Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs IRE: ವೈಭವ್ ಸೂರ್ಯವಂಶಿ ಆಕರ್ಷಣೆ; ಪಂದ್ಯವನ್ನು ವೀಕ್ಷಿಸುವುದು ಎಲ್ಲಿ? ಇಲ್ಲಿದೆ ಮಾಹಿತಿ

ಟೀಮ್ ಇಂಡಿಯಾ ಐರ್ಲೆಂಡ್ ಪ್ರವಾಸದ ಮೊದಲ ಟಿ20 ಪಂದ್ಯವನ್ನು ಶುಕ್ರವಾರ ಆಡಲಿದೆ. ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾವನ್ನು ಟಿ20 ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. 15 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ಹೆಸರು ಮಾಡಿರುವ ವೈಭವ್, ರಾಷ್ಟ್ರೀಯ ತಂಡದ ಪರ ಆಡುವ ಕನಸು ಸಹ ಕಾಣುತ್ತಿದ್ದಾರೆ.

ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟವನ್ನು ತೊಡಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡ ಹಾಗೂ ನಾಯಕತ್ವದಿಂದ ಕೈ ಬಿಡಲಾಗಿದೆ. ಇವರಿಂದ ತೆರವಾದ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ತುಂಬಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ನಾಯಕತ್ವದ ಗುಣಗಳ ಮೂಲಕ ಸದ್ದು ಮಾಡಿರುವ ಶ್ರೇಯಸ್, ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನು ಮುನ್ನಡೆಸಲಿದ್ದಾರೆ.

IND vs IRE

ಆರಂಭಿಕರಾಗಿ ಕಣಕ್ಕೆ ಇಳಿಯುವುದು ಯಾರು?

ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಅನುಭವಿ ಹಾಗೂ ಯುವ ಬ್ಯಾಟರ್‌ಗಳ ದಂಡೇ ಇದೆ. ಆರಂಭಿಕರಾಗಿ ಅಭಿಷೇಕ್ ಶರ್ಮಾ ಕಣಕ್ಕೆ ಇಳಿಯುವುದು ಪಕ್ಕಾ. ಆದರೆ ಇವರೊಂದಿಗೆ ಇನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅನುಭವಿ ಸಂಜು ಸ್ಯಾಮ್ಸನ್ ಹಾಗೂ ವೈಭವ್ ಸೂರ್ಯವಂಶಿ ಸಹ ಇದೇ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌ ಶ್ರೇಯಸ್ ಅಯ್ಯರ್‌, ತಂಡದ ಪರ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಬೇಕಿದೆ. ಆಲ್‌ರೌಂಡರ್‌ಗಳಾಗಿ ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಶಿವಂ ದುಬೆ ತಂಡದಲ್ಲಿ ಸ್ಥಾನ ಪಡೆಯಬಹುದು. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು.

ವೇಗದ ಬೌಲರ್‌ ರೂಪದಲ್ಲಿ ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಪ್ರಸಿದ್ಧ್ ಕೃಷ್ಣ ಪವರ್‌ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಬಲ್ಲರು. ಸ್ಪಿನ್ ಬೌಲರ್‌ ರೂಪದಲ್ಲಿ ರವಿ ಬಿಷ್ಣೋಯ್ ಕಾಣಿಸಿಕೊಳ್ಳಲಿದ್ದು ಎದುರಾಳಿಗಳನ್ನು ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಭಾರತ ವಿರುದ್ಧದ ಟಿ20 ಸರಣಿಗೆ ಐರ್ಲೆಂಡ್ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ತಂಡವನ್ನು 29 ವರ್ಷದ ಲೋರ್ಕನ್ ಟಕರ್ ಮುನ್ನಡೆಸುತ್ತಿದ್ದಾರೆ. ಪ್ರಮುಖ ಅನುಭವಿ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದು, ಯುವ ಆಟಗಾರರು ಈ ಅವಕಾಶವನ್ನು ಬಳಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಬಲಿಷ್ಠ ಭಾರತ ತಂಡದ ವಿರುದ್ಧ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ವಿಶ್ವಾಸವನ್ನು ಲೋರ್ಕನ್ ಟಕರ್ ತಿಳಿಸಿದ್ದಾರೆ.

ಐರ್ಲೆಂಡ್‌ ಹಾಗೂ ಭಾರತದ ನಡುವಿನ ಪಂದ್ಯದ ನೇರಪ್ರಸಾರವನ್ನು ನೋಡುವುದು ಎಲ್ಲಿ?

ಐರ್ಲೆಂಡ್‌ ಪ್ರವಾಸದ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಶುಕ್ರವಾರ ಆಡಲಿದ್ದು, ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಪಂದ್ಯ ಆರಂಭಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.

ಐರ್ಲೆಂಡ್‌ ಹಾಗೂ ಭಾರತ ಪಂದ್ಯವನ್ನು ವೀಕ್ಷಿಸುವುದು ಎಲ್ಲಿ?

ಮೊದಲ ಟಿ20 ಪಂದ್ಯವನ್ನು ಸೋನಿ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಸೋನಿ ಲಿವ್ ಆಪ್‌ನಲ್ಲೂ ನೋಡಬಹುದು.

Story first published: Thursday, June 25, 2026, 19:00 [IST]
Other articles published on Jun 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+