Ind vs Ire: ಸರಣಿಯ ಅಂತಿಮ ಪಂದ್ಯ ಗೆದ್ದು ದಾಖಲೆ ಬರೆಯಲು ಸಜ್ಜಾದ ಟೀಮ್ ಇಂಡಿಯಾ
ಭಾರತ ಹಾಗೂ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದೆ. ಮೊದಲ ಎರಡು ಪಂದ್ಯಗಳನ್ನು ಕೂಡ ಗೆದ್ದಿರುವ ಪ್ರವಾಸಿ ಭಾರತ ತಂಡ ಸರಣಿಯನ್ನು ಈಗಾಗಲೇ ತನ್ನ ವಶಕ್ಕೆ ಪಡೆದುಕೊಂಡಿದೆ. ಇದೀಗ ಪಾಲ್ ಸ್ಟಿರ್ಲಿಂಗ್ ನೇತೃತ್ವದ ಐರ್ಲೆಂಡ್ ತಂಡಕ್ಕೆ ಅದರದ್ದೇ ನೆಲದಲ್ಲಿ ವೈಟ್‌ವಾರ್ಶ ಮಾಡುವ ಅದ್ಭುತ ಅವಕಾಶ ಆ ತಂಡದ ಮುಂದಿದೆ. ಇನ್ನು ನಾಯಕನಾಗಿ ಜಸ್ಪ್ರೀತ್ ಬೂಮ್ರಾಗೂ ಮೊದಲ ಟಿ20 ಸರಣಿಯಾಗಿದ್ದು ಈ ಸರಣಿಯಲ್ಲಿ ದಾಖಲೆ ಬರೆಯುವ ಅತ್ಯುತ್ತಮ ಅಕಾಶ ಬೂಮ್ರಾ ಮುಂದಿದೆ.
ಈ ಸರಣಿಯ ಅಂತಿಮ ಪಂದ್ಯವನ್ನು ಗೆದ್ದರೆ ಭಾರತ ವಿಶೇಷ ದಾಖಲೆಯೊಂದನ್ನು ಬರೆದಂತಾಗುತ್ತದೆ. ಈ ಪಂದ್ಯವನ್ನು ಗೆದ್ದರೆ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡ 9ನೇ ಸರಣಿ ಇದಾಗಿರಲಿದೆ. ಈ ಮೂಲಕ ವಿಶೇಷ ದಾಖಲೆ ಬರೆಯುವ ಅವಕಾಶ ಭಾರತೀಯ ಕ್ರಿಕೆಟ್ ತಂಡದ ಮುಂದಿದೆ.

2019-29ರಲ್ಲಿ ಭಾರತ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗ ಆಡಿದ 5 ಪಂದ್ಯಗಳಲ್ಲಿ ಐದರಲ್ಲಿಯೂ ಗೆದ್ದುಕೊಂಡಿತ್ತು. ಈ ಸರಣಿ ಹೊರತುಪಡಿಸಿ ವೈಟ್‌ವಾಶ್ ಮಾಡಿದ ಉಳಿದ 7 ದ್ವಿಪಕ್ಷೀಯ ಸರಣಿಗಳು ಮೂರು ಪಂದ್ಯಗಳ ಸರಣಿಗಳಾಗಿದೆ. 2016ರಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು ಅದರದ್ದೇ ನೆಲದಲ್ಲಿ ವೈಟ್‌ವಾರ್ಶ ಮಾಡುವ ಮೂಲಕ ಮೊದಲ ಬಾರಿಗೆ ಟಿ20 ಸರಣಿಯಲ್ಲಿ ವೈಟ್‌ವಾಶ್ ಸರಣಿ ಗೆಲುವು ಸಾಧಿಸಿತ್ತು. ಅದಾದ ಬಳಿಕ ಭಾರತ ತಂಡ ಶ್ರೀಲಂಕಾವನ್ನು ಎರಡು ಬಾರಿ, ವೆಸ್ಟ್ ಇಂಡೀಸ್ ಮೂರು ಬಾರಿ ಹಾಗೂ ನ್ಯೂಜಿಲೆಂಡ್ ತಂಡವನ್ನು ಎರಡು ಬಾರಿ ವೈಟ್‌ವಾಶ್ ಮಾಡಿದೆ. ಈ ಮೂಲಕ ಈಗಾಗಲೇ 8 ಬಾರಿ ವೈಟ್‌ವಾಶ್ ಮಾಡಿದ ಸಾಧನೆ ಮಾಡಿದೆ.
ಇನ್ನು ಭಾರತವನ್ನು ಹೊರತುಪಡಿಸಿದರೆ ಪಾಕಿಸ್ತಾನ ತಂಡ ಮಾತ್ರವೇ ಟಿ20 ಮಾದರಿಯಲ್ಲಿ 8 ಬಾರಿ ವೈಟ್‌ವಾಶ್ ಮೂಲಕ ಸರಣಿಯನ್ನು ವಶಕ್ಕೆ ಪಡೆದುಕೊಂಡ ತಂಡವಾಗಿದೆ. ಈ ಪಂದ್ಯವನ್ನು ಭಾರತ ಗೆದ್ದರೆ ಅತಿ ಹೆಚ್ಚು ಬಾರಿ ಮೂರಕ್ಕೂ ಅಧಿಕ ಪಂದ್ಯಗಳ ಟಿ20 ಸರಣಿಯನ್ನು ವೈಟ್‌ವಾಶ್ ಮಾಡಿದ ತಂಡ ಎಂಬ ವಿಶ್ವದಾಖಲೆಯನ್ನು ಬರೆಯಲಿದೆ ಭಾರತ.
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೇರ್, ರಾಸ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್
ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications