Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Ire: ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಬೌಲಿಂಗ್ ದಾಳಿ: ಸಾಧಾರಣ ಗುರಿ ನೀಡಿದ ಐರ್ಲೆಂಡ್

ಭಾರತ ಹಾಗೂ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಅಮೋಘ ಯಶಸ್ಸು ಸಾಧಿಸಿದೆ. ನಾಯಕ ಜಸ್ಪ್ರೀತ್ ಬೂಮ್ರಾ ನೇತೃತ್ವದಲ್ಲಿ ನಡೆದ ಅಮೋಘ ದಾಳಿಗೆ ಐರ್ಲೆಂಡ್ ತಂಡದ ಅಗ್ರ ಕ್ರಮಾಂಕ ಸಂಪೂರ್ಣವಾಗಿ ತತ್ತರಿಸಿತ್ತು. ಆದರೆ ಕೊನೆಯ ಹಂತದಲ್ಲಿ ಉತ್ತಮ ಹೋರಾಟ ಪ್ರದರ್ಶಿಸಿದ ಕಾರಣ ಗೌರವಯುತ ಮೊತ್ತವನ್ನು ಆತಿಥೇಯ ಐರ್ಲೆಂಡ್ ಪೇರಿಸುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದ ಭಾರತ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಈ ನಿರ್ಧಾರವನ್ನು ಮೊದಲ ಓವರ್‌ನಲ್ಲಿಯೇ ಸ್ವತಃ ನಾಯಕ ಬೂಮ್ರಾ ಸಮರ್ಥನೆ ಮಾಡಿಕೊಂಡರು. ಆರಂಭಿಕ ಓವರ್‌ನಲ್ಲಿಯೇ ಎರಡು ವಿಕೆಟ್ ಪಡೆಯುವ ಮೂಲಕ ಆತಿಥೇಯ ತಂಡಕ್ಕೆ ದೊಡ್ಡ ಆಘಾತ ನೀಡಿದರು. ಅದಾದ ಬಳಿಕ ಹ್ಯಾರಿ ಟೆಕ್ಟರ್ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ವಿಕೆಟ್ ಕಲೆದುಕೊಂಡರೆ ರವಿ ಬಿಷ್ಣೋಯ್ ನಾಯಕ ಸ್ಟಿರ್ಲಿಂಗ್ ವಿಕಟ್ ಕಬಳಿಸಿದರು. ನಂತರ ಡಾಕ್ರೆಲ್ ವಿಕೆಟ್ ಪ್ರಸಿದ್ಧ ಕೃಷ್ಣಗೆ ನೀಡಿದಾಗ ಐರ್ಲೆಂಡ್ ತಂಡ ಕೇವಲ 31 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

Ind vs Ire 1st T20I, Team India need 140 runs to win against Ireland

ನಂತರ ಮಾರ್ಕ್ ಅದೈರ್ ಕೂಡ16 ರನ್‌ಗಳ ಕೊಡುಗೆ ನಿಡಿ ನಿರ್ಗಮಿಸಿದರು. ಆದರೆ ಬಳಿಕ ಕರ್ಟೀಸ್ ಕ್ಯಾಫೈರ್ ಹಾಗೂ ಬಾರಿ ಮೆಕ್‌ಕರ್ತಿ ಅದ್ಭುತ ಜೊತೆಯಾಟವೊಂದರಲ್ಲಿ ಭಾಗಿಯಾದರು. ಕ್ಯಾಂಫರ್ 39 ರನ್‌ಗಳ ಕೊಡುಗೆ ನೀಡಿದರೆ ಮೆಕ್‌ಕರ್ತಿ ಕೊನೆಯವರೆಗೂ ಹೋರಾಟ ನಡೆಸಿ 3 ಎಸೆತಗಳಲ್ಲಿ 51 ರನ್‌ಗಳನ್ನು ಗಳಿಸಿ ಅಜೇಯವಾಗುಳಿದರು. ಹೀಗಾಗಿ ಐರ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 139 ರನ್‌ಗಳನ್ನು ಗಳಿಸಿದೆ.

ಟೀಮ್ ಇಂಡಿಯಾ ಪರವಾಗಿ ನಾಯಕ ಜಸ್ಪ್ರೀತ್ ಬೂಮ್ರಾ, ಪ್ರಸಿದ್ಧ್ ಕೃಷ್ಣ ಹಾಗೂ ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ ಕಬಳಿಸಿದ್ದಾರೆ. ಇನ್ನು ಅರ್ಷ್‌ದೀಪ್ ಸಿಂಗ್ ಅವರು ಒಂದು ವಿಕೆಟ್ ಸಂಪಾದಿಸಿದರು. ಈ ಮೂಲಕ ಭಾರತದ ಬೌಲಿಂಗ್ ವಿಭಾಗ ಈ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು.

ಟೀಮ್ ಇಂಡಿಯಾ ಆಡುವ ಬಳಗ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ(ನಾಯಕ), ರವಿ ಬಿಷ್ಣೋಯ್

ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್(ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್

Story first published: Friday, August 18, 2023, 21:38 [IST]
Other articles published on Aug 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+