Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾಯಕನಾಗಿ ಮೊದಲ ಪಂದ್ಯದಲ್ಲಿ ಫುಲ್ ಮಾರ್ಕ್ಸ್: ಗೆದ್ದ ಬಳಿಕ ಬೂಮ್ರಾ ಹೇಳಿದ್ದೇನು!

ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಡಿಎಲ್ ನಿಯಮದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ನಾಯಕನಾಗಿ ಜಸ್ಪ್ರೀತ್ ಬೂಮ್ರಾ ಅದ್ಭುತ ಆರಂಭವನ್ನು ಪಡೆದುಕೊಂಡಿದ್ದಾರೆ. ಇನ್ನು ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಬೂಮ್ರಾ ನೀಡಿದ ಪ್ರದರ್ಶರ್ ಎಲ್ಲರ ಗಮನಸೆಳೆದಿದ್ದು 10 ತಿಂಗಳ ಬಳಿಕ ಕಮ್‌ಬ್ಯಾಕ್ ಮಾಡಿದ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಬೂಮ್ರಾ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಐರ್ಲೆಂಡ್ ತಂಡದ ಇಬ್ಬರು ಅಗ್ರ ಕ್ರಮಾಂಕದ ಆಟಗಾರರನ್ನು ಔಟ್ ಮಾಡುವಲ್ಲಿ ಯಸಸ್ವಿಯಾಗಿದ್ದರು. ಈ ಮೂಲಕ ಭಾರತ ತಂಡಕ್ಕೆ ಬೂಮ್ರಾ ಆರಂಭದಲಲ್ಇಯೇ ಮೇಲುಗೈ ಒದಗಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಬೂಮ್ರಾ ಫಾರ್ಮ್ ಬಗ್ಗೆ ಇದ್ದ ಅನುಮಾನಗಳಿಗೂ ಉತ್ತರ ನೀಡಿದಂತಾಗಿದೆ.

Ind vs Ire: Jasprit Bumrah shine on his return, securing the Player of the Match in his debut as captain

ಇನ್ನು ಈ ಪಂದ್ಯದ ಬಳಿಕ ಮಾತನಾಡಿದ ಜಸ್ಪ್ರೀತ್ ಬೂಮ್ರಾ ಅವರಲ್ಲಿ ಪಂದ್ಯವನ್ನು ಮುನ್ನಡೆಸುವಾಗ ಅಳುಕಿತ್ತಾ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಬೂಮ್ರಾ "ಖಂಡಿತವಾಗಿಯೂ ಇಲ್ಲ. ನೀವು ತಂಡವನ್ನು ಮುನ್ನಡೆಸುವಾಗ ನಿಮ್ಮ ವೈಯಕ್ತಿಕ ಪ್ರದರ್ಶನ ಹೊರತುಪಡಿಸಿ ಇಡೀ ತಂಡದ ದೃಷ್ಟಿಯಿಂದ ನೋಡಬೇಕಾಗುತ್ತದೆ. ವಾತಾವರಣ ಬೌಲರ್‌ಗಳಿಗೆ ಸಹಾಯಕವಾಗಿದ್ದಿದ್ದು ಸಂತಸ ನೀಡಿತು. ಪ್ರತಿ ಪಂದ್ಯದಲ್ಲಿಯೂ ನಾವು ಹೆಚ್ಚಾಗಿ ಕಲಿಯುತ್ತಾ ಹೋಗುತ್ತೇವೆ. ಪರಿಪೂರ್ಣ ಪಂದ್ಯಕ್ಕಾಗಿ ಹುಡುಕಾಡುತ್ತೇವೆ. ಈ ಪಂದ್ಯದಲ್ಲಿ ಸಂಕಷ್ಟದಲ್ಲಿಯೂ ಐರ್ಲೆಂಡ್ ಹೋರಾಡಿದ ರೀತಿಗೆ ಪ್ರಶಂಸಿಸಬೇಕು" ಎಂದಿದ್ದಾರೆ ನಾಯಕ ಬೂಮ್ರಾ.

"ಬಹಳ ಸಂತಸವಾಗುತ್ತದೆ. ಎನ್‌ಸಿಎನಲ್ಲಿ ಸಾಕಷ್ಟು ಸಮಯ ತಾಲೀಮು ನಡೆಸಿದ್ದೇನೆ. ಹಾಗಾಗಿ ಕ್ರಿಕೆಟ್‌ನಿಂದ ದೂರವಾಗಿದ್ದೇನೆ ಎಂಬ ಭಾವನೆ ಮೂಡಿರಲಿಲ್ಲ. ಈಗ ಮತ್ತೆ ಅಂಗಳಕ್ಕಿಳಿದು ಆಟವಾಡುತ್ತಿರುವುದಕ್ಕೆ ಬಹಳ ಸಂತಸವಾಗುತ್ತದೆ. ಇಲ್ಲಿ ತಂಡಕ್ಕೆ ನೆರವಾಗುವುವು ಯಾವಾಗಲೂ ಖುಷಿ ನೀಡುವ ವಿಚಾರ" ಎಂದಿದ್ದಾರೆ ಜಸ್ಪ್ರೀತ್ ಬೂಮ್ರಾ.

ಈ ಪಂದ್ಯದಲ್ಲಿ ಮೊದಲಿಗೆ ಬೌಲಿಂಗ್ ನಡೆಸಿದ ಟೀಮ್ ಇಂಡಿಯಾ ಐರ್ಲೆಂಡ್ ತಂಡವನ್ನು 139 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ನಾಯಕ ಜಸ್ಪ್ರೀತ್ ಬೂಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ ಕಬಳಿಸಿ ಗಮನಸೆಳೆದರು. ಒಂದು ವಿಕೆಟ್ ಅರ್ಶ್‌ದೀಪ್ ಸಿಂಗ್ ಪಾಲಾಗಿತ್ತು.

ಟೀಮ್ ಇಂಡಿಯಾ ಆಡುವ ಬಳಗ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ(ನಾಯಕ), ರವಿ ಬಿಷ್ಣೋಯ್

ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್(ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್

Story first published: Saturday, August 19, 2023, 9:13 [IST]
Other articles published on Aug 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+