾಗಿರುವ ಐರ್ಲೆಂಡ್ ತಂಡ ತವರಿನಲ್ಲಿ ಭಾರತದ ವಿರುದ್ಧ ಮೇಲುಗೈ ಸಾಧಿಸುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದೆ. ತಂಡದ ನಾಯಕ ಪಾಲ್ ಸ್ಟಿರ್ಲಿಂಗ್ ಈ ಬಗ್ಗೆ ಮಾತನಾಡಿದ್ದು ಈ ಸರಣಿಯಲ್ಲಿ ತಮ್ಮ ತಂಡ ಅಂಡರ್‌ಡಾಗ್ಸ್ ಎನಿಸಿಕೊಂಡಿದ್ದು ಇದು ತಮ್ಮ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿದೆ ಎಂದಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗಲು ಐರ್ಲೆಂಡ್ ತಂಡ ಇತ್ತೀಚೆಗಷ್ಟೇ ಅರ್ಹತೆಯನ್ನು ಸಂಪಾದಿಸಿದೆ. ಜುಕೈ ತಿಂಗಳಿನಲ್ಲಿ ನಡೆದ ಯುರೋಪಿಯನ್ ಭಾಗದ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಐರ್ಲೆಂಡ್ ತಂಡ ಅರ್ಹತೆಯನ್ನು ಸಂಪಾದಿಸಿಕೊಂಡಿದೆ. ಇದೀಗ ಜಸ್ಪ್ರೀತ್ ಬೂಮ್ರಾ ನೇತೃತ್ವದ ಭಾರತ ತಂಡದ ಮೇಲೆ ಒತ್ತಡ ಹೇರುವ ಪ್ರಯತ್ನಗಳನ್ನು ನಡೆಸುತ್ತಿದೆ ಐರ್ಲೆಂಡ್.

Ind vs Ire 1st T20: Paul Stirling said Its the start of our adventure to the World Cup

ಟಿ20 ಮಾದರಿಯಲ್ಲಿ ಐರ್ಲೆಂಡ್ ತಮಡದ ನಾಯಕತ್ವವನ್ನು ಆಂಡ್ರ್ಯೋ ಬಲ್ಬರ್ನೈ ಅವರಿಂದ ಇತ್ತೀಚೆಗಷ್ಟೇ ವಹಿಸಿಕೊಂಡಿರುವ ಪಾಲ್ ಸ್ಟಿರ್ಲಿಂಗ್ ಟೀಮ್ ಇಂಡಿಯಾ ಬಗ್ಗೆ ಮಾತನಾಡಿದ್ದಾರೆ. ಭಾರತ ತಂಡ ಈ ವರ್ಷದುದ್ದಕ್ಕೂ ಅದ್ಭುತವಾದ ಕ್ರಿಕೆಟ್ ಆಡಿಕೊಂಡು ಬಂದಿದೆ. ಹಾಗಿದ್ದರೂ ತಮ್ಮ ತಂಡ ಅಂಡರ್‌ಡಾಗ್ಸ್ ಎನಿಸಿಕೊಂಡಿದ್ದು ಇದು ತಮ್ಮ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದ್ದು ನಿರಾಳವಾಗಿ ಆಡಲು ಅವಕಾಶ ಮಾಡಿಕೊಡಲಿದೆ ಎಂದಿದ್ದಾರೆ.

"ಇಲ್ಲಿಂದ ವಿಶ್ವಕಪ್‌ಗೆ ನಮ್ಮ ಸಾಹಸ ಆರಂಭವಾಗಲಿದೆ. ನಾವು ಎದುರಿಸುತ್ತಿರುವ ಎದುರಾಳಿಗಳನ್ನು ಹಾಗೂ ಅವರ ಆಟದ ಗುಣಮಟ್ಟ ನಮಗೆ ತಿಳಿದಿದೆ. ಐಪಿಎಲ್ ಸೇರಿದಂತೆ ರಾಷ್ಟ್ರೀಯ ತಂಡದಲ್ಲಿ ಅವರು ಸುದೀರ್ಘ ಕಾಲದಿಂದ ಆಡಿಕೊಂಡು ಬಂದಿರುವ ಕಾರಣ ಅವರ ಕ್ರಿಕೆಟ್‌ನ ಗುಣಮಟ್ಟ ನಿಸ್ಸಂಶಯವಾಗಿ ಉತ್ತಮವಾಗಿದೆ. ಆದರೆ ಅದೇ ಸಂದರ್ಭದಲ್ಲಿ ನಾವು ಈ ಸರಣಿಯಲ್ಲಿ ಅಂಡರ್‌ಡಾಗ್ಸ್ ಎನಿಸಿಕೊಂಡಿದ್ದೇವೆ. ಇದು ಒಂದು ವಾರಗಳ ಕಾಲ ನಮ್ಮ ಮೇಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಾವು ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಲು ಸಾಧ್ಯವಾಗಲಿದೆ" ಎಂದಿದ್ದಾರೆ ಪಾಲ್ ಸ್ಟಿರ್ಲಿಂಗ್.

ಇನ್ನು ಭಾರತ ಹಾಘೂ ಐರ್ಲೆಂಡ್ ತಮಡಗಳ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ದಟ್ಟವಾಗಿದೆ. ಇದು ಸಾಕಷ್ಟು ವಿಚಾರಗಳಿಂದಾಗಿ ಈ ಪಂದ್ಯವನ್ನು ಎದುರು ನೋಡುತ್ತಿರುವ ಟೀಮ್ ಇಂಡಿಯಾ ಅಭಿಮಾನಿಗಳಿಗೆ ನಿರಾಸೆಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ.

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೇರ್, ರಾಸ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್

ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.

Story first published: Friday, August 18, 2023, 17:05 [IST]
Other articles published on Aug 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+