For Quick Alerts
ALLOW NOTIFICATIONS  
For Daily Alerts
 

IND vs IRE: ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವನಿತೆಯರ 'ಗರಿಷ್ಠ' ಸಾಧನೆ

ಭಾರತ ಮತ್ತು ಐರ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಭಾನುವಾರ ರಾಜ್‌ಕೋಟ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡ ರನ್ ಮಳೆ ಸುರಿಸಿದೆ. ಟೀಮ್ ಇಂಡಿಯಾ ತನ್ನ ಎಲ್ಲಾ ದಾಖಲೆಗಳನ್ನು ಮುರಿದು ಏಕದಿನದಲ್ಲಿ ತನ್ನ ಗರಿಷ್ಠ ಸ್ಕೋರ್ ಕಲೆ ಹಾಕಿದೆ. ಭಾರತದ ವನಿತೆಯರು ಐರ್ಲೆಂಡ್‌ನ ಬೌಲರ್‌ಗಳಿಗೆ ಬೆವರಿಳಿಸಿ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 370 ರನ್ ಗಳಿಸಿದ್ದಾರೆ.

ಜೆಮಿಮಾ ರೋಡ್ರಿಗಸ್ ಅವರ ಮೊದಲ ಶತಕ ಮತ್ತು ನಾಯಕಿ ಸ್ಮೃತಿ ಮಂಧಾನ, ಪ್ರತೀಕ್ ರಾವ್ಲಾ ಮತ್ತು ಹರ್ಲೀನ್ ಡಿಯೋಲ್ ಅವರ ಅರ್ಧಶತಕಗಳ ನೆರವಿನಿಂದ ಭಾರತ ಮಹಿಳಾ ತಂಡವು ಏಕದಿನ ಕ್ರಿಕೆಟ್‌ನಲ್ಲಿ ತನ್ನ ಗರಿಷ್ಠ ಸ್ಕೋರ್ ಕಲೆ ಹಾಕಿದೆ. ಈ ಹಿಂದೆ ಐರ್ಲೆಂಡ್ ವಿರುದ್ಧ ಭಾರತ 358 ರನ್‌ಗಳ ಅತ್ಯುತ್ತಮ ಏಕದಿನ ಸ್ಕೋರನ್ನು ಗಳಿಸಿತ್ತು.

IND vs IRE Indian women s team with the highest run-scorers in ODI cricket

ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಬೃಹತ್ ಮೊತ್ತ 370 ರನ್ ಆಗಿದೆ. ಭಾರತ 8 ವರ್ಷಗಳ ಬಳಿಕ ಅದೇ ತಂಡದ ವಿರುದ್ಧ ತನ್ನ ದಾಖಲೆಯನ್ನು ಸುಧಾರಿಸಿಕೊಂಡಿದೆ. ಭಾರತದ ಇನ್ನಿಂಗ್ಸ್‌ನಲ್ಲಿ 44 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು.

ಅದ್ಭುತ ಆರಂಭ

ಭಾರತದ ಇಬ್ಬರು ಆರಂಭಿಕ ಬ್ಯಾಟರ್‌ಗಳಾದ ಸ್ಮೃತಿ ಮಂಧಾನ ಮತ್ತು ಪ್ರತೀಕಾ ರಾವಲ್ ಜೋಡಿ 19 ಓವರ್‌ಗಳಲ್ಲಿ 156 ರನ್‌ಗಳ ಜೊತೆಯಾಟವನ್ನು ಮಾಡುವ ಮೂಲಕ ತಂಡವನ್ನು ಮುನ್ನಡೆಸಿದರು. ಸ್ಮೃತಿ 73 ರನ್ ಮತ್ತು ಪ್ರತೀಕಾ 67 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಬಂದ ಹರ್ಲೀನ್ ಡಿಯೋಲ್ 89 ರನ್‌ಗಳ ಇನಿಂಗ್ಸ್‌ ಆಡಿದರು. ಜೆಮಿಮಾ ರೋಡ್ರಿಗಸ್ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಮೂಲಕ ಜೆಮಿಯಾ ಅವರ ಅಂತಾರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಬಾರಿಸಿ ಸಂಭ್ರಮಿಸಿದರು. ಜೆಮಿಯಾ 91 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ 102 ರನ್ ಗಳಿಸಿದರು.

ಕೌರ್ ದಾಖಲೆ ಸರಿಗಟ್ಟಿದ ಜೆಮಿಮಾ

ಐಲೆಂರ್ಡ್ ವಿರುದ್ಧ ಅಬ್ಬರಿಸಿದ ಜೆಮಿಮಾ ರೋಡ್ರಿಗಸ್ ಅವರು ಹರ್ಮನ್‌ಪ್ರೀತ್ ಕೌರ್ ಅವರ ದಾಖಲೆಯನ್ನು ಸರಿಗಟ್ಟಿದರು. ಮಹಿಳಾ ಏಕಿದನ ಕ್ರಿಕೆಟ್‌ನಲ್ಲಿ ಕೇವಲ 40 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳನ್ನು ಪೂರೈಸಿದರು. ಜೆಮಿಮಾ 90 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸುವ ಮೂಲಕ ಏಕದಿನ ಕ್ರಿಕೆಟ್ ಜಂಟಿ ಎರಡನೇ ವೇಗದ ಶತಕ ಬಾರಿಸಿದ ಆಟಗಾರ್ತಿ ಎನಿಸಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧ 2024ರಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು 89 ಎಸೆತಗಳಲ್ಲಿ ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ 90 ಎಸೆತಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 2017ರಲ್ಲಿ ಕೌರ್ ಶತಕವನ್ನು ಬಾರಿಸಿದ್ದರು.

Story first published: Sunday, January 12, 2025, 16:29 [IST]
Other articles published on Jan 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+