For Quick Alerts
ALLOW NOTIFICATIONS  
For Daily Alerts
 

IND W vs IRE W: ಮೊದಲ ಬಾರಿಗೆ ದಾಖಲೆ ಮೊತ್ತ ಕಲೆ ಹಾಕಿದ ಭಾರತ

ಐರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇತಿಹಾಸ ಸೃಷ್ಟಿಸಿದೆ. ನಾಯಕಿ ಸ್ಮೃತಿ ಮಂಧಾನ ಮತ್ತು ಆರಂಭಿಕ ಬ್ಯಾಟರ್ ಪ್ರತೀಕಾ ರಾವಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಮಂಧಾನ ಮತ್ತು ರಾವಲ್ ಬಿರುಸಿನ ಶತಕಗಳನ್ನು ಬಾರಿಸುವ ಮೂಲಕ ಭಾರತ ತಂಡ ದಾಖಲೆ ಸೃಷ್ಟಿಸಲು ನೆರವಾಗಿದ್ದಾರೆ. ಈ ಇಬ್ಬರ ಶತಕದ ನೆರವಿನಿಂದ ಭಾರತ ತಂಡ 435 ರನ್ ಕಲೆ ಹಾಕಿದೆ. ಇದುವರೆಗೆ ಏಕದಿನ ಮಾದರಿಯಲ್ಲಿ ಭಾರತ ಗಳಿಸಿದ ಅತಿ ದೊಡ್ಡ ಸ್ಕೋರ್ ಇದಾಗಿದೆ.

ಕಳೆದ 3 ದಿನಗಳಲ್ಲಿ ಟೀಮ್ ಇಂಡಿಯಾ ತನ್ನ ದಾಖಲೆಯನ್ನು ಮುರಿದಿದೆ. ಜನವರಿ 12 ರಂದು ಭಾನುವಾರ ಇಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 370 ರನ್ ಗಳಿಸಿತ್ತು. ಇದೀಗ 370 ರನ್ ಭಾರತದ ಎರಡನೇ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ.

IND vs IRE Indian women s team scores record total of over 400 for the first time

ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಗಳಿಸಿದ 435 ರನ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಅತ್ಯಧಿಕ ಸ್ಕೋರ್ ಆಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ಮೂರು ಅತ್ಯಧಿಕ ಸ್ಕೋರ್‌ಗಳು ನ್ಯೂಜಿಲೆಂಡ್ ಮಹಿಳಾ ತಂಡದ ಹೆಸರಿನಲ್ಲಿವೆ. ನ್ಯೂಜಿಲೆಂಡ್ ಮಹಿಳೆಯರು ಏಕದಿನ ಕ್ರಿಕೆಟ್‌ನಲ್ಲಿ 491, 455 ಮತ್ತು 440 ರನ್‌ಗಳನ್ನು ಮೂರು ಕಲೆ ಹಾಕಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಐರ್ಲೆಂಡ್ ವಿರುದ್ಧವೇ ನ್ಯೂಜಿಲೆಂಡ್ ಮೊದಲ ಮತ್ತು ಮೂರನೇ ಗರಿಷ್ಠ ಸ್ಕೋರ್ ಮಾಡಿದೆ. ಇಂದು ಭಾರತ ತಂಡವು ಐರ್ಲೆಂಡ್ ವಿರುದ್ಧ ನಾಲ್ಕನೇ ಗರಿಷ್ಠ ಸ್ಕೋರ್ ಮಾಡಿದೆ.

ಐರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಸ್ಮೃತಿ ಮಂಧಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಈ ಸರಣಿಯಲ್ಲಿ ಮಂಧಾನ ಮತ್ತು ಪ್ರತೀಕಾ ರಾವಲ್ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯೂ ಇಬ್ಬರೂ ನೆಲಕಚ್ಚಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದರು.

ಐರ್ಲೆಂಡ್ ಬೌಲರ್‌ಗಳನ್ನು ಕಾಡಿದ ಈ ಜೋಡಿ 200ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ಆಡಿತು. ಮಂಧಾನ ಕೇವಲ 70 ಎಸೆತಗಳಲ್ಲಿ ಶತಕ ಪೂರೈಸಿ ದಾಖಲೆ ಬರೆದರು. ಅವರು ಒಟ್ಟು 80 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 12 ಬೌಂಡರಿಗಳ ಸಹಾಯದಿಂದ 135 ರನ್ ಗಳಿಸಿ ದಾಖಲೆಯ ಇನ್ನಿಂಗ್ಸ್ ಆಡಿದರು.

ಮಂಧಾನ ಅವರ ಸ್ಪೋಟಕ ಇನ್ನಿಂಗ್ಸ್‌ನಿಂದಾಗಿ ಟೀಮ್ ಇಂಡಿಯಾ ಅದ್ಭುತ ಆರಂಭ ಪಡೆಯಿತು. ಭಾರತ ತಂಡ 30 ಓವರ್‌ಗೂ ಮುನ್ನವೇ 250 ರನ್‌ಗಳ ಗಡಿ ದಾಟಿತ್ತು. ಪ್ರತೀಕಾ ರಾವಲ್ ಕೂಡ ಐರ್ಲೆಂಡ್ ಬೌಲರ್‌ಗಳಿಗೆ ಬೆವರಿಳಿಸುವುದರಲ್ಲಿ ಹಿಂದೆ ಉಳಿಯಿಲ್ಲ. ಅವರು 129 ಎಸೆತಗಳಲ್ಲಿ 20 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 154 ರನ್ ಗಳಿಸಿ ಭಾರತ ದಾಖಲೆಯ ಮೊತ್ತ ಕಲೆ ಹಾಕಲು ನೆರವಾದರು.

ವೇಗದ ಶತಕ

ಸ್ಮೃತಿ ಮಂಧಾನ 135 ರನ್‌ಗಳ ಇನ್ನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ 10 ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಮಹಿಳಾ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಏಕದಿನದಲ್ಲಿ ವೇಗದ ಶತಕ ಬಾರಿಸಿದ ದಾಖಲೆಯನ್ನೂ ಮಾಡಿದ್ದಾರೆ. 80 ಎಸೆತಗಳಲ್ಲಿ ಶತಕ ಸಿಡಿಸಿದ್ದ ಹರ್ಮನ್‌ಪ್ರೀತ್ ಕೌರ್ ದಾಖಲೆಯನ್ನು ಮುರಿದಿದ್ದಾರೆ.

Story first published: Wednesday, January 15, 2025, 15:20 [IST]
Other articles published on Jan 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+